ನವದೆಹಲಿ:ಕೋವಿಡ್-19 ಲಸಿಕೆ ಬಗೆಗಿನ ವದಂತಿಗಳನ್ನು ಅಲ್ಲಗಳೆದ ಕೇಂದ್ರ ಆರೋಗ್ಯ ಸಚಿವಾಲಯ, ಯಾವುದೇ ಪಕ್ಷಪಾತವಿಲ್ಲದೆ ಎಲ್ಲರಿಗೂ ಲಭ್ಯವಾಗಲಿದೆ ಎಂದು ಸ್ಪಷ್ಟಪಡಿಸಿದೆ.
ಶ್ರೇಣಿ 2 ಮತ್ತು ಮುಂದಿನ ವರ್ಗಗಳ ಪಟ್ಟಣಗಳಿಗೆ ಮೊದಲು, ಮೆಟ್ರೋಪಾಲಿಟನ್ ನಗರಗಳಲ್ಲಿ ವಾಸಿಸುವ ಜನರಿಗೆ ಲಸಿಕೆಗೆ ಆದ್ಯತೆ ನೀಡಲಾಗುವುದು ಎಂಬ ವದಂತಿಗಳನ್ನು ಕೇಂದ್ರ ಆರೋಗ್ಯ ಇಲಾಖೆ ಕಾರ್ಯದರ್ಶಿ ರಾಜೇಶ್ ಭೂಷಣ್ ತಳ್ಳಿಹಾಕಿದರು.
"ಮೆಟ್ರೊ ಮತ್ತು ನಾನ್ಮೆಟ್ರೋ ನಗರಗಳು ಅಥವಾ ಪಟ್ಟಣಗಳು ಅಥವಾ ಭೌಗೋಳಿಕ ಸ್ಥಳದ ಆಧಾರದ ಮೇಲೆ ಅಗತ್ಯತೆಯ ನಡುವೆ ಸರ್ಕಾರ ತಾರತಮ್ಯ ಮಾಡುವುದಿಲ್ಲ. ಪ್ರದೇಶ ಅಥವಾ ಸ್ಥಳವನ್ನು ಲೆಕ್ಕಿಸದೆ ನಾವು ಮೊದಲು ಎಲ್ಲಾ ಆದ್ಯತೆಯ ಗುಂಪುಗಳಿಗೆ ಲಸಿಕೆ ನೀಡುತ್ತೇವೆ" ಎಂದು ಸ್ಪಷ್ಟಪಡಿಸಿದರು.
"ಲಸಿಕೆ ವಿತರಣೆಗೆ ಅನುಮೋದನೆ ಒದಗಿಸಿದ ನಂತರ, ಜನರು ವಾಸಿಸುವ ಪ್ರದೇಶವನ್ನು ಲೆಕ್ಕಿಸದೆ ಎಲ್ಲಾ ಆದ್ಯತೆಯ ಜನಸಂಖ್ಯೆಯ ಗುಂಪುಗಳನ್ನು ತಲುಪುತ್ತದೆ" ಎಂದು ಭೂಷಣ್ ಹೇಳಿದ್ದಾರೆ. ಈ ಮಧ್ಯೆ "ಅಮೆರಿಕ ಮೂಲದ ಫಾರ್ಮಾ ಕಂಪನಿ ಫಿಜರ್ ಇಂಕ್ ತಮ್ಮ ಲಸಿಕೆ ಶೇ. 90 ರಷ್ಟು ಪರಿಣಾಮಕಾರಿಯಾಗಿದೆ ಎಂದು ವರದಿ ಮಾಡಿದ ನಂತರ ಸರ್ಕಾರವು ವಿದೇಶಿ ತಯಾರಕರು ಸೇರಿದಂತೆ ಎಲ್ಲಾ ಲಸಿಕೆ ತಯಾರಕರೊಂದಿಗೆ ಸಂಪರ್ಕದಲ್ಲಿದೆ" ಎಂದು ಹೇಳಿದ್ದಾರೆ.