ಪಿಥೋರಗಢ (ಉತ್ತರಾಖಂಡ): ಉತ್ತರಾಖಂಡದ ಪಿಥೋರಗಢದಲ್ಲಿರುವ ಭಾರತದ ಎರಡನೇ ಟುಲಿಪ್ ಉದ್ಯಾನವನ್ಕೆಕ್ಕೂ ಕೊರೊನಾ ಪರಿಣಾಮ ಬೀರಿದೆ.
ಲಾಕ್‌ಡೌನ್ 2.0: ಪ್ರವಾಸಿಗರನ್ನ ಕಾಣದೆ ಒಣಗುತ್ತಿದೆ ಟುಲಿಪ್ಸ್ ಉದ್ಯಾನವನ - ಪ್ರವಾಸಿಗರನ್ನ ಕಾಣದೆ ಒಣಗುತ್ತಿದೆ ಟುಲಿಪ್ಸ್ ಉದ್ಯಾನವನ
ಪ್ರವಾಸೋದ್ಯಮದ ಅಭಿವೃದ್ಧಿಗಾಗಿ 50 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿದ್ದ ಟುಲಿಪ್ಸ್ ಉದ್ಯಾನವನ ಪ್ರವಾಸಿಗರನ್ನ ಕಾಣದೆ ಒಣಗುತ್ತಿದೆ.
ಲಾಕ್‌ಡೌನ್ ಪರಿಸ್ಥಿತಿಯಲ್ಲಿ ಯಾರೂ ಕೂಡ ಇತ್ತ ಗಮನ ಹರಿಸದ ಕಾರಣ ಸುಂದರವಾದ ಟುಲಿಪ್ಸ್ ಉದ್ಯಾನವನ ಒಣಗುತ್ತಿದೆ. ಹಾಲೆಂಡ್ ಮೂಲದ ಈ ಟುಲಿಪ್ ಹೂವು ಮಾರ್ಚ್ ಮಧ್ಯದಿಂದ ಮೇ ವರೆಗೆ ಅರಳುತ್ತದೆ. ಆದರೆ ದೇಶದಲ್ಲಿ ಲಾಕ್‌ಡೌನ್ ಘೋಷಣೆ ಮಾಡಿರುವುದರಿಂದ ಯಾವುದೇ ಪ್ರವಾಸಿಗರು ಇತ್ತ ಮುಖ ಮಾಡುತ್ತಿಲ್ಲ.
ವಿಶೇಷವೆಂದರೆ, '13 ಜಿಲ್ಲೆ 13 ಪ್ರವಾಸಿ ತಾಣಗಳು' ಯೋಜನೆಯ ಅಡಿಯಲ್ಲಿ ಚಂಡಕ್ ಬೆಟ್ಟದ ಬಳಿಯಿರುವ ಮ್ಯಾಡ್ ಹಳ್ಳಿಯಲ್ಲಿ 50 ಕೋಟಿ ರೂಪಾಯಿಗಳ ವೆಚ್ಚದಲ್ಲಿ ಉದ್ಯಾನ ಅಭಿವೃದ್ಧಿಪಡಿಸಲಾಗಿದೆ. ಫೆಬ್ರವರಿಯಲ್ಲಿ 7 ಜಾತಿಗಳ 25 ಸಾವಿರ ಟುಲಿಪ್ ಸಸ್ಯಗಳನ್ನು ನೆಡಲಾಗಿತ್ತು. ಆದರೆ ಇಂತಾ ಅಂದವಾದ ಉದ್ಯಾನವನ ಯಾವುದೇ ಪ್ರವಾಸಿಗರನ್ನು ಕಾಣದೆ ಒಣಗುತ್ತಿರುವುದು ಬೇಸರದ ಸಂಗತಿ.