ಕರ್ನಾಟಕ

karnataka

ETV Bharat / bharat

ತ್ರಿವಳಿ ತಲಾಖ್​ ನಿಷೇಧ ಮೆಚ್ಚಿ ಮುಸ್ಲಿಂ ಮಹಿಳೆಯಿಂದ ಮೋದಿಗೆ ವಿಶೇಷ 'ರಾಖಿ' ! - PM Narendra Modi Today News

ಪ್ರಧಾನಿ ನರೇಂದ್ರ ಮೋದಿ ಅವರಿಂದಾಗಿ ತ್ರಿವಳಿ ತಲಾಖ್ ಶಿಕ್ಷಾರ್ಹ ಅಪರಾಧ ಎಂದಾಯಿತು. ಮುಸ್ಲಿಂ ಸಮುದಾಯದ ಎಲ್ಲ ಮಹಿಳೆಯರಿಗೂ ಮೋದಿ ಹಿರಿಯಣ್ಣ ಇದ್ದಂತೆ. ನಾವು ನಮ್ಮ ಅಣ್ಣನಿಗಾಗಿ ವಿಶೇಷ ರಾಖಿ ಕಳುಹಿಸಿದ್ದೇವೆ ಎಂದು ಮುಸ್ಲಿಂ ಮಹಿಳೆಯೊಬ್ಬರು ಹೇಳಿದ್ದಾರೆ.

ಸಂಗ್ರಹ ಚಿತ್ರ

By

Published : Aug 12, 2019, 2:11 AM IST

ವಾರಣಾಸಿ: ಮುಸ್ಲಿಂ ಸಮುದಾಯದಲ್ಲಿ ರೂಢಿಯಲ್ಲಿದ್ದ ತ್ರಿವಳಿ ತಲಾಖ್​ ನೀಡುವುದನ್ನು ಶಿಕ್ಷಾರ್ಹ ಅಪರಾಧವೆಂದು ಕೇಂದ್ರ ಸರ್ಕಾರ ನೂತನ ಕಾಯ್ದೆ ಹೊರಡಿಸಿರುವುದು ಗೊತ್ತಿರುವ ಸಂಗತಿ. ಇದನ್ನು ಸ್ವಾಗತಿಸಿದ ವಾರಣಾಸಿಯ ಮುಸ್ಲಿಂ ಮಹಿಳೆಯೊಬ್ಬರು ಪ್ರಧಾನಿ ನರೇಂದ್ರ ಮೋದಿಗೆ ವಿಶೇಷ ರಾಖಿಯನ್ನು ಕಳುಹಿಸಿದ್ದಾರೆ.

ಮೋದಿ ನಮಗೆ ಹಿರಿಯಣ್ಣ. ಅವರು ನಮ್ಮನ್ನು ನೂತನ ಕಾಯ್ದೆಯ ಮೂಲಕ ಕಾಪಾಡಿದ್ದಾರೆ. ಹೀಗಾಗಿ, ನಾವು ನಮ್ಮ ಕೈಯಿಂದ ಮಾಡಿದ ವಿಶೇಷ ರಾಖಿಯನ್ನು ಕಳುಹಿಸಿಕೊಡುತ್ತಿದ್ದೇನೆ ಎಂದುರಾಮಪುರದ ಹುಮಾ ಬಾನೋ ಹೇಳಿದರು.

ಮೋದಿ ಅವರಿಂದಾಗಿ ತ್ರಿವಳಿ ತಲಾಖ್ ಶಿಕ್ಷಾರ್ಹ ಅಪರಾಧ ಎಂದಾಯಿತು. ಮುಸ್ಲಿಂ ಸಮುದಾಯದ ಎಲ್ಲ ಮಹಿಳೆಯರಿಗೂ ಅವರು ಹಿರಿಯಣ್ಣ ಇದ್ದಂತೆ. ನಾವು ನಮ್ಮ ಅಣ್ಣನಿಗಾಗಿ ರಾಖಿ ಮಾಡಿದ್ದೇವೆ ಎಂದು ರಾಮಪುರದ ಹುಮಾ ಬಾನೋ ಹೇಳಿದರು.

ಆರ್​ಎಸ್​ಎಸ್​ನಲ್ಲಿರುವ ಮುಸ್ಲಿಂ ಅಧೀನ ಸಂಸ್ಥೆಗಳು ಈ ರೀತಿಯಲ್ಲಿ ಕೆಲಸ ಮಾಡುತ್ತಿವೆ. ಈ ರೀತಿಯ ಕೆಲಸ ಮಾಡಲು ಅವರು ಮುಸ್ಲಿಮರನ್ನು ನೇಮಕ ಮಾಡುತ್ತಾರೆ. ಅಧಿಕಾರದಲ್ಲಿರುವವರು ಒತ್ತಡ ಹೇರಿ ಈ ರೀತಿಯ ಕೆಲಸಗಳನ್ನು ಮಾಡಿಸುತ್ತಾರೆ ಎಂದು ಇಂಡಿಯನ್​ ಯೂನಿಯನ್ ಮುಸ್ಲಿಂ ಲೀಗ್​ ರಾಜ್ಯಾಧ್ಯಕ್ಷ ಮಾಟಿನ್ ಖಾನ್​ ಆಪಾದಿಸಿದರು.

ABOUT THE AUTHOR

...view details