ನವದೆಹಲಿ:ವಾಲ್ ಸ್ಟ್ರೀಟ್ ಜರ್ನಲ್‌ನಲ್ಲಿ ಪ್ರಕಟವಾದ ಸುಳ್ಳು ವರದಿಯನ್ನು ಮುಂದಿಟ್ಟುಕೊಂಡು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಬಜರಂಗದಳದ ವರ್ಚಸ್ಸು ಕುಂದಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ವಿಶ್ವ ಹಿಂದೂ ಪರಿಷತ್ (ವಿಹೆಚ್‌ಪಿ) ಆರೋಪಿಸಿದೆ.
ಈ ಕುರಿತು ಮಾತನಾಡಿದ ವಿಹೆಚ್‌ಪಿ ಪ್ರಧಾನ ಕಾರ್ಯದರ್ಶಿ ಮಿಲಿಂದ್ ಪರಂಡೆ, ಬಜರಂಗದಳದಂತಹ ರಾಷ್ಟ್ರೀಯತಾವಾದಿ ಸಂಘಟನೆಯು ರಾಹುಲ್ ಗಾಂಧಿಯವರ ಕಣ್ಣು ಕುಕ್ಕುತ್ತಿದೆ. ಅವರು ಚೀನಾ ಪರ, ಪಾಕ್ ಪರ, ತುಕ್ಡೆ - ತುಕ್ಡೆ ಗ್ಯಾಂಗ್, ಸಿಎಎ ವಿರೋಧಿಗಳು, ಗೂಂಡಾಗಳು ಮತ್ತು ದೆಹಲಿ ದಂಗೆಕೋರರ ಪರ ವಾದಿಸುತ್ತ ದೇಶ ವಿರೋಧಿ ಚಟುವಟಿಕೆಗಳ ಪರ ನಿಂತಿದ್ದಾರೆ ಎಂದು ಹೇಳಿದರು.
ವಿಹೆಚ್‌ಪಿ ಪ್ರ, ಕಾರ್ಯದರ್ಶಿ ಮಿಲಿಂದ್ ಪರಂಡೆ ಚೀನಾದೊಂದಿಗಿನ ಅವರ ಒಡನಾಟ ಮತ್ತು ಸಂಬಂಧ ಎಲ್ಲರಿಗೂ ತಿಳಿದಿದೆ. ಅವರು ಅಮೆರಿಕನ್ ಪತ್ರಿಕೆಯೊಂದನ್ನು ನಂಬುತ್ತಾರೆ. ಆದರೆ, ಪ್ಯಾನ್-ಭಾರತ್ನಂತಹ ರಾಷ್ಟ್ರೀಯತಾವಾದಿ ಯುವ ಸಂಘಟನೆಯನ್ನು ನಂಬಲ್ಲ. ಬಜರಂಗದಳದ ವಿರುದ್ಧ ಸುಳ್ಳಾರೋಪ ಮಾಡಿದ ವಾಲ್ ಸ್ಟ್ರೀಟ್ ಜರ್ನಲ್ ಕ್ಷಮೆ ಯಾಚಿಸಬೇಕು. ವಾಲ್ ಸ್ಟ್ರೀಟ್ ಜರ್ನಲ್ ಬಜರಂಗದಳವನ್ನು ಕೆಣಕುವ ನೆಪದಲ್ಲಿ ಭಾರತವನ್ನು ಗುರಿಯಾಗಿಸುವುದು ಸ್ವೀಕಾರರ್ಹವಲ್ಲ ಎಂದು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸೋನಿಯಾ ಗಾಂಧಿ ಕೂಡ ಬಜರಂಗದಳವನ್ನು ನಿಷೇಧಿಸಲು ಸಾಕಷ್ಟು ಪಿತೂರಿಗಳನ್ನು ನಡೆಸಿದ್ದರು. ಆದರೆ, ಅದು ಸಾಧ್ಯವಾಗಿರಲಿಲ್ಲ ಎಂದು ಮಾಧ್ಯಮಗಳ ವರದಿಯಿಂದ ಗೊತ್ತಾಗಿದೆ ಎಂದು ವಿಕಿ-ಲೀಕ್ಸ್‌ನ್ನು ಉಲ್ಲೇಖಿಸಿ ಅವರು ಹೇಳಿದರು.