ವಡೋದರಾ: ಮಾಸ್ಕ್, ಕೈ ಸ್ಯಾನಿಟೈಸರ್ ಮತ್ತು ಸಾಬೂನುಗಳನ್ನು ವಡೋದರಾ ಕೇಂದ್ರ ಕಾರಾಗೃಹದ ಖೈದಿಗಳು ತಯಾರಿಸುತ್ತಿದ್ದಾರೆ.
ಮಾಸ್ಕ್, ಸ್ಯಾನಿಟೈಸರ್, ಸಾಬೂನು ತಯಾರಿಸುತ್ತಿರುವ ಜೈಲು ಹಕ್ಕಿಗಳು - ವಡೋದರಾ ಕೇಂದ್ರ ಕಾರಾಗೃಹ
ವಡೋದರಾ ಕೇಂದ್ರ ಕಾರಾಗೃಹದ ಖೈದಿಗಳು ಮಾಸ್ಕ್, ಸಾಬೂನು ಮತ್ತು ಸ್ಯಾನಿಟೈಜರ್ ತಯಾರಿಸುವ ಮೂಲಕ ಕೊರೊನಾ ವಿರುದ್ಧ ಹೋರಾಟದಲ್ಲಿ ಶ್ರಮಿಸುತ್ತಿರುವವರಿಗೆ ಜೈಲಿನಿಂದಲ್ಲೇ ನೆರವಾಗುತ್ತಿದ್ದಾರೆ.
ಬಂಧಿತ ಖೈದಿಗಳ ಮೂಲಕ ವಡೋದರಾ ಕೇಂದ್ರ ಕಾರಗೃಹದ ಜೈಲು ಸಿಬ್ಬಂದಿ ಸಾಮಾಜಿಕ ಕಲ್ಯಾಣ ಕಾರ್ಯಕ್ರಮ ಮಾಡಿಸುತ್ತಿದ್ದಾರೆ. 'ಜೈಲು ಶಿಕ್ಷೆ ಮುಗಿದ ಬಳಿಕ ಖೈದಿಗಳಿಗೆ ಹೊಸ ಕೌಶಲ್ಯಗಳ ಜೀವನ ನಡೆಸಲು ಇದು ಸಹಾಯವಾಗುತ್ತದೆ ಎಂದು ಹಿರಿಯ ಜೈಲರ್ ಎಂ.ಎನ್. ರಾಥ್ವಾ ಹೇಳಿದ್ದಾರೆ.
ವಡೋದರಾ ಕೇಂದ್ರ ಕಾರಾಗೃಹದ ಕೈದಿಗಳು 20,000 ಮಾಸ್ಕ್, ನೂರಾರು ಲೀಟರ್ ಹ್ಯಾಂಡ್ ಸ್ಯಾನಿಟೈಸರ್ ಹಾಗೂ ಸಾಬೂನು ತಯಾರಿಸಿದ್ದಾರೆ. ಇವರು ತಯಾರಿಸಿರುವ ಮಾಸ್ಕ್, ಸ್ಯಾನಿಟೈಸರ್ ಹಾಗೂ ಸೋಪ್ಗಳನ್ನು ಸರ್ಕಾರಿ ಕಚೇರಿ ಮತ್ತು ಆಸ್ಪತ್ರೆಗಳಿಗೆ ಕೈಗೆಟುಕುವ ಬೆಲೆಯಲ್ಲಿ ನೀಡಲಾಗುತ್ತಿದೆ. ಇದರಿಂದ ಬರುವ ಆದಾಯವನ್ನೂ ಖೈದಿಗಳಿಗೆ ನೀಡಲಾಗುತ್ತದೆ.