ಕರ್ನಾಟಕ

karnataka

ETV Bharat / bharat

ಗಾಜಿಯಾಬಾದ್​ನಲ್ಲಿ ಸಿಲುಕಿಕೊಂಡಿದ್ದ ಮಹಿಳೆ ಸುರಕ್ಷಿತವಾಗಿ ಮನೆಗೆ - ಗಾಜಿಯಾಬಾದ್ ಪೊಲೀಸ್

ಲಾಕ್​ಡೌನ್ ನಡುವೆ ರಾಷ್ಟ್ರ ರಾಜಧಾನಿಯಲ್ಲಿ ಸಿಲುಕಿಕೊಂಡಿದ್ದ ತೆಲಂಗಾಣದ ಮಹಿಳೆಯೊಬ್ಬರನ್ನು ಸುರಕ್ಷಿತವಾಗಿ ಮನೆಗೆ ತಲುಪಿಸಲಾಗಿದೆ.

woman
woman

By

Published : Jun 23, 2020, 9:33 AM IST

ನವದೆಹಲಿ: ರಾಷ್ಟ್ರವ್ಯಾಪಿ ಕೊರೊನಾ ವೈರಸ್ ಬಿಕ್ಕಟ್ಟಿನ ಮಧ್ಯೆ ಗಾಜಿಯಾಬಾದ್​ನಲ್ಲಿ ಸಿಲುಕಿಕೊಂಡಿದ್ದ ತೆಲಂಗಾಣದ ಮಹಿಳೆಯನ್ನು ಮನೆಗೆ ತಲುಪಿಸಲಾಗಿದೆ.

ಗಾಜಿಯಾಬಾದ್ ಪೊಲೀಸರು ತೆಲಂಗಾಣ ಪೊಲೀಸರ ಸಹಯೋಗದೊಂದಿಗೆ ಮಹಿಳೆಗೆ ಸಹಾಯ ಮಾಡಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

"ರಾಷ್ಟ್ರವ್ಯಾಪಿ ಲಾಕ್‌ಡೌನ್ ಜಾರಿಗೆ ಬರುವ ಒಂದು ದಿನ ಮೊದಲು ಮಾಮ್ ನೂರಿ ಎಂಬ ಮಹಿಳೆ ದೆಹಲಿಗೆ ತೆರಳಿದ್ದರು. ಆದರೆ, ಲಾಕ್​ಡೌನ್​ ಜಾರಿಯಾದ ಬಳಿಕ ತೆಲಂಗಾಣದಲ್ಲಿರುವ ತಮ್ಮ ಮನೆಗೆ ತೆರಳಲು ಪ್ರಯತ್ನಿಸುತ್ತಿದ್ದರು. ಅನ್​ಲಾಕ್ 1.0 ಘೋಷಣೆಯಾದ ಬಳಿಕ ನೂರಿ ಮನೆಗೆ ಹಿಂದಿರುಗಲು ನಿರ್ಧರಿಸಿದ್ದರು. ಆದರೆ, ದೆಹಲಿಯಿಂದ ತೆಲಂಗಾಣಕ್ಕೆ ಹೋಗುವ ಆರೋಗ್ಯಕರ ಮಾನಸಿಕ ಸ್ಥಿತಿಯಲ್ಲಿ ಅವರು ಇರಲಿಲ್ಲ"ಎಂದು ಪೋಲೀಸ್ ಸಿಬ್ಬಂದಿ ಹೇಳಿದ್ದಾರೆ.

ಮೂಲಗಳ ಪ್ರಕಾರ, ಮಹಿಳೆ ಗಾಜಿಯಾಬಾದ್‌ನ ಸಿಹಾನಿ ಗೇಟ್ ತಲುಪಿದ್ದು, ಅಲ್ಲಿ ಪೊಲೀಸ್ ವರಿಷ್ಠಾಧಿಕಾರಿ ನೀರಜ್ ಕುಮಾರ್ ಆಕೆಯನ್ನು ಗಮನಿಸಿದ್ದಾರೆ. ಬಳಿಕ ಅವರು ತೆಲಂಗಾಣ ಪೊಲೀಸ್ ಎಸ್ಪಿ ಸಂಗ್ರಾಮ್ ಸಿಂಗ್ ಅವರಿಗೆ ಮಾಹಿತಿ ನೀಡಿದ್ದು, ಅವರ ಮೂಲಕ ಮಹಿಳೆಯನ್ನ ಸುರಕ್ಷಿತವಾಗಿ ಅವರ ಸ್ವಸ್ಥಳಕ್ಕೆ ತಲುಪಿಸಲಾಗಿದೆ.

ABOUT THE AUTHOR

...view details