ಲಕ್ನೊ: ದಿನಗೂಲಿ ಕಾರ್ಮಿಕರು ಹಾಗೂ ಇನ್ನಿತರ ಕೂಲಿ ಕಾರ್ಮಿಕರ ಬ್ಯಾಂಕ್ ಖಾತೆಗಳಿಗೆ ಉತ್ತರ ಪ್ರದೇಶ ಸರ್ಕಾರ ಶುಕ್ರವಾರ ಸಹಾಯ ಧನ ವರ್ಗಾವಣೆ ಮಾಡಿದೆ. ಕೊರೊನಾ ಲಾಕ್ಡೌನ್ನಿಂದಾಗಿ ಜೀವನೋಪಾಯಕ್ಕೆ ಪರದಾಡುತ್ತಿರುವ ಬೀದಿ ಬದಿ ವ್ಯಾಪಾರಸ್ಥರು, ಆಟೊ ಚಾಲಕರು, ಇ-ರಿಕ್ಷಾ ಚಾಲಕರು ಸೇರಿದಂತೆ ಒಟ್ಟು 4,81,755 ಕಾರ್ಮಿಕರ ಬ್ಯಾಂಕ್ ಖಾತೆಗಳಿಗೆ ತಲಾ 1 ಸಾವಿರ ರೂ. ನೇರ ನಗದು ವರ್ಗಾವಣೆ ಮಾಡಲಾಗಿದೆ. ಒಟ್ಟು 48 ಕೋಟಿ 17 ಲಕ್ಷ ರೂ.ಗಳಷ್ಟು ಸಹಾಯಧನವನ್ನು ಉತ್ತರ ಪ್ರದೇಶ ಸರ್ಕಾರ ಇಂದು ಬಿಡುಗಡೆ ಮಾಡಿದಂತಾಗಿದೆ.
ಅಸಂಘಟಿತ ಕಾರ್ಮಿಕ ನೆರವಿಗೆ ಬಂದ ಯೋಗಿ ಸರ್ಕಾರ: 5 ಲಕ್ಷ ಖಾತೆಗಳಿಗೆ ಸಹಾಯ ಧನ ವರ್ಗಾವಣೆ - ನೇರ ನಗದು ವರ್ಗಾವಣೆ
ಬೀದಿ ಬದಿ ವ್ಯಾಪಾರಸ್ಥರು, ಆಟೋ ಚಾಲಕರು, ಇ-ರಿಕ್ಷಾ ಚಾಲಕರು ಸೇರಿದಂತೆ ಒಟ್ಟು 4,81,755 ಕಾರ್ಮಿಕರ ಬ್ಯಾಂಕ್ ಖಾತೆಗಳಿಗೆ ಉತ್ತರ ಪ್ರದೇಶ ಸರ್ಕಾರ ತಲಾ 1 ಸಾವಿರ ರೂ. ನೇರ ನಗದು ವರ್ಗಾವಣೆ ಮಾಡಿದೆ. ಪಡಿತರ ಚೀಟಿ ಇಲ್ಲದವರು ಸೇರಿದಂತೆ ಅಗತ್ಯವಿರುವ ಎಲ್ಲರಿಗೂ ಉಚಿತವಾಗಿ ಆಹಾರ ಧಾನ್ಯ ವಿತರಿಸಲಾಗುವುದು ಎಂದು ಸಿಎಂ ಯೋಗಿ ಆದಿತ್ಯನಾಥ್ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಮೊದಲ ಹಂತದಲ್ಲಿ 11 ಲಕ್ಷ ಕಟ್ಟಡ ನಿರ್ಮಾಣ ಕಾರ್ಮಿಕರಿಗೆ ತಲಾ 1 ಸಾವಿರ ರೂ.ಗಳಂತೆ ಸಹಾಯ ಧನ ಬಿಡುಗಡೆ ಮಾಡಲಾಗಿದೆ. ಒಟ್ಟು 20 ಲಕ್ಷ ಕಾರ್ಮಿಕರಿಗೆ ಸಹಾಯ ಧನ ನೀಡುವ ಗುರಿ ಹೊಂದಲಾಗಿದೆ. ಈಗಾಗಲೇ ಏ.1 ರಿಂದ ಆಹಾರ ಧಾನ್ಯಗಳ ವಿತರಣೆ ಆರಂಭವಾಗಿದೆ. ಜನಧನ ಯೋಜನೆಯ ಮೂಲಕ ಮಹಿಳೆಯರಿಗೆ 500 ರೂ. ನೀಡುವ ಕಾರ್ಯ ಪ್ರಗತಿಯಲ್ಲಿದೆ. ಉಜ್ವಲ್ ಯೋಜನೆಯಡಿ ಮೂರು ತಿಂಗಳವರೆಗೆ ಉಚಿತವಾಗಿ ಎಲ್ಪಿಜಿ ವಿತರಿಸಲಾಗುವುದು ಎಂದರು.
ಪಡಿತರ ಚೀಟಿ ಇಲ್ಲದವರು ಸೇರಿದಂತೆ ಅಗತ್ಯವಿರುವ ಎಲ್ಲರಿಗೂ ಉಚಿತವಾಗಿ ಆಹಾರ ಧಾನ್ಯ ವಿತರಿಸಲಾಗುವುದು. ಆಯಾ ಪ್ರದೇಶಗಳಲ್ಲಿ ಸಮುದಾಯ ಅಡುಗೆ ಮನೆಗಳನ್ನು ಸ್ಥಾಪಿಸ ಎಲ್ಲರಿಗೂ ಊಟ ನೀಡುವ ಕಾರ್ಯವನ್ನು ಯುದ್ಧೋಪಾದಿಯಲ್ಲಿ ಮಾಡಲಾಗುತ್ತಿದೆ ಎಂದು ಅವರು ಹೇಳಿದರು.