ಕರ್ನಾಟಕ

karnataka

ETV Bharat / bharat

ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡುಗೆ ಕೊರೊನಾ ಪಾಸಿಟಿವ್​ - ವೆಂಕಯ್ಯ ನಾಯ್ಡು ಸುದ್ದಿ

ದೇಶದ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರಲ್ಲೂ ಮಹಾಮಾರಿ ಕೊರೊನಾ ವೈರಸ್​ ಕಾಣಿಸಿಕೊಂಡಿದ್ದು, ಇದಕ್ಕೆ ಸಂಬಂಧಿಸಿದಂತೆ ಖುದ್ದಾಗಿ ಟ್ವೀಟ್​ ಮಾಡಿ ಮಾಹಿತಿ ನೀಡಿದ್ದಾರೆ.

Venkaiah Naidu
Venkaiah Naidu

By

Published : Sep 29, 2020, 9:56 PM IST

ನವದೆಹಲಿ: ಮಹಾಮಾರಿ ಕೊರೊನಾ ವೈರಸ್​ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಜನಸಾಮಾನ್ಯರ ಜತೆಗೆ ರಾಜಕೀಯ ಮುಖಂಡರು, ಸಿನಿಮಾ ತಾರೆಯರು ಸೇರಿ ಎಲ್ಲ ವರ್ಗದವರಿಗೂ ಸೋಂಕು ಕಾಣಿಸಿಕೊಳ್ಳುತ್ತಿದೆ.

ಸದ್ಯ ಮಹಾಮಾರಿ ಕೊರೊನಾ ವೈರಸ್​ ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರಿಗೂ ತಗುಲಿದೆ. ಇದಕ್ಕೆ ಸಂಬಂಧಿಸಿದಂತೆ ಖುದ್ದಾಗಿ ಟ್ವೀಟ್ ಮಾಡಿ ಮಾಹಿತಿ ನೀಡಿದ್ದಾರೆ. ಇಂದು ಬೆಳಗ್ಗೆ ಕೊರೊನಾ ಟೆಸ್ಟ್​ ನಡೆಸಿದ ವೇಳೆ ಅವರಿಗೆ ಪಾಸಿಟಿವ್​ ಕಾಣಿಸಿಕೊಂಡಿದ್ದು, ಅವರು ಆರೋಗ್ಯವಾಗಿದ್ದಾರೆ ಎಂದು ತಿಳಿದು ಬಂದಿದೆ. ಈಗಾಗಲೇ ಹೋಂ ಕ್ವಾರಂಟೈನ್​ಗೊಳಗಾಗಿದ್ದು, ಇವರ ಪತ್ನಿ ಶ್ರೀಮತಿ ಉಷಾ ನಾಯ್ಡು ಅವರಿಗೆ ಕೊರೊನಾ ನೆಗೆಟಿವ್​ ಕಾಣಿಸಿಕೊಂಡಿದೆ.

ಕಳೆದ ಕೆಲ ದಿನಗಳ ಹಿಂದೆ ಮಾನ್ಸೂನ್​ ಅಧಿವೇಶನದಲ್ಲಿ ಇವರು ಭಾಗಿಯಾಗಿದ್ದರು. ಆದರೆ, 25 ರಾಜ್ಯಸಭೆಯ ಸದಸ್ಯರಿಗೆ ಕೊರೊನಾ ಕಾಣಿಸಿಕೊಂಡಿದ್ದರಿಂದ ಅರ್ಧದಲ್ಲೇ ಅಧಿವೇಶನ ಮೊಟಕುಗೊಳಿಸಲಾಗಿತ್ತು. ಈ ಹಿಂದೆ ಕೇಂದ್ರ ಗೃಹ ಸಚಿವ ಅಮಿತ್​ ಶಾ ಅವರಲ್ಲೂ ಕೊರೊನಾ ಸೋಂಕು ಕಾಣಿಸಿಕೊಂಡಿತ್ತು. ಚಿಕಿತ್ಸೆ ಪಡೆದುಕೊಂಡು ಅವರು ಸಂಪೂರ್ಣವಾಗಿ ಗುಣಮುಖರಾಗಿ ಡಿಸ್ಚಾರ್ಜ್​ ಆಗಿದ್ದಾರೆ.

ABOUT THE AUTHOR

...view details