ವಾಷಿಂಗ್ಟನ್ (ಅಮೆರಿಕ) :ಜಪಾನ್ನ ಖ್ಯಾತ ಸಿನಿಮಾ ನಿರ್ಮಾಣಕಾರ ನೊಬುಹಿಕೊ ಒಬಾಯಶಿ ತಮ್ಮ 82ನೇ ವಯಸ್ಸಿನಲ್ಲಿ ಶ್ವಾಸಕೋಶದ ಕ್ಯಾನ್ಸರ್ನಿಂದ ಮೃತಪಟ್ಟಿದ್ದಾರೆ. ತಮ್ಮ ಸಿನಿಮಾ ಜೀವನದಲ್ಲಿ ಸುಮಾರು 3 ಸಾವಿರ ಟಿವಿ ಜಾಹೀರಾತುಗಳನ್ನು ನಿರ್ಮಿಸಿರುವ ಹೆಗ್ಗಳಿಕೆ ಇವರದ್ದಾಗಿದೆ.
ಜಪಾನ್ನ ಖ್ಯಾತ ಸಿನಿಮಾ ನಿರ್ಮಾಣಕಾರ ನೊಬುಹಿಕೊ ಒಬಾಯಶಿ ನಿಧನ - ಶ್ವಾಸಕೋಶದ ಕ್ಯಾನ್ಸರ್
ಶ್ವಾಸಕೋಶ ಕ್ಯಾನ್ಸರ್ನಿಂದ ಬಳಲುತ್ತಿದ್ದ ಜಪಾನ್ನ ಖ್ಯಾತ ಸಿನಿಮಾ ನಿರ್ಮಾಣಕಾರ ನೊಬುಹಿಕೊ ಒಬಾಯಶಿ ಇಂದು ಸಾವನ್ನಪ್ಪಿದ್ದಾರೆ. ತಮ್ಮ ಸಿನಿಮಾ ಜೀವನದಲ್ಲಿ ಸುಮಾರು 3 ಸಾವಿರ ಟಿವಿ ಜಾಹೀರಾತುಗಳನ್ನು ನಿರ್ಮಿಸಿರುವ ಹೆಗ್ಗಳಿಕೆ ಇವರದ್ದಾಗಿದೆ.
1977ರಲ್ಲಿ ಬಂದ ''ಹೌಸ್'' ಎಂಬ ಹಾರರ್ ಫ್ಯಾಂಟಸಿ ಚಿತ್ರ ಇವರ ಮೊದಲ ಸಿನಿಮಾ ಆಗಿದ್ದು, ಜಪಾನ್ನಲ್ಲಿ ಮಾತ್ರವಲ್ಲದೇ ವಿದೇಶಗಳಲ್ಲೂ ಮೆಚ್ಚುಗೆಗೆ ಪಾತ್ರವಾಗಿತ್ತು.
ಒಬಾಯಶಿ ಅವರಿಗೆ ಆಗಸ್ಟ್ 2016ರಂದು ಶ್ವಾಸಕೋಶ ಕ್ಯಾನ್ಸರ್ ಪತ್ತೆಯಾಗಿತ್ತು. ಕ್ಯಾನ್ಸರ್ ನಾಲ್ಕನೇ ಹಂತದಲ್ಲಿದ್ದ ಕಾರಣ ಕೇವಲ ಮೂರು ತಿಂಗಳು ಬದುಕಬಹುದೆಂದು ಹೇಳಲಾಗಿತ್ತು. ಈ ವೇಳೆಯೂ ಅವರು ಸಿನಿಮಾ ನಿರ್ಮಾಣದಲ್ಲಿ ತೊಡಗಿಸಿಕೊಂಡಿದ್ದರು. 2017ರಲ್ಲಿ ಹನಗಟಮಿ ಹಾಗೂ ಈ ವರ್ಷ ಲಿಬ್ರಿಂತ್ ಆಫ್ ಸಿನಿಮಾ ಎಂಬ ಸಿನಿಮಾ ನಿರ್ಮಿಸಿದ್ದರು. ಲಿಬ್ರಿಂತ್ ಆಫ್ ಸಿನಿಮಾ ಕೊರೊನಾ ಹಾವಳಿ ಕಾರಣಕ್ಕೆ ಬಿಡುಗಡೆಯಾಗೊದು ಮುಂದೂಡಿಕೆಯಾಗಿದೆ.