ಮುಂಬೈ(ಮಹಾರಾಷ್ಟ್ರ):ಪ್ರಸಿದ್ಧ 'ಕಹಿ ದೂರ್ ಜಬ್ ದಿನ್ ಡಲ್ ಜಾಯೆ'ನಂತಹ ಉತ್ತಮ ಗೀತೆಗಳನ್ನು ರಚಿಸಿದ ಹಿರಿಯ ಗೀತ ರಚನೆಕಾರ ಯೋಗೇಶ್ ಗೌರ್(77) ಶುಕ್ರವಾರ ನಿಧನರಾಗಿದ್ದಾರೆ.
ಖ್ಯಾತ ಗೀತ ರಚನೆಕಾರ ಯೋಗೇಶ್ ಗೌರ್ ಇನ್ನಿಲ್ಲ - ಎವೆರ್ಗ್ರೀನ್ ಸಾಹಿತ್ಯ ಪ್ರಕಾರ
70ರ ದಶಕದ ಹಿಂದಿ ಚಿತ್ರರಂಗದಲ್ಲಿ ಹಲವಾರು ಗೀತೆಗಳನ್ನು ರಚಿಸಿ ಜನ ಹುಬ್ಬೇರಿಸುವಂತೆ ಮಾಡಿದ್ದ ಖ್ಯಾತ ಗೀತ ರಚನೆಕಾರ ಯೋಗೇಶ್ ಗೌರ್ ನಿಧನರಾಗಿದ್ದಾರೆ.
ಯೋಗೇಶ್ 70ರ ದಶಕದ ಹಿಂದಿ ಚಿತ್ರರಂಗದಲ್ಲಿ ಪ್ರಮುಖ ಗೀತ ರಚನೆಕಾರರಾಗಿದ್ದರು. ಹೃಷಿಕೇಶ್ ಮುಖರ್ಜಿ ಮತ್ತು ಬಸು ಚಟರ್ಜಿ ಅವರ ಚಿತ್ರಗಳಲ್ಲಿ ಯೋಗೇಶ್ ಅವರ ಕೆಲವು ಅತ್ಯುತ್ತಮ ಹಾಡುಗಳಿವೆ. ಅವರ ಎವರ್ ಗ್ರೀನ್ ಸಾಹಿತ್ಯ ಪ್ರಕಾರ ಸಂಗೀತ ಪ್ರಿಯರ ನೆನಪಿನಲ್ಲಿ ಸದಾ ಉಳಿಯುವಂತದ್ದಾಗಿದೆ. ಯೋಗೇಶ್ ಅವರ ನಿಧನಕ್ಕೆ ಖ್ಯಾತ ಗಾಯಕಿ ಲತಾ ಮಂಗೇಶ್ಕರ್, ಬರಹಗಾರ-ಗೀತ ರಚನೆಕಾರ ವರುಣ್ ಗ್ರೋವರ್ ಹಾಗೂ ಇತರ ಗಣ್ಯರು, ಸಿನಿಮಾರಂಗ ಸಂತಾಪ ಸೂಚಿಸಿದೆ.
ಲಖನೌದಲ್ಲಿ ಜನಿಸಿದ ಯೋಗೇಶ್ ಗೌರ್ ಕೆಲಸ ಅರಸಿ ತಮ್ಮ 16ನೇ ವಯಸ್ಸಿನಲ್ಲಿ ಸಂಬಂಧಿಕರ ಸಹಾಯದಿಂದ ಮುಂಬೈ ತಲುಪಿದ್ದರು. ನಂತರ ಹಗಲು ರಾತ್ರಿ ಶ್ರಮಿಸಿ ತಮ್ಮ ಕನಸಿನ ಕೆಲಸದಲ್ಲಿ ಯಶಸ್ಸು ಕಂಡರು.