ಹೈದರಾಬಾದ್:ಕೋವಿಡ್ ಓಡಿಸಲು ವ್ಯಾಕ್ಸಿನ್ ಅಸ್ತ್ರದ ಪ್ರಯೋಗಕ್ಕೆ ಸರ್ಕಾರ ಮುಂದಾಗಿದೆ. ಇಂದಿನಿಂದ ಕೋವಿಡ್ ವ್ಯಾಕ್ಸಿನ್ ಡ್ರೈ ರನ್ ಆರಂಭವಾಗಿದ್ದು, ಬೆಂಗಳೂರಿನ ಕಾಮಾಕ್ಷಿಪಾಳ್ಯದ ಬಿಬಿಎಂಪಿ ಆರೋಗ್ಯ ಕೇಂದ್ರದಲ್ಲಿ ಲಸಿಕೆ ನೀಡಲು ಪ್ರಾರಂಭಿಸಲಾಗಿದೆ.
ದೇಶದಲ್ಲಿ ಮೊದಲ ಹಂತದ ವಾಕ್ಸಿನೇಷನ್ಅನ್ನು ಮೊದಲ ಆದ್ಯತೆಯ ಗುಂಪಿಗೆ ಸೇರಿದ ದೇಶದ 30 ಕೋಟಿ ಜನರಿಗೆ ವಿತರಣೆಯಾಗಲಿದೆ. ಇದಕ್ಕೆ ತಗಲುವ ವೆಚ್ಚವನ್ನೂ ಸರ್ಕಾರವೇ ಭರಿಸಲಿದೆ. ಮುಂದಿನ 8 ತಿಂಗಳಲ್ಲಿ ಆರೋಗ್ಯ ಸಿಬ್ಬಂದಿಗಳೊಂದಿಗೆ ಕೊರೊನಾ ವಾರಿಯರ್ಸ್ಗೆ ಮೊದಲ ಹಂತದಲ್ಲಿ ಲಸಿಕೆ ನೀಡಲಾಗುವುದು. 29 ಸಾವಿರ ಲಸಿಕೆ ಕೇಂದ್ರಗಳಿಗೆ ವ್ಯಾಕ್ಸಿನ್ ಪೂರೈಸಲು 31 ಹಬ್ಗಳನ್ನು ಸ್ಥಾಪಿಸಲಾಗುವುದು ಎಂದು ರಾಷ್ಟ್ರೀಯ ಕೋವಿಡ್ ಟಾಸ್ಕ್ ಫೋರ್ಸ್ ಮುಖ್ಯಸ್ಥ ವಿನೋದ್ ಪೌಲ್ ತಿಳಿಸಿದ್ದಾರೆ.
ಕೇಂದ್ರ ಆರೋಗ್ಯ ಮಂತ್ರಿ ಡಾ.ಹರ್ಷವರ್ಧನ್ ಇನ್ನು ದೆಹಲಿಯ ದರ್ಯಾಗಂಜ್ನ ಹೆಲ್ತ್ಕೇರ್ ಸೆಂಟರ್ನಲ್ಲಿ ಲಸಿಕಾ ತಾಲೀಮು ಶುರು ಮಾಡಲಾಗಿದೆ. ಜಿಟಿಬಿ ಆಸ್ಪತ್ರೆಯಲ್ಲಿ ಡ್ರೈ ರನ್ ಆರಂಭವಾದ ಹಿನ್ನೆಲೆ ಕೇಂದ್ರ ಆರೋಗ್ಯ ಮಂತ್ರಿ ಡಾ.ಹರ್ಷವರ್ಧನ್ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.
ಬಳಿಕ ಮಾತನಾಡಿದ ಅವರು, ವದಂತಿಗಳಿಗೆ ಕಿವಿಗೊಡದಂತೆ ನಾನು ಜನರಿಗೆ ಮನವಿ ಮಾಡುತ್ತೇನೆ. ಲಸಿಕೆಯ ಸುರಕ್ಷತೆ ಮತ್ತು ಪರಿಣಾಮಕಾರಿತ್ವವನ್ನು ಖಚಿತಪಡಿಸುವುದು ನಮ್ಮ ಆದ್ಯತೆಯಾಗಿದೆ. ಪೋಲಿಯೊ ರೋಗನಿರೋಧಕ ಸಮಯದಲ್ಲಿ ವಿವಿಧ ರೀತಿಯ ವದಂತಿಗಳು ಹರಡಿತ್ತು. ಬಳಿಕ ಜನರು ಲಸಿಕೆ ತೆಗೆದುಕೊಂಡರು ಹಾಗಾಗಿ ಈಗ ಭಾರತ ಪೋಲಿಯೊ ಮುಕ್ತವಾಗಿದೆ, ಎಂದು ಕೋವಿಡ್ ಲಸಿಕೆ ಕುರಿತು ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಹೇಳಿದರು.
ಹೈದರಾಬಾದ್ನಲ್ಲಿ ಪ್ರಯೋಗಕ್ಕೆ ಸಿದ್ದತೆ ವ್ಯಾಕ್ಸಿನೇಷನ್ ಡ್ರೈ ರನ್ಅನ್ನು ದೇಶದ ನಾನಾ ಭಾಗಗಳಲ್ಲಿ ಪ್ರಾರಂಭಿಸಲಾಗಿದೆ. ಚಂಡೀಗಢ್ನ ಸರ್ಕಾರಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಪ್ರಯೋಗ ಪ್ರಾರಂಭಿಸಲಾಗಿದ್ದು, ವೈದ್ಯರಿಗೆ ಮಾಹಿತಿಯನ್ನೂ ನೀಡಲಾಗ್ತಿದೆ.
ದೆಹಲಿಯ ದರ್ಯಾಗಂಜ್ನಲ್ಲಿ ಸಿದ್ದತರ ಮಹಾರಾಷ್ಟ್ರದ ಪುಣೆಯಲ್ಲಿ ಡ್ರೈ ರನ್ ಪ್ರಕ್ರಿಯೆ ಪ್ರಾರಂಭವಾಗಿದೆ. ಹೈದರಾಬಾದ್ನ ಗಾಂಧಿ ಆಸ್ಪತ್ರೆ ಹಾಗೂ ನಾಂಪಲ್ಲಿ ಆರೋಗ್ಯ ಕೇಂದ್ರದಲ್ಲಿ ನಾಮಪಲ್ಲಿಯಲ್ಲಿ ಲಸಿಕೆಯ ಪ್ರಯೋಗಾರ್ಥ ಪರೀಕ್ಷೆಗೆ ಎಲ್ಲ ಸಿದ್ಧತೆಗಳನ್ನ ಪೂರ್ಣಗೊಳಿಸಲಾಗಿದೆ.
ದೆಹಲಿಯ ದರ್ಯಾಗಂಜ್ನಲ್ಲಿ ಶುರು ಕೋವಿಡ್ ವ್ಯಾಕ್ಸಿನ್ ಡ್ರೈ ರನ್ ಆರಂಭವಾಗುವ ಹಿನ್ನೆಲೆ ಆರೋಗ್ಯ ಇಲಾಖೆ ಸಕಲ ತಯಾರಿ ಮಾಡಿಕೊಂಡಿದ್ದು, ಲಕ್ಷಾಂತರ ಮಂದಿ ಈ ವ್ಯಾಕ್ಸಿನ್ಗಾಗಿ ನೋಂದಣಿ ಮಾಡಿಕೊಂಡಿದ್ದಾರೆ.