ಲಕ್ನೋ:ಪಾರ್ಲರ್ ಹೆಸರಿನಲ್ಲಿ ಸೆಕ್ಸ್ ರಾಕೆಟ್ ನಡೆಸುತ್ತಿದ್ದ ಅಡ್ಡೆ ಮೇಲೆ ದಾಳಿ ನಡೆಸಿರುವ ಪೊಲೀಸರು, ನಾಲ್ವರು ಮಹಿಳೆಯರು, ಇಬ್ಬರು ಗ್ರಾಹಕರು ಸೇರಿ ಏಳು ಮಂದಿಯನ್ನು ಬಂಧನ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ಪಾರ್ಲರ್ ಹೆಸ್ರಲ್ಲಿ ಸೆಕ್ಸ್ ರಾಕೆಟ್... ನಾಲ್ವರು ಯುವತಿಯರು ಸೇರಿ ಏಳು ಮಂದಿಯ ಬಂಧನ
ಉತ್ತರಪ್ರದೇಶದ ಮಹಾರಾಜ್ಗಂಜ್ನಲ್ಲಿ ಸೆಕ್ಸ್ ರಾಕೆಟ್ ಬಯಲುಗೊಳಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದು, ಇದರ ಹಿಂದೆ ದೊಡ್ಡ ಜಾಲ ಇರುವುದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ.
ಉತ್ತರಪ್ರದೇಶದ ಮಹಾರಾಜ್ಗಂಜ್ ಪಟ್ಟಣದಲ್ಲಿನ ಪಾರ್ಲರ್ವೊಂದರಲ್ಲಿ ಈ ದಂಧೆ ನಡೆಸಲಾಗುತ್ತಿತ್ತು ಎಂದು ಪೊಲೀಸ್ ಅಧಿಕಾರಿ ಮಾಹಿತಿ ನೀಡಿದ್ದಾರೆ. ಮಹಿಳೆಯೋರ್ವಳು ವಾಟ್ಸಪ್ ಮೂಲಕ ಗ್ರಾಹಕರನ್ನ ಸಂಪರ್ಕಿಸಿ, ಪಾರ್ಲರ್ನಲ್ಲಿ ಕೆಲಸ ಮಾಡ್ತಿದ್ದ ಹುಡುಗಿಯರ ಫೋಟೋ ಕಳುಹಿಸುತ್ತಿದ್ದಳು ಎಂದು ತಿಳಿದು ಬಂದಿದೆ. ಪ್ರಾಥಮಿಕ ವಿಚಾರಣೆಯಲ್ಲಿ ಈ ದಂಧೆಯಲ್ಲಿ ಕಾಲೇಜ್ವೊಂದರ ಅನೇಕ ವಿದ್ಯಾರ್ಥಿನಿಯರು ಸಹ ಭಾಗಿಯಾಗಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ನೆರೆಹೊರೆಯ ವ್ಯಕ್ತಿಯೊಬ್ಬರು ನೀಡಿರುವ ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿದ್ದಾರೆ. ಈ ವೇಳೆ ಹಲವು ಮಂದಿ ಹುಡುಗಿಯರ ಛಾಯಾಚಿತ್ರ ಹೊಂದಿರುವ ಅಲ್ಬಮ್ ಕೂಡ ವಶಕ್ಕೆ ಪಡೆದುಕೊಂಡಿದ್ದು, ಸ್ಥಳದಿಂದ ವಿವಿಧ ಡ್ರಗ್ಸ್ ಮತ್ತು ಅಕ್ರಮ ವಸ್ತು ವಶಪಡಿಸಿಕೊಂಡಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.