ಕರ್ನಾಟಕ

karnataka

ETV Bharat / bharat

ಜ.16 ವ್ಯಾಕ್ಸಿನೇಷನ್‌ ಕಿಕ್ ಸ್ಟಾರ್ಟ್: 1.39 ಲಕ್ಷ ಕೋವಿಶೀಲ್ಡ್ ಲಸಿಕೆ ಮುಂಬೈಗೆ ಆಗಮನ - ಕೋವಿಶೀಲ್ಡ್ ಲಸಿಕೆ ಲೇಟೆಸ್ಟ್ ನ್ಯೂಸ್

ಜನವರಿ 16 ರಿಂದ ಪ್ರಾರಂಭವಾಗಲಿರುವ ವ್ಯಾಕ್ಸಿನೇಷನ್​ ಡ್ರೈವ್‌ಗಾಗಿ ಗೊತ್ತುಪಡಿಸಿದ ಕೇಂದ್ರಗಳಿಗೆ ಮೊದಲ ಬ್ಯಾಚ್ ಪ್ರಮಾಣವನ್ನು ನಗರದಾದ್ಯಂತ ತಲುಪಿಸಲಾಗುವುದು ಎಂದು ಬಿಎಂಸಿ ಪ್ರಕಟಣೆಯಲ್ಲಿ ತಿಳಿಸಿದೆ.

vaccine has been  transported from Serum Institute to Mumbai
ಕೆಲ ಗಂಟೆಗಳಲ್ಲೇ ಮುಂಬೈ ತಲುಪಲಿವೆ ಕೋವಿಶೀಲ್ಡ್ ಲಸಿಕೆ

By

Published : Jan 13, 2021, 6:43 AM IST

Updated : Jan 13, 2021, 10:52 AM IST

ಮುಂಬೈ: ಪುಣೆ ಮೂಲದ ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ (ಎಸ್‌ಐಐ) ಯಿಂದ ಇಂದು ಮುಂಜಾನೆ 1.39 ಲಕ್ಷ ಡೋಸ್ ಕೋವಿಶೀಲ್ಡ್ ಲಸಿಕೆಗಳನ್ನು ಪಡೆಯಲಾಗಿದೆ ಎಂದು ಬೃಹನ್‌ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ ತಿಳಿಸಿದೆ.

ಜನವರಿ 16 ರಿಂದ ಪ್ರಾರಂಭವಾಗಲಿರುವ ವ್ಯಾಕ್ಸಿನೇಷನ್ ಡ್ರೈವ್‌ಗಾಗಿ ಗೊತ್ತುಪಡಿಸಿದ ಕೇಂದ್ರಗಳಿಗೆ ಮೊದಲ ಬ್ಯಾಚ್ ಪ್ರಮಾಣವನ್ನು ನಗರದಾದ್ಯಂತ ತಲುಪಿಸಲಾಗುವುದು ಎಂದು ಬಿಎಂಸಿ ಪ್ರಕಟಣೆಯಲ್ಲಿ ತಿಳಿಸಿದೆ.

ಕೆಲ ಗಂಟೆಗಳಲ್ಲೇ ಮುಂಬೈ ತಲುಪಲಿವೆ ಕೋವಿಶೀಲ್ಡ್ ಲಸಿಕೆ

ಬೆಳಿಗ್ಗೆ 5.30 ರ ಸುಮಾರಿಗೆ ಎಸ್‌ಐಐನಿಂದ 1,39,500 ಡೋಸ್ ಕೋವಿಶೀಲ್ಡ್ ಲಸಿಕೆ ಪಡೆದಿದೆ ಎಂದು ತಿಳಿಸಿದೆ. ಬಿಎಂಸಿಯ ಆರೋಗ್ಯ ಇಲಾಖೆಯ ಸಿಬ್ಬಂದಿ ಎರಡು ಪೊಲೀಸ್ ವಾಹನಗಳ ಸುರಕ್ಷತೆಯೊಂದಿಗೆ ಪುಣೆಯಿಂದ ಲಸಿಕೆಗಳನ್ನು ತರಲಾಯಿತು ಎಂದು ಹೇಳಿದೆ.

"ಲಸಿಕೆ ಪ್ರಮಾಣವನ್ನು ಪ್ಯಾರೆಲ್‌ನಲ್ಲಿರುವ ಎಫ್-ಸೌತ್ ವಾರ್ಡ್ ಕಚೇರಿಯಲ್ಲಿ ಸಂಗ್ರಹಿಸಲಾಗುತ್ತಿದೆ" ಎಂದು ಹೇಳಿದೆ. ಕಾಂಜುರ್ಮಾಗ್​ ನಲ್ಲಿ ಲಸಿಕೆಗಳಿಗಾಗಿ ಕೇಂದ್ರೀಕೃತ ಕೋಲ್ಡ್ ಸ್ಟೋರೇಜ್ ಸೌಲಭ್ಯವನ್ನು ಸಹ ರಚಿಸಿದೆ. ಮುಂಬೈಯಿಂದ ಸುಮಾರು 1.30 ಲಕ್ಷ ಆರೋಗ್ಯ ಕಾರ್ಯಕರ್ತರು ವ್ಯಾಕ್ಸಿನೇಷನ್​ಗಿ ನೋಂದಾಯಿಸಿಕೊಂಡಿದ್ದಾರೆ ಎಂದು ಬಿಎಂಸಿ ಅಧಿಕಾರಿಗಳು ತಿಳಿಸಿದ್ದಾರೆ.

Last Updated : Jan 13, 2021, 10:52 AM IST

ABOUT THE AUTHOR

...view details