ದೆಹಲಿ: ಖಾಸಗಿ ವಲಯದವರ ನೆರವಿನಿಂದ ದೇಶದಲ್ಲೇ ಕೋವಿಡ್ ಲಸಿಕೆ ತಯಾರಿಸುವ ಸಾಧ್ಯತೆಯಿದೆ ಎಂದು ಬಿಲ್ ಮತ್ತು ಮೆಲಿಂಡಾ ಗೇಟ್ಸ್ ಫೌಂಡೇಶನ್ ಸಿಇಒ ಮಾರ್ಕ್ ಸುಜ್ಮಾನ್ ಹೇಳಿದ್ದಾರೆ.
ಕೋವಿಡ್ ವಿರುದ್ಧ ಹೋರಾಡಲು ಭಾರತ ಸಾಧ್ಯವಾದಷ್ಟು ಕ್ರಮಗಳನ್ನು ಕೈಗೊಂಡಿದೆ. ಇದೊಂದು ಜಾಗತಿಕ ಬಿಕ್ಕಟ್ಟಾಗಿ ಪರಿಣಮಿಸಿರುವುದರಿಂದ ನಾವೀಗ ಎಲ್ಲ ದೇಶಗಳಿಗೆ ನೆರವಾಗುವ ಲಸಿಕೆ ಕಂಡು ಹಿಡಿಯಬೇಕು. ವೈರಸ್ ನಿಯಂತ್ರಣಕ್ಕೆ ನಮ್ಮ ಪ್ರತಿಷ್ಠಾನವು ಹಲವು ಹಂತಗಳಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಕೊರೊನಾ ಲಸಿಕೆ ಕಂಡು ಹಿಡಿಯುವ ಸಲುವಾಗಿ ಈಗಾಗಲೇ 125 ದಶಲಕ್ಷ ಡಾಲರ್ಗಳನ್ನು ಸಂಗ್ರಹಿಸಿದ್ದೇವೆ ಎಂದು ಸುಜ್ಮಾನ್ ತಿಳಿಸಿದರು.
ಕೋವಿಡ್ ವ್ಯಾಕ್ಸಿನ್ ಕಂಡು ಹಿಡಿಯುವುದಕ್ಕಾಗಿ ಕೆಲವು ನಿರ್ದಿಷ್ಟ ಹೂಡಿಕೆಗಳನ್ನು ನೇರವಾಗಿ ಬೆಂಬಲಿಸಿದ್ದೇವೆ. ಭಾರತೀಯ ಪಾಲುದಾರರಾದ ಸೀರಮ್ ಇನ್ಸ್ಸ್ಟಿಟ್ಯೂಟ್ ಮತ್ತು ಗವಿ ಸಂಸ್ಥೆಯೊಂದಿಗೆ ನಿರಂತರಸಂಪರ್ಕದಲ್ಲಿದ್ದು, ಲಸಿಕೆ ಕಂಡು ಹಿಡಿಯುವುದರ ಬಗ್ಗೆ ಮಾಹಿತಿ ಪಡೆಯುತ್ತಿದ್ದೇವೆ ಎಂದರು.