ಫತೇಪುರ್(ಉತ್ತರ ಪ್ರದೇಶ):ಕಂಠಪೂರ್ತಿ ಕುಡಿದ ಮಗನೋರ್ವ ಹೆತ್ತ ತಾಯಿ ಮೇಲೆ ಅತ್ಯಾಚಾರವೆಸಗಿರುವ ಅಮಾನವೀಯ ಘಟನೆ ಉತ್ತರ ಪ್ರದೇಶದ ಫತೇಪುರ್ದಲ್ಲಿ ನಡೆದಿದ್ದು, ಆರೋಪಿ ಮಗನ ವಿರುದ್ಧ ತಾಯಿ ದೂರು ದಾಖಲು ಮಾಡಿದ್ದಾಳೆ.
ಕುಡಿದ ನಶೆಯಲ್ಲಿ ಹೆತ್ತ ತಾಯಿ ಮೇಲೆ ಕಾಮುಕ ಮಗನಿಂದ ರೇಪ್! - ವೃದ್ಧ ತಾಯಿ ಮೇಲೆ ಕಾಮುಕ ಮಗನಿಂದ ರೇಪ್
ಉತ್ತರ ಪ್ರದೇಶದಲ್ಲಿ ಅಮಾನವೀಯ ಘಟನೆ ನಡೆದಿರುವುದು ಬೆಳಕಿಗೆ ಬಂದಿದ್ದು, 75 ವರ್ಷದ ವೃದ್ಧ ತಾಯಿ ಮೇಲೆ ಕಾಮುಕ ಮಗನೋರ್ವ ಅತ್ಯಾಚಾರವೆಸಗಿದ್ದಾನೆ.
Mother rape
ಪತೇಪುರ್ದ ಸಿಕಾರಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಕಂಠಪೂರ್ತಿ ಕುಡಿದು ಮನೆಗೆ ಬಂದಿದ್ದ ಮಗ 75 ವರ್ಷದ ವೃದ್ಧ ತಾಯಿ ಮೇಲೆ ದುಷ್ಕೃತ್ಯವೆಸಗಿದ್ದಾನೆ. ಘಟನೆಗೆ ಸಂಬಂಧಿಸಿದಂತೆ ಆರೋಪಿಯ ಹೆಂಡತಿ ಕೂಡ ಮಾಹಿತಿ ನೀಡಿದ್ದಾಳೆ.
ಈಗಾಗಲೇ ಆತನ ಬಂಧನ ಮಾಡುವಲ್ಲಿ ಪೊಲೀಸರು ಯಶಸ್ವಿಯಾಗಿದ್ದು, ವಿವಿಧ ಕಾಯ್ದೆಯಡಿ ದೂರು ದಾಖಲು ಮಾಡಿಕೊಂಡಿದ್ದಾರೆ. ಇನ್ನು ವೃದ್ಧ ಮಹಿಳೆಯನ್ನ ವೈದ್ಯಕೀಯ ಪರೀಕ್ಷೆಗಾಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಅತ್ಯಾಚಾರ ನಡೆದಿರುವುದು ದೃಢಪಟ್ಟಿದೆ.
Last Updated : Jan 7, 2021, 10:46 PM IST