ನವದೆಹಲಿ: ಕತಾರ್, ಓಮನ್, ಮಲೇಷ್ಯಾ, ಯುಎಇ, ಮತ್ತು ಬ್ರಿಟನ್ ಮುಂತಾದ ದೇಶಗಳಲ್ಲಿ ಸಿಲುಕಿರುವ ಭಾರತೀಯರನ್ನು ವಾಪಸ್ ಕರೆತರಲು ರಾಷ್ಟ್ರೀಯ ವಿಮಾನಯಾನ ಏರ್ ಇಂಡಿಯಾ ಮತ್ತು ಅದರ ಅಂಗಸಂಸ್ಥೆ ಏರ್ ಇಂಡಿಯಾ ಎಕ್ಸ್‌ಪ್ರೆಸ್ ಶನಿವಾರ ವಿಶೇಷ ವಿಮಾನ ಕಳಿಸುತ್ತಿದೆ.
ವಂದೇ ಭಾರತ್ ಮಿಷನ್ನ ಮೂರನೇ ದಿನವಾದ ಇಂದು ಢಾಕಾ, ಸಿಂಗಾಪುರ, ನಿವಾರ್ಕ್(ನ್ಯೂಜೆರ್ಸಿ) ಮತ್ತು ಕುವೈತ್‌ಗೆ ನಾಲ್ಕು ಏರ್ ಇಂಡಿಯಾ ವಿಮಾನಗಳು ಹಾಲಿದ್ದು, ದೋಹಾ, ಮಸ್ಕತ್, ಕೌಲಾಲಂಪುರ್, ಶಾರ್ಜಾ ಮತ್ತು ಕುವೈತ್‌ಗೆ ವಾಪಸಾತಿ ಹಾರಾಟ ನಡೆಸಲಿದೆ.
ಏರ್ ಇಂಡಿಯಾ ಎಕ್ಸ್‌ಪ್ರೆಸ್ ಸಿದ್ಧಪಡಿಸಿದ ಸ್ಥಳಾಂತರ ವೇಳಾಪಟ್ಟಿಯ ಪ್ರಕಾರ, ವಿಮಾನಯಾನವು ಇಂದು ಕೊಚ್ಚಿಯಿಂದ ದೋಹಾಕ್ಕೆ ಐಎಕ್ಸ್ 475, ಕೊಚ್ಚಿಯಿಂದ ಕುವೈತ್‌ಗೆ ಐಎಕ್ಸ್ 395, ಐಎಕ್ಸ್ 443 ಕೊಚ್ಚಿಯಿಂದ ಮಸ್ಕತ್, ಐಎಕ್ಸ್ 682 ತಿರುಚಿರಾಪಳ್ಳಿಯಿಂದ ಕೌಲಾಲಂಪುರಕ್ಕೆ ಮತ್ತು ಫ್ಲೈಟ್ ಐಎಕ್ಸ್ 183 ದೆಹಲಿಯಿಂದ ಶಾರ್ಜಾಗೆ ಹಾರಲಿದೆ. ಐಎಕ್ಸ್ 184 ವಿಮಾನವು ಹಿಂದಿರುಗುವಾಗ ಮೊದಲು ಲಕ್ನೋದಲ್ಲಿ ಇಳಿದು ನಂತರ ದೆಹಲಿಯಲ್ಲಿ ಲ್ಯಾಂಡ್ ಆಗಲಿದೆ.