ಕುಶಿನಗರ:ಲವ್ ಜಿಹಾದ್ ವಿರುದ್ಧ ಉತ್ತರಪ್ರದೇಶ ಸರ್ಕಾರವು ಕಠಿಣ ಕಾನೂನು ಸಮರ ಸಾರಿದ್ದು, ಕಾನೂನು ಉಲ್ಲಂಘಿಸುವವರ ವಿರುದ್ಧ ದೂರು ದಾಖಲಿಸುತ್ತಿದೆ.
ಲವ್ ಜಿಹಾದ್ ವಿರುದ್ಧ ಕಠಿಣ ಕಾನೂನು ತಂದ ಬಳಿಕವೂ ಅನೇಕ ಘಟನೆಗಳು ನಡೆಯುತ್ತಿದ್ದು, ಕುಶಿನಗರದಲ್ಲಿ ಲವ್ ಜಿಹಾದ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕಿಕಿಯಾ ಪೊಲೀಸರು ಮಂಗಳವಾರ ರಾತ್ರಿ ನಿಖಾವನ್ನು ನಿಲ್ಲಿಸಿದ್ದು, ವಧು, ವರ ಮತ್ತು ಸಂಬಂಧಿಕರನ್ನು ಠಾಣೆಗೆ ಕರೆದೊಯ್ದು ತನಿಖೆ ನಡೆಸುತ್ತಿದ್ದಾರೆ.