ಆಗ್ರಾ(ಉತ್ತರಪ್ರದೇಶ):ವಿಶ್ವಪರಂಪರೆಯ ತಾಣ ತಾಜ್ಮಹಲ್ ಆವರಣದೊಳಗೆ ಇಬ್ಬರು ವ್ಯಕ್ತಿಗಳು ಕೇಸರಿ ಧ್ವಜ ಹಾರಾಟ ಮಾಡಿರುವ ವಿಡಿಯೋ ವೈರಲ್ ಆಗಿದ್ದು, ಇದೀಗ ಅದರ ಭದ್ರತೆ ಬಗ್ಗೆ ಗಂಭೀರ ಪ್ರಶ್ನೆ ಉದ್ಭವವಾಗಿದೆ.
ತಾಜ್ ಮಹಲ್ನಲ್ಲಿ ಕೇಸರಿ ಧ್ವಜ ಹಾರಿಸಿದ ವ್ಯಕ್ತಿ: ವಿಡಿಯೋ ವೈರಲ್, ಭದ್ರತೆ ಬಗ್ಗೆ ಪ್ರಶ್ನೆ ಉದ್ಭವ - ಉತ್ತರಪ್ರದೇಶ ಸುದ್ದಿ
ಉತ್ತರಪ್ರದೇಶದ ತಾಜ್ಮಹಲ್ ಮುಂದೆ ನಿಂತುಕೊಂಡು ಇಬ್ಬರು ವ್ಯಕ್ತಿಗಳು ಕೇಸರಿ ಧ್ವಜ ಹಾರಾಟ ನಡೆಸಿ, ಕೆಲವೊಂದು ಘೋಷಣೆ ಕೂಗಿರುವ ಘಟನೆ ನಡೆದಿದೆ.
![ತಾಜ್ ಮಹಲ್ನಲ್ಲಿ ಕೇಸರಿ ಧ್ವಜ ಹಾರಿಸಿದ ವ್ಯಕ್ತಿ: ವಿಡಿಯೋ ವೈರಲ್, ಭದ್ರತೆ ಬಗ್ಗೆ ಪ್ರಶ್ನೆ ಉದ್ಭವ](https://etvbharatimages.akamaized.net/etvbharat/prod-images/768-512-4399243-thumbnail-3x2-wdfdf.jpg)
ಉತ್ತರಪ್ರದೇಶದ ಆಗ್ರಾದಲ್ಲಿರುವ ತಾಜ್ಮಹಲ್ ಮುಂದೆ ನಿಂತು ಇಬ್ಬರು ಕೈಯಲ್ಲಿ ಕೇಸರಿ ಧ್ವಜ ಹಿಡಿದು ಹಾರಾಟ ನಡೆಸಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಈ ವಿಡಿಯೋ ವೈರಲ್ ಆಗಿದ್ದು, ತಾಜ್ಮಹಲ್ ಆವರಣದೊಳಗೆ ಕೇಸರಿ ಧ್ವಜದೊಂದಿಗೆ ವಿಡಿಯೋಗೆ ಪೋಸ್ ಕೂಡ ನೀಡಿದ್ದಾರೆ.
ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಭದ್ರತೆಯ ಕೊರತೆ ಕಂಡುಬರುತ್ತಿದೆ ಎಂದು ಹೇಳಲಾಗುತ್ತಿದ್ದು, ಅಧಿಕಾರಿಗಳು ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದಾರೆ. ಈ ಹಿಂದೆ ಜುಲೈ ತಿಂಗಳಲ್ಲೂ ಮಹಿಳೆಯೋರ್ವರು ತಾಜ್ಮಹಲ್ದೊಳಗೆ ಪ್ರವೇಶ ಪಡೆದುಕೊಂಡು ಇದೊಂದು ಶಿವ ದೇವಾಲಯ ಎಂದು ಹೇಳಿದ್ದರು. ಆದರೆ ಧಾರ್ಮಿಕ ಭಾವನೆ ಉಲ್ಲಂಘನೆ ಮಾಡಿದ ಆರೋಪದ ಮೇಲೆ ಅವರ ಬಂಧನ ಮಾಡಲಾಗಿತ್ತು.