ಸೇಲಂ(ತಮಿಳುನಾಡು):ಆರು ಅಡಿ ಉದ್ದದ ಹಾವು ಕತ್ತರಿಸಿ, ಬೇಯಿಸಿ ಪಲ್ಯ ಮಾಡಿ ತಿಂದಿರುವ ಘಟನೆ ತಮಿಳುನಾಡಿನ ಸೇಲಂನಲ್ಲಿ ನಡೆದಿದೆ. ಇದೀಗ ಅದರ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದೆ.
ಆರು ಅಡಿ ಉದ್ದದ ಹಾವು ಕತ್ತರಿಸಿ, ಬೇಯಿಸಿ ಪಲ್ಯ ಮಾಡಿ ತಿಂದ್ರು... ವಿಡಿಯೋ ವೈರಲ್ - ಆರು ಅಡಿ ಉದ್ದದ ಹಾವು
ನಾಲ್ವರು ಯುವಕರು ಮೀನಿನ ರೀತಿಯಲ್ಲಿ ಆರು ಅಡಿ ಉದ್ದದ ಹಾವು ಕತ್ತರಿಸಿ, ಅದನ್ನ ಬೇಯಿಸಿ ಪಲ್ಯ ಮಾಡಿ ತಿಂದಿದ್ದಾರೆ.
cooking and eating snake
ಸೇಲಂ ಜಿಲ್ಲೆಯ ಮೆಟ್ಟೂರು ಬಳಿಯ ತಂಗಪುರಿ ಪಟ್ಟಣದ ವನಪಾತ್ರ ಕಲಿಯಮ್ಮನ್ ದೇವಸ್ಥಾನದಲ್ಲಿ ನಾಲ್ವರು ಯುವಕರು ಮೀನಿನ ರೀತಿಯಲ್ಲಿ ಆರು ಅಡಿ ಉದ್ದದ ಹಾವು ಕತ್ತರಿಸಿ, ಅದನ್ನ ಬೇಯಿಸಿ ಪಲ್ಯ ಮಾಡಿ ತಿಂದಿದ್ದಾರೆ. ಇದರ ವಿಡಿಯೋವನ್ನ ಸೆರೆ ಹಿಡಿದಿರುವ ಯುವಕನೋರ್ವ ಸ್ನೇಹಿತರಿಗೆ ಕಳುಹಿಸಿದ್ದಾನೆ. ಸದ್ಯ ಅದರ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ.
ಮಾಹಿತಿ ಗೊತ್ತಾಗುತ್ತಿದ್ದಂತೆ ಎಚ್ಚೆತ್ತುಕೊಂಡಿರುವ ಅರಣ್ಯ ಇಲಾಖೆ ಹಾವು ಬೇಯಿಸಿ ತಿಂದಿರುವ ಯುವಕರಿಗಾಗಿ ಶೋಧಕಾರ್ಯ ನಡೆಸುತ್ತಿದೆ. ಇದರ ಬಂದ ಓರ್ವ ವ್ಯಕ್ತಿಯನ್ನ ಬಂಧನ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.