ಜೈಪುರ್(ರಾಜಸ್ಥಾನ):ಯುವಕನೊಬ್ಬ ಮಹಿಳೆ ಜತೆ ಸೇರಿ ಟಿಕ್ ಟಾಕ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದರಿಂದ ಆಕ್ರೋಶಗೊಂಡ ಆಕೆಯ ಅಣ್ಣ ಹಾಗೂ ಸ್ಥಳೀಯರು ವ್ಯಕ್ತಿ ಮೇಲೆ ಅಮಾನವೀಯ ರೀತಿಯಲ್ಲಿ ಹಲ್ಲೆ ನಡೆಸಿರುವ ಘಟನೆ ನಡೆದಿದೆ.
ಕಳೆದ ಶನಿವಾರ ಈ ಘಟನೆ ನಡೆದಿದ್ದು, ಜವಾಹರ್ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಮಹಿಳೆ ಅಣ್ಣ ಹಾಗೂ ಕೆಲ ಸ್ಥಳೀಯರು ಯುವಕನ ಬಟ್ಟೆ ಕಳೆದು ಹಿಗ್ಗಾಮುಗ್ಗಾ ಥಳಿಸಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.