ಕರ್ನಾಟಕ

karnataka

ETV Bharat / bharat

ಯೋಧರಿಗೆ ಸೆಲ್ಯೂಟ್​ ಹೊಡೆದ ಪೋರ... ನೆಟ್ಟಿಗರ ಮನ ಗೆದ್ದ ಚೋರ! - ಸೈನ್ಯಕ್ಕೆ ಸೆಲ್ಯೂಟ್​ ಹೊಡೆ ಬಾಲಕನ ವಿಡಿಯೋ ವೈರಲ್

ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬುದಕ್ಕೆ ಈ ಬಾಲಕ ಸಾಕ್ಷಿಯಾಗಿದ್ದಾನೆ. ಎಳೆ ವಯಸ್ಸಿನಲ್ಲಿಯೇ ದೇಶ ಕಾಯುವ ಯೋಧರಿಗೆ ಸೆಲ್ಯೂಟ್​ ಮಾಡಿರುವ ಈ ಪುಟಾಣಿ ಬಾಲಕನ ವಿಡಿಯೋ ಸದ್ಯ ವೈರಲ್​ ಆಗಿದೆ.

ಸೈನ್ಯಕ್ಕೆ ಸೆಲ್ಯೂಟ್​ ಹೊಡೆದ ಪೋರ
ಸೈನ್ಯಕ್ಕೆ ಸೆಲ್ಯೂಟ್​ ಹೊಡೆದ ಪೋರ

By

Published : Oct 12, 2020, 12:03 PM IST

ಚುಶುಲ್:ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್ (ಐಟಿಬಿಪಿ) ಹಂಚಿಕೊಂಡಿರುವ ವಿಡಿಯೋವೊಂದರಲ್ಲಿ ಬಾಲಕನೊಬ್ಬ ಸೈನಿಕರಿಗೆ ಸೆಲ್ಯೂಟ್​ ಹೊಡೆಯುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ಐಟಿಬಿಪಿಯ ಅಧಿಕೃತ ಟ್ವಿಟರ್ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಭದ್ರತಾ ಸಿಬ್ಬಂದಿ ಹಾದು ಹೋಗುವಾಗ ನಮಗ್ಯಾಲ್ ಎಂಬ ಹುಡುಗ ಲಡಾಖ್‌ನ ಲೇಹ್ ಜಿಲ್ಲೆಯ ಚುಶುಲ್‌ನಲ್ಲಿ ರಸ್ತೆ ಬದಿಯಲ್ಲಿ ನಿಂತು ದೇಶ ಕಾಯುವ ಯೋಧರಿಗೆ ಸೆಲ್ಯೂಟ್​ ಹೊಡೆದಿದ್ದಾನೆ. ಈ ಪುಟ್ಟ ಪೋರನ ವಿಡಿಯೋ ನೋಡುಗರ ಗಮನ ಸೆಳೆಯುತ್ತಿದೆ.

ಭಾನುವಾರ ಪೋಸ್ಟ್ ಮಾಡಲಾದ ಈ ವಿಡಿಯೋ ಈಗಾಗಲೇ 13,000 ವೀಕ್ಷಣೆ ಗಳಿಸಿದೆ. ಮಾತ್ರವಲ್ಲದೆ ಅನೇಕ ಜನರ ಮನ ಗೆಲ್ಲುತ್ತಿದೆ.

ABOUT THE AUTHOR

...view details