ಕರ್ನಾಟಕ

karnataka

ETV Bharat / bharat

ಕೊರೊನಾದಿಂದಾಗಿ ಒಡಿಯಾ ಚಿತ್ರರಂಗದ ಹಿರಿಯ ನಟ ಅಜಿತ್ ದಾಸ್ ನಿಧನ - ಎಸ್​ಯುಎಂ

ಕೊರೊನಾ ಸೋಂಕಿನಿಂದಾಗಿ ಒಡಿಯಾ ಸಿನಿಮಾ ರಂಗದ ಹಿರಿಯ ನಟ ಅಜಿತ್ ದಾಸ್ ಮೃತಪಟ್ಟಿದ್ದು, ರಾಜಕೀಯ ಹಾಗೂ ಸಿನಿಮಾ ಕ್ಷೇತ್ರದ ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ.

Ajit Das
ಅಜಿತ್ ದಾಸ್

By

Published : Sep 13, 2020, 8:10 PM IST

ಭುವನೇಶ್ವರ್ (ಒಡಿಶಾ):ಒಡಿಯಾ ಸಿನಿಮಾರಂಗದ ಹಿರಿಯ ನಟ ಅಜಿತ್ ದಾಸ್ (71) ಕೊರೊನಾ ಸೋಂಕಿನಿಂದ ಭುವನೇಶ್ವರದ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

ಕೆಲವು ದಿನಗಳ ಹಿಂದೆ ಇವರಲ್ಲಿ ಕೊರೊನಾ ಸೋಂಕು ದೃಢಪಟ್ಟಿದ್ದು, ಭುವನೇಶ್ವರದ ಎಸ್​ಯುಎಂ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಇಂದು ಚಿಕಿತ್ಸೆ ಫಲಕಾರಿಯಾಗದೇ ಅಜಿತ್ ದಾಸ್ ಕೊನೆಯುಸಿರೆಳೆದಿದ್ದಾರೆ.

ನ್ಯಾಷನಲ್ ಸ್ಕೂಲ್ ಆಫ್ ಡ್ರಾಮಾ (ಎನ್​ಎಸ್​ಡಿ)ಯ ಹಳೆಯ ವಿದ್ಯಾರ್ಥಿಯಾದ ಅವರು 60ಕ್ಕೂ ಹೆಚ್ಚು ಒಡಿಯಾ ಚಿತ್ರಗಳಲ್ಲಿ ಅಭಿನಯಿಸಿದ್ದು, ಹಲವಾರು ಚಿತ್ರಗಳಿಗೆ ನಿರ್ದೇಶನ ಕೂಡಾ ಮಾಡಿದ್ದರು.

1949ರಲ್ಲಿ ಮಯೂರ್​ಭಂಜ್​ ಜಿಲ್ಲೆಯಲ್ಲಿ ಜನಿಸಿದ ಅವರು 1976ರಲ್ಲಿ ಸಿಂಧೂರ ಬಿಂದು ಎಂಬ ಚಿತ್ರದಿಂದ ಸಿನಿ ಪಯಣ ಆರಂಭಿಸಿದ್ದರು.

ಅಜಿತ್ ದಾಸ್ ಅಗಲಿಕೆಗೆ ಸಿಎಂ ನವೀನ್ ಪಟ್ನಾಯಕ್​, ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್, ಪ್ರತಾಪ್ ಸಾರಂಗಿ ಮತ್ತು ಹಲವು ರಾಜಕೀಯ ಗಣ್ಯರು ಹಾಗೂ ಸಿನಿ ಗಣ್ಯರು ಸಂತಾಪ ಸೂಚಿಸಿದ್ದಾರೆ.

ABOUT THE AUTHOR

...view details