ಕರ್ನಾಟಕ

karnataka

ETV Bharat / bharat

ಪಾಕ್​ನ ಬ್ಯಾಟ್​ ಸೇನೆ ಹೊಡೆದುರುಳಿಸಿ, ವಿಡಿಯೋ ರಿಲೀಸ್​ ಮಾಡಿದ ಭಾರತೀಯ ಸೇನೆ! - ಆರ್ಟಿಕಲ್​ 370

ಭಾರತದ ಗಡಿಯೊಳಗೆ ನುಸುಳುತ್ತಿದ್ದ ಪಾಕಿಸ್ತಾನ ಬ್ಯಾಟ್​​​ ಸೇನೆಯ ಕೆಲ ಸೈನಿಕರನ್ನ ಭಾರತೀಯ ಸೇನೆ ಯಶಸ್ವಿಯಾಗಿ ಹೊಡೆದುರುಳಿಸಿದ್ದು, ಇದೀಗ ಅದರ ವಿಡಿಯೋ ರಿಲೀಸ್​ ಮಾಡಿದೆ.

ಇಂಡಿಯನ್​ ಆರ್ಮಿಯಿಂದ ವಿಡಿಯೋ ರಿಲೀಸ್​​

By

Published : Sep 9, 2019, 9:44 PM IST

ನವದೆಹಲಿ:ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸುವ ಆರ್ಟಿಕಲ್​ 370 ರದ್ಧುಗೊಂಡ ಬಳಿಕ ಮೇಲಿಂದ ಮೇಲೆ ಭಾರತದೊಳಗೆ ನುಸುಳಲು ಪಾಕ್​ ವಿಫಲ ಪ್ರಯತ್ನ ನಡೆಸುತ್ತಿದ್ದು, ಇದೀಗ ಪಾಕ್​​ನ ಬ್ಯಾಟ್​ ಸೇನೆಯ ಕೆಲ ಸೈನಿಕರನ್ನ ಹೊಡೆದುರುಳಿಸುವಲ್ಲಿ ಭಾರತೀಯ ಸೇನೆ ಯಶಸ್ವಿಯಾಗಿದ್ದು, ಅದರ ವಿಡಿಯೋ ರಿಲೀಸ್​ ಮಾಡಿದೆ.

ಆಗಸ್ಟ್​ ತಿಂಗಳ ಮೊದಲ ವಾರದಲ್ಲಿ ಭಾರತದ ಕೆರನ್​ ಸೆಕ್ಟರ್​​ನ ಕುಪ್ವಾರ್​​ ಗಡಿಯೊಳಗೆ ನುಸುಳಲು ಯತ್ನಿಸಿದ್ದ ಐವರು ಬ್ಯಾಟ್​ ಸೇನೆಯ ಸೈನಿಕರನ್ನ ಭಾರತೀಯ ಸೇನೆ ಹೊಡೆದುರುಳಿಸಿದೆ. ಈ ಕಾರ್ಯಾಚರಣೆಯ ವಿಡಿಯೋವನ್ನು ಭಾರತೀಯ ಸೇನೆ ಇದೀಗ ರಿಲೀಸ್​ ಮಾಡಿದೆ.

ಇಂಡಿಯನ್​ ಆರ್ಮಿಯಿಂದ ವಿಡಿಯೋ ರಿಲೀಸ್​​

ಇಂಡಿಯನ್​ ಆರ್ಮಿ ಬಿಡುಗಡೆ ಮಾಡಿರುವ 1 ನಿಮಿಷ 52 ಸೆಕೆಂಡ್ ವಿಡಿಯೋದಲ್ಲಿ ಭಾರತದೊಳಗೆ ನುಸುಳಲು ಯತ್ನಿಸುತ್ತಿದ್ದ ಪಾಕಿಸ್ತಾನ ಬ್ಯಾಟ್ ತಂಡದ ಸಿಬ್ಬಂದಿಯ ಹತ್ಯೆ ಮಾಡಲಾಗಿದ್ದು, ಮೃತದೇಹಗಳು ಬಿದ್ದಿವೆ. ಅರಣ್ಯ ಪ್ರದೇಶದ ಬಂಡೆಯ ಮೇಲೆ ಹಾಗೂ ಮಧ್ಯೆ ಮೃತದೇಹಗಳು ಬಿದ್ದಿವೆ.

ಈ ಹಿಂದೆ ಕೂಡ ಭಾರತದ ಗಡಿಯೊಳಗೆ ನುಗ್ಗಲು ಯತ್ನಿಸಿದ್ದ ಬ್ಯಾಟ್​​ ಯೋಧರನ್ನ ಭಾರತೀಯ ಸೇನೆ ಹೊಡೆದುರುಳಿಸಿತ್ತು. ಆ ವೇಳೆ ಮೃತದೇಹಗಳನ್ನು ತೆಗೆದುಕೊಂಡು ಹೋಗುವಂತೆ ಭಾರತ ಸೂಚನೆ ಸಹ ನೀಡಿತ್ತು.

ABOUT THE AUTHOR

...view details