ನವದೆಹಲಿ: ಸಾವರ್ಕರ್ ಅವರದ್ದು ಬಹುಮುಖ ವ್ಯಕ್ತಿತ್ವ ಹೊಂದಿದ್ದ ಸಮಾಜ ಸುಧಾರಕ, ಸ್ವಾತಂತ್ರ್ಯ ಹೋರಾಟಗಾರ, ರಾಜಕೀಯ ನಾಯಕ, ಇತಿಹಾಸ ತಜ್ಞ, ಬರಹಗಾರ ಮತ್ತು ತತ್ವಶಾಸ್ತ್ರಜ್ಞನಾಗಿದ್ದ ಎಂದು ಉಪರಾಷ್ಟ್ರಪತಿ ವೆಂಕಯ್ಯನಾಯ್ಡು ಅವರು ಬಣ್ಣಿಸಿದ್ದಾರೆ.
'ಸಾವರ್ಕರ್: ಎಕೋಸ್ ಫ್ರಾಮ್ ಎ ಫಾರ್ಗಟನ್ ಪಾಸ್ಟ್' ಎಂಬ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ವೀರ್ ಸಾವರ್ಕರ್ ಅವರ ವ್ಯಕ್ತಿತ್ವದ ಹಲವು ಅಂಶಗಳ ಬಗ್ಗೆ ಉಪರಾಷ್ಟ್ರಪತಿ ಮಾತನಾಡಿದರು, ಭಾರತದಲ್ಲಿ ಅಸ್ಪೃಶ್ಯತೆಯ ವಿರುದ್ಧ ವೀರ ಸಾವರ್ಕರ್ ತುಂಬಾ ಪ್ರಭಾವಶಾಲಿವಾದ ಸಮಾಜ ಸುಧಾರಣಾ ಆಂದೋಲನಗಳನ್ನು ಆರಂಭಿಸಿದ್ದರು ಎಂದರು.
ಭಾರತದಲ್ಲಿ ಅಸ್ಪೃಶ್ಯತೆಯ ವಿರುದ್ಧ ಅತ್ಯಂತ ಶಕ್ತಿಶಾಲಿಯಾದ ಸಾಮಾಜಿಕ ಸುಧಾರಣಾ ಆಂದೋಲನ ಆರಂಭಿಸಿದ್ದರು ಸಾವರ್ಕರ್ ಎಂಬುದು ದೇಶದ ಕೆಲವೇ ಜನರಿಗೆ ಮಾತ್ರ ತಿಳಿದಿದೆ. ದಲಿತರು ಸೇರಿದಂತೆ ಎಲ್ಲ ಹಿಂದೂಗಳ ದೇಗುಲ ಪ್ರವೇಶಕ್ಕೆ ಅನುಕೂಲ ಮಾಡಿಕೊಡಲು ರಾವ್ನಗಿರಿ ಜಿಲ್ಲೆಯಲ್ಲಿ ಸಾವರ್ಕರ್ ಅವರು ಪತಿತ್ ಪವನ್ ಮಂದಿರ ನಿರ್ಮಿಸಿದ್ದರು ಎಂದು ತಿಳಿಸಿದರು.