ಡೆಹ್ರಾಡೂನ್(ಉತ್ತರಾಖಂಡ):ಲಾಕ್ಡೌನ್ ಸಮಯದಲ್ಲಿ ಹೋಮ್ ಕ್ವಾರಂಟೈನ್ ನಿಯಮಗಳನ್ನು ಉಲ್ಲಂಘಿಸಿದ್ದಾರೆಂದು ಮೂರು ಮತ್ತು ಆರು ತಿಂಗಳ ಶಿಶುಗಳು ಸೇರಿದಂತೆ 51 ಮಂದಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಲಾಕ್ಡೌನ್ ಉಲ್ಲಂಘನೆ ಆರೋಪ: ಮೂರು, ಆರು ತಿಂಗಳ ಕಂದಮ್ಮಗಳು ಸೇರಿ 51 ಮಂದಿ ವಿರುದ್ಧ ಪ್ರಕರಣ! - ಚಿಕ್ಕ ಮಕ್ಕಳ ಮೇಲೆ ಪ್ರಕರಣ ದಾಖಲಿಸಿದ ಉತ್ತರಾಖಾಂಡ್ ಪೊಲೀಸರು
ಕ್ವಾರಂಟೈನ್ ನಿಯಮಗಳನ್ನು ಉಲ್ಲಂಘಿಸಿದ್ದಾರೆ ಎಂದು ಆರೋಪಿಸಿ ಮೂರು ಮತ್ತು ಆರು ತಿಂಗಳ ಮಗುವಿನ ವಿರುದ್ಧ ಪ್ರಕರಣ ದಾಖಲಾಗಿರುವ ವಿಚಿತ್ರ ಘಟನೆ ಉತ್ತರಾಖಂಡನಲ್ಲಿ ಬೆಳಕಿಗೆ ಬಂದಿದೆ. ಎಳೆ ಕಂದಮ್ಮಗಳು ಸೇರಿ ಒಟ್ಟು 51 ಜನರ ವಿರುದ್ಧ ಪ್ರಕರಣ ದಾಖಲಾಗಿದೆ.
ಮೂರು, ಆರು ತಿಂಗಳ ಮಗು ಸೇರಿ 51 ವಿರುದ್ಧ ಪ್ರಕರಣ ದಾಖಲು
ಉತ್ತರಾಖಾಂಡ್ನ ಉತ್ತರಕಾಶಿ ಜಿಲ್ಲೆಯಲ್ಲಿ ಈ ಪ್ರಕರಣ ಬೆಳಕಿಗೆ ಬಂದಿದೆ. ಬಾಲಾಪರಾಧಿ ನ್ಯಾಯ ಕಾಯ್ದೆ ಪ್ರಕಾರ ಎಂಟು ವರ್ಷದೊಳಗಿನ ಮಕ್ಕಳ ವಿರುದ್ಧ ಎಫ್‌ಐಆರ್ ದಾಖಲಿಸಬಾರದು.
ಆದ್ರೆ ಮೂರು ಮತ್ತು ಆರು ತಿಂಗಳ ಶಿಶುಗಳ ವಿರುದ್ಧ ಪ್ರಕರಣ ದಾಖಲಿಸಿದ ಅಧಿಕಾರಿಗಳ ವಿರುದ್ಧ ತನಿಖೆ ನಡೆಸುವಂತೆ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ. ಘಟನೆಗೆ ಕಾರಣವಾದ ಜಿಲ್ಲಾ ಕೋವಿಡ್-19 ಅಧಿಕಾರಿಯನ್ನು ಅಮಾನತುಗೊಳಿಸಿ ಶಿಸ್ತು ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ.