ಕರ್ನಾಟಕ

karnataka

ETV Bharat / bharat

15 ಗಂಟೆಯೊಳಗೆ ಅಂಬೇಡ್ಕರ್ ಹೊಸ ಪ್ರತಿಮೆ ನಿರ್ಮಿಸಿದ ತಮಿಳುನಾಡು ಸರ್ಕಾರ - Ambedkar statue

ನಾಗಪಟ್ಟಣಂ ಜಿಲ್ಲೆಯ ವೇದಾರಣ್ಯಂ ನಗರದಲ್ಲಿ ನೆಲಕ್ಕುರುಳಿಸಲಾಗಿದ್ದ ಅಂಬೇಡ್ಕರ್ ಪ್ರತಿಮೆಯ ಜಾಗದಲ್ಲಿ 15 ಗಂಟೆಗಳ ಒಳಗೆ ತಮಿಳುನಾಡು ಸರ್ಕಾರವು ಹೊಸ ಪ್ರತಿಮೆಯನ್ನು ನಿರ್ಮಿಸಿದೆ.

ನೆಲಸಮವಾದ 15 ಗಂಟೆಯೊಳಗೆ ಅಂಬೇಡ್ಕರ್ ಹೊಸ ಪ್ರತಿಮೆ ನಿರ್ಮಾಣ

By

Published : Aug 27, 2019, 3:49 AM IST

ನಾಗಪಟ್ಟಣಂ: ಜಿಲ್ಲೆಯ ವೇದಾರಣ್ಯಂ ನಗರದಲ್ಲಿ ಅಂಬೇಡ್ಕರ್ ಪ್ರತಿಮೆಗೆ ಕಿಡಿಗೇಡಿಗಳು ಧ್ವಂಸ ಮಾಡಿದ 15 ಗಂಟೆಯ ಒಳಗೆ ತಮಿಳುನಾಡು ಸರ್ಕಾರವು , ಅದೇ ಜಾಗದಲ್ಲಿ ಹೊಸ ಪ್ರತಿಮೆಯನ್ನು ನಿರ್ಮಿಸಿದೆ.

ತಿರುಚ್ಚಿ ವಲಯ ಐಜಿ ವರಥರಾಜಲು, ತಂಜಾವೂರು ಪ್ರಾದೇಶಿಕ ಡಿಐಜಿ ಲೋಗನಾಥನ್ ಇವರ ಉಪಸ್ಥಿತಿಯಲ್ಲಿ ಅಂಬೇಡ್ಕರ್ ಪ್ರತಿಮೆಯನ್ನು ಪ್ರತಿಷ್ಠಾಪಿಸಲಾಗಿದೆ.

ನೆಲಸಮವಾದ 15 ಗಂಟೆಯೊಳಗೆ ಅಂಬೇಡ್ಕರ್ ಹೊಸ ಪ್ರತಿಮೆ ನಿರ್ಮಾಣ

ತಮಿಳುನಾಡಿನ ನಾಗಪಟ್ಟಣಂ ಜಿಲ್ಲೆಯಲ್ಲಿ ಪರಿಶಿಷ್ಟ ಜಾತಿ ಹಾಗೂ ಮೇಲ್ಜಾತಿಯ ಗುಂಪುಗಳ ನಡುವೆ ಗಲಾಟೆಗಳು ಆಗಾಗ ನಡೆಯುತ್ತಿವೆ. ಇದರ ಬೆನ್ನಲ್ಲೇ ನಿನ್ನೆ ನಡೆದ ಕಾರು ಅಪಘಾತದ ಬಳಿಕ ಇಲ್ಲಿನ ಪರಿಸ್ಥಿತಿ ಹದಗೆಟ್ಟಿತ್ತು.

ಅಪಘಾತಕ್ಕೀಡಾಗಿದ್ದವ ಪರಿಶಿಷ್ಟ ಜಾತಿಗೆ ಸೇರಿದವರಾಗಿದ್ದರೆ, ಕಾರು ಚಾಲಕ ಪ್ರಬಲ ಮೇಲ್ವರ್ಗಕ್ಕೆ ಸೇರಿದವರಾಗಿದ್ದರು. ಇದರಿಂದ ಆಕ್ರೋಶಗೊಂಡ ಪರಿಶಿಷ್ಟ ಜಾತಿಯ ಗುಂಪು ನಗರದ ಪೊಲೀಸ್​​ ಠಾಣೆಯ ಬಳಿ ಅಪಘಾತಕ್ಕೀಡಾಗಿದ್ದ ಕಾರು ಸುಟ್ಟು ಆಕ್ರೋಶ ವ್ಯಕ್ತಪಡಿಸಿದ್ದರು. ಆ ಬಳಿಕ ಎರಡು ಗುಂಪುಗಳ ನಡುವಿನ ಗಲಾಟೆಯು ಹಿಂಸಾಚಾರಕ್ಕೆ ತಿರುಗಿತ್ತು. ಗಲಾಟೆ ಮಧ್ಯೆ ಬಿರು ಬಿಸಿಲನಲ್ಲೇ ಅಂಬೇಡ್ಕರ್ ಪ್ರತಿಮೆಯನ್ನು ಕಿಡಿಗೇಡಿಗಳು ನೆಲಕ್ಕುರುಳಿಸಿದ್ದರು. ಈ ಘಟನೆಯ ನಂತರ ಪರಿಸ್ಥಿತಿ ಉಲ್ಬಣಗೊಂಡಿದೆ.

ತಿರುಚ್ಚಿ ವಲಯ ಐಜಿ ವರಥರಾಜಲು, ತಂಜಾವೂರು ಪ್ರಾದೇಶಿಕ ಡಿಐಜಿ ಲೋಗನಾಥನ್ ಅವರ ನಿರ್ದೇಶನದ ಮೇರೆಗೆ ಪರಿಸ್ಥಿತಿಯನ್ನು ನಿಯಂತ್ರಿಸಲು 750 ಪೊಲೀಸರನ್ನು ಭದ್ರತೆಗಾಗಿ ನಿಯೋಜಿಸಲಾಗಿತ್ತು. ಅಲ್ಲದೇ ಕಳೆದ ರಾತ್ರಿ 40 ಕ್ಕೂ ಹೆಚ್ಚು ಮಂದಿಯನ್ನು ಬಂಧಿಸಲಾಗಿತ್ತು. ಇನ್ನು ಸೋಮವಾರ ಬೆಳಿಗ್ಗೆ ಐಜಿ ಹಾಗೂ ಡಿಐಜಿ ಅವರ ಉಪಸ್ಥಿತಿಯಲ್ಲಿ 6 ಅಡಿ ಎತ್ತರದ ಹೊಸ ಅಂಬೇಡ್ಕರ್ ಪ್ರತಿಮೆಯನ್ನು ಅದೇ ಸ್ಥಳದಲ್ಲಿ ತಮಿಳುನಾಡು ಸರ್ಕಾರ ಇರಿಸಿದೆ.

ABOUT THE AUTHOR

...view details