ಗೊಂಡಾ (ಯುಪಿ ): ಜಿಲ್ಲೆಯ ಸರಯ ಗ್ರಾಮದಲ್ಲಿ ವ್ಯಕ್ತಿಯೊಬ್ಬ ತನ್ನ ತಾಯಿಯನ್ನೇ ಚಾಕುವಿನಿಂದ ಇರಿದು ಕೊಂದಿದ್ದಾನೆ.
ಮದ್ಯ ಸೇವನೆಗೆ ಹಣ ನೀಡಲಿಲ್ಲವೆಂದು ತಾಯಿಯನ್ನೇ ಚಾಕುವಿನಿಂದ ಇರಿದು ಕೊಂದ ಮಗ! - ಕುಡಿಯಲು ಹಣ ನೀಡದಕ್ಕೆ ತಾಯಿಯನ್ನು ಇರಿದು ಕೊಂದ ಮಗ
ವಿಪರೀತ ಕುಡಿತದ ಚಟ ಹೊಂದಿದ್ದ ವ್ಯಕ್ತಿಯೊಬ್ಬ ಮದ್ಯ ಖರೀದಿಸಲು ಹಣ ನೀಡಿಲ್ಲವೆಂದು ಸ್ವಂತ ತಾಯಿಯನ್ನೇ ಇರಿದು ಕೊಂದಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
ಕುಡಿಯಲು ಹಣ ನೀಡದಕ್ಕೆ ತಾಯಿಯನ್ನು ಇರಿದು ಕೊಂದ ಮಗ
ಸಂಜಯ್ ಶುಕ್ಲಾ ಎಂಬಾತ ತಾಯಿಯನ್ನು ಕೊಂದ ಆರೋಪಿ. ವಿಪರೀತ ಮದ್ಯ ವ್ಯಸನಿಯಾಗಿದ್ದ ಶುಕ್ಲಾಗೆ ಕುಡಿಯಲು ತಾಯಿ ಹಣ ನೀಡಿಲ್ಲ ಎಂದು ಕೋಪದಿಂದ ಇರಿದು ಕೊಂದಿದ್ದಾನೆ. ಆರೋಪಿ ವಿರುದ್ಧ ಮೃತ ಮಹಿಳೆಯ ಮೊಮ್ಮಗ ಶಶಾಂಕ್ ಶುಕ್ಲಾ ಪೊಲೀಸರಿಗೆ ದೂರು ನೀಡಿದ್ದು, ಆರೋಪಿಯ ಬಂಧನಕ್ಕಾಗಿ ಪೊಲೀಸರು ಬಲೆ ಬೀಸಿದ್ದಾರೆ. ಮಹಿಳೆಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.
ಕೊಲೆ ಆರೋಪಿ ಸಂಜಯ್ ಶುಕ್ಲಾ ಪ್ರತಿದಿನ ಕುಡಿದು ಬಂದು ಹೆಂಡತಿಗೆ ಹೊಡೆಯುತ್ತಿದ್ದನಂತೆ. ಈ ಕಾರಣದಿಂದ ಆಕೆ ಗಂಡನನ್ನು ಬಿಟ್ಟು ತವರು ಮನೆಗೆ ಹೋಗಿದ್ದಾಳೆ ಎನ್ನಲಾಗಿದೆ.