ಗೊಂಡಾ (ಉ.ಪ್ರ): ಮೂವರು ದಲಿತ ಸಹೋದರಿಯರ ಮೇಲೆ ದುಷ್ಕರ್ಮಿಗಳು ಕೆಮಿಕಲ್ ಮೂಲಕ ದಾಳಿ ಮಾಡಿ ಅಮಾನವೀಯತೆ ಮೆರೆದಿದ್ದಾರೆ. ಇಲ್ಲಿನ ಪಕ್ಕ ಗ್ರಾಮದ ಪರಸ್ಪುರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ತಡರಾತ್ರಿ ಘಟನೆ ನಡೆದಿದೆ.
ಉತ್ತರ ಪ್ರದೇಶದಲ್ಲಿ ಮೂವರು ದಲಿತ ಸಹೋದರಿಯರ ಮೇಲೆ ಕೆಮಿಕಲ್ ದಾಳಿ
ಮೂವರು ಯುವತಿಯರು ತಮ್ಮ ನಿವಾಸದಲ್ಲಿ ಮಲಗಿದ್ದ ವೇಳೆ ದುಷ್ಕರ್ಮಿಗಳು ರಾಸಾಯನಿಕ ಪದಾರ್ಥ ಎರಚಿ ಪರಾರಿಯಾಗಿದ್ದಾರೆ.
ಮೂವರು ದಲಿತ ಸಹೋದರಿಯರ ಮೇಲೆ ಆ್ಯಸಿಡ್ ದಾಳಿ
ಮೂವರು ಯುವತಿಯರು ತಮ್ಮ ನಿವಾಸದಲ್ಲಿ ಮಲಗಿದ್ದ ವೇಳೆ ದುಷ್ಕರ್ಮಿಗಳು ಕೆಮಿಕಲ್ ಎರಚಿ ಪರಾರಿಯಾಗಿದ್ದಾರೆ. ಪರಿಣಾಮ ಓರ್ವ ಸಹೋದರಿಗೆ ಶೇ.30ರಷ್ಟು ಸುಟ್ಟ ಗಾಯವಾಗಿದೆ. ಇನ್ನಿಬ್ಬರಿಗೆ ಶೇ.20 ಹಾಗೂ 7ರಷ್ಟು ಸುಟ್ಟ ಗಾಯವಾಗಿದೆ.
ಈ ಘಟನೆ ತಿಳಿದ ತಕ್ಷಣ ಪೊಲೀಸರು ಸ್ಥಳಕ್ಕಾಗಮಿಸಿದ್ದು, ಮೂವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ದಾಳಿಗೆ ನಿಖರ ಕಾರಣ ತಿಳಿದುಬಂದಿಲ್ಲ. ಇನ್ನು ಕೃತ್ಯಕ್ಕೆ ಬಳಸಿರುವ ಕೆಮಿಕಲ್ ಯಾವುದು ಎಂಬುವುದರ ಬಗ್ಗೆ ವೈದ್ಯರು ಪರೀಕ್ಷೆ ನಡೆಸುತ್ತಿದ್ದಾರೆ ಎಂದು ಗೋಂಡಾ ಪೊಲೀಸ್ ವರಿಷ್ಠಾಧಿಕಾರಿ ಮಾಹಿತಿ ನೀಡಿದ್ದಾರೆ.
Last Updated : Oct 13, 2020, 1:35 PM IST