ಕಾನ್ಪುರ :ಇತ್ತೀಚೆಗೆ ಪೊಲೀಸ್ ಎನ್ಕೌಂಟರ್ಗೆ ಬಲಿಯಾಗಿರುವ ದರೋಡೆಕೋರ ವಿಕಾಸ್ ದುಬೆಯ ಖಜಾಂಚಿ ಜೈ ಬಾಜಪೇಯಿ ಮತ್ತು ಆತನ ಸಹವರ್ತಿ ಪ್ರಶಾಂತ್ ಶುಕ್ಲಾ ಅಲಿಯಾಸ್ ಡಬ್ಬು ಎಂಬಾತನನ್ನು ಬಿಕ್ರು ಗ್ರಾಮದಲ್ಲಿ ಪೊಲೀಸರು ಬಂಧಿಸಿದ್ದಾರೆ.
ಜುಲೈ 1 ರಂದು ಜೈ ಬಾಜಪೇಯಿ ಬಿಕ್ರು ಗ್ರಾಮಕ್ಕೆ ಆಗಮಿಸಿ ದುಬೆಗೆ 2 ಲಕ್ಷ ರೂ. ನೀಡಿದ್ದ. ಇದರ ಜೊತೆಗೆ ಈತನ ಮೇಲೆ ದುಬೆಗೆ ಶಸ್ತ್ರಾಸ್ತ್ರ ಮತ್ತು ಐಶಾರಾಮಿ ವಾಹನಗಳನ್ನು ಒದಗಿಸಿದ ಆರೋಪವೂ ಇದೆ. ಒಂದು ಮಾಹಿತಿಯ ಪ್ರಕಾರ, ಕಾನ್ಪುರದಲ್ಲಿ ನಡೆದ ಪೊಲೀಸರ ಹತ್ಯೆಯ ಮೊದಲು ಅಂದರೆ ಜುಲೈ 2 ರಂದು ಜೈ ಬಾಜಪೇಯಿ ಮತ್ತು ಪ್ರಶಾಂತ್ ಶುಕ್ಲಾ ವಿಕಾಸ್ ದುಬೆಯನ್ನು ಭೇಟಿಯಾಗಿದ್ದರು. ಈ ವೇಳೆ, ದುಬೆಗೆ 2 ಲಕ್ಷ ರೂ ದುಡ್ಡು, 25 ಲೈವ್ ಕಾರ್ಟ್ರಿಜ್ ರಿವಾಲ್ವರ್ ನೀಡಿದ್ದರು.