ಔರಂಗಬಾದ್ (ಮಹಾರಾಷ್ಟ್ರ): ಬೈಕ್ ಚಲಾಯಿಸುತ್ತಾ ಇಬ್ಬರು ಪುರುಷರು ನಾಯಿಯೊಂದನ್ನು ಸುಮಾರು ಒಂದು ಕಿ.ಮೀ ದೂರ ಎಳೆದೊಯ್ದಿರುವ ಅಮಾನವೀಯ ಘಟನೆ ಔರಂಗಾಬಾದ್ನಲ್ಲಿ ನಡೆದಿದೆ.
ಸರಪಳಿ ಬಿಗಿದು ನಾಯಿಯನ್ನು 1ಕಿ.ಮೀ ಎಳೆದೊಯ್ದ ದುರುಳರ ವಿರುದ್ಧ ಪ್ರಕರಣ - ಅಲಿಗರ್
ಪ್ರಾಣಿಗಳ ಮೇಲೆ ಮನುಷ್ಯನ ದೌರ್ಜನ್ಯ ದಿನೇ ದಿನೇ ಹೆಚ್ಚಾಗುತ್ತಿದೆ. ಕೇರಳದ ಗರ್ಭಿಣಿ ಆನೆ ಸಾವು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿ ಮಾಡಿತ್ತು. ಆದರೆ ಆ ಘಟನೆ ಜನಮಾನಸದಿಂದ ಮಾಸುವ ಮುನ್ನವೇ ಮತ್ತೆ ಇದೇ ರೀತಿಯ ಅಮಾನವೀಯ ಘಟನೆಗಳು ನಡೆಯುತ್ತಿವೆ.
ನಾಯಿಯ ಕುತ್ತಿಗೆಗೆ ಸರಪಳಿಯಿಂದ ಬಿಗಿದು ಬೈಕ್ ಹತ್ತಿದ ಯುವಕರು ಹಾಗೆಯೇ 1ಕಿ.ಮೀ ದೂರ ಎಳೆದೊಯ್ದಿರುವ ವಿಡಿಯೋ ವೈರಲ್ ಆಗಿತ್ತು. ಔರಂಗಬಾದ್ ಪೊಲೀಸರು ಇಬ್ಬರು ಯುವಕರ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ.
ಇದೇ ತರಹದ ಇನ್ನೊಂದು ಘಟನೆಗೆ ಉತ್ತರ ಪ್ರದೇಶದ ಅಲಿಢದಲ್ಲಿ ನಡೆದಿದೆ. ಅಲ್ಲಿ ನಾಯಿಯೊಂದನ್ನು ಜನರ ಗುಂಪೊಂದು ಹೊಡೆದು ಸಾಯಿಸಿತ್ತು. ಘಟನೆಯ ವಿಡಿಯೋ ವೈರಲ್ ಆಗಿದೆ. ಈ ಘಟನೆ ಚಾರ್ರಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ ಎಂದು ತಿಳಿದುಬಂದಿದೆ. ಘಟನಾ ಸ್ಥಳದಲ್ಲಿದ್ದ ಜನರು ಮತ್ತು ಸ್ಥಳದ ವಿವರಗಳನ್ನು ಪತ್ತೆ ಮಾಡಲಾಗುತ್ತಿದೆ. ಈ ಬಗ್ಗೆ ಮಾಹಿತಿ ಪಡೆದ ಕೂಡಲೇ ಆರೋಪಿಗಳ ವಿರುದ್ಧ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಗ್ರಾಮೀಣ ಪೊಲೀಸ್ ಅಧೀಕ್ಷಕ ಅತುಲ್ ಶರ್ಮಾ ತಿಳಿಸಿದರು.