ನವದೆಹಲಿ: ಲಂಡನ್ನಲ್ಲಿ ತಲೆಮರೆಸಿಕೊಂಡಿರುವ ಉದ್ಯಮಿ ವಿಜಯ್ ಮಲ್ಯ ಕೇಂದ್ರ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸಿದ್ದು, ತಮ್ಮಿಂದಲೂ ಹಣ ವಾಪಸ್ ಪಡೆದುಕೊಳ್ಳುವಂತೆ ಟ್ವೀಟ್ ಮೂಲಕ ಮನವಿ ಮಾಡಿದ್ದಾರೆ.
ಆರ್ಥಿಕ ಪ್ಯಾಕೇಜ್ ಅಭಿನಂದಿಸಿ, ಸರ್ಕಾರ ನನ್ನಿಂದಲೂ ಹಣ ಪಡೆದುಕೊಳ್ಳಲಿ ಎಂದ ವಿಜಯ್ ಮಲ್ಯ - ಕೇಂದ್ರ ಸರ್ಕಾರದ ವಿಶೇಷ ಪ್ಯಾಕೇಜ್
'ಕೊರೊನಾ ವೈರಸ್ ಬಿಕ್ಕಟ್ಟಿನ ನಡುವೆ ಕೇಂದ್ರ ಸರ್ಕಾರ ಆರ್ಥಿಕ ಪ್ಯಾಕೇಜ್ ಘೋಷಿಸಿರುವುದು ಸ್ವಾಗತಾರ್ಹ. ಸರ್ಕಾರ ತಾನು ಬಯಸಿದಷ್ಟು ಹಣ ಮುದ್ರಿಸಬಹುದಾಗಿದೆ. ಆದರೆ ಸಣ್ಣ ಕೊಡುಗೆದಾರನಾಗಿರುವ ನನ್ನನ್ನು ಈ ರೀತಿ ನಿರ್ಲಕ್ಷಿಸಬಹುದೇ?. ಸ್ಟೇಟ್ ಬ್ಯಾಂಕ್ನಿಂದ ಪಡೆದ ಹಣ ಹಿಂದಿರುಗಿಸಲು ಯಾವುದೇ ಷರತ್ತು ವಿಧಿಸದೆ ವಾಪಸ್ ಪಡೆದುಕೊಳ್ಳಿ. ಇದರ ಜತೆಗೆ ನನ್ನ ವಿರುದ್ಧದ ಪ್ರಕರಣಕ್ಕೆ ಅಂತ್ಯ ಹೇಳಿ': ವಿಜಯ್ ಮಲ್ಯ
![ಆರ್ಥಿಕ ಪ್ಯಾಕೇಜ್ ಅಭಿನಂದಿಸಿ, ಸರ್ಕಾರ ನನ್ನಿಂದಲೂ ಹಣ ಪಡೆದುಕೊಳ್ಳಲಿ ಎಂದ ವಿಜಯ್ ಮಲ್ಯ Vijay Mallya](https://etvbharatimages.akamaized.net/etvbharat/prod-images/768-512-7191243-thumbnail-3x2-wdfdffdf.jpg)
Vijay Mallya
ಕೊರೊನಾ ವೈರಸ್ ಬಿಕ್ಕಟ್ಟಿನ ನಡುವೆ ಕೇಂದ್ರ ಸರ್ಕಾರ ಆರ್ಥಿಕ ಪ್ಯಾಕೇಜ್ ಘೋಷಿಸಿರುವುದು ಸ್ವಾಗತಾರ್ಹ. ಸರ್ಕಾರ ತಾನು ಬಯಸಿದಷ್ಟು ಹಣ ಮುದ್ರಿಸಬಹುದಾಗಿದೆ. ಆದರೆ ಸಣ್ಣ ಕೊಡುಗೆದಾರನಾಗಿರುವ ನನ್ನನ್ನು ಈ ರೀತಿ ನಿರ್ಲಕ್ಷಿಸಬಹುದೇ?. ಸ್ಟೇಟ್ ಬ್ಯಾಂಕ್ನಿಂದ ಪಡೆದ ಹಣ ಹಿಂದಿರುಗಿಸಲು ಯಾವುದೇ ಷರತ್ತು ವಿಧಿಸದೆ ವಾಪಸ್ ಪಡೆದುಕೊಳ್ಳಿ. ಇದರ ಜತೆಗೆ ನನ್ನ ವಿರುದ್ಧದ ಪ್ರಕರಣಕ್ಕೆ ಅಂತ್ಯ ಹೇಳಿ ಎಂದು ಕೇಂದ್ರ ಸರ್ಕಾರವನ್ನು ಕೋರಿಕೊಂಡಿದ್ದಾರೆ.
ಭಾರತೀಯ ಬ್ಯಾಂಕುಗಳಿಗೆ ಸುಮಾರು 9,000 ಕೋಟಿ ರೂ ವಂಚಿಸಿ ವಿದೇಶಕ್ಕೆ ಪರಾರಿಯಾಗಿರುವ ಮಲ್ಯ ಸದ್ಯ ಲಂಡನ್ನಲ್ಲಿ ವಾಸವಿದ್ದಾರೆ.