ಕರ್ನಾಟಕ

karnataka

ETV Bharat / bharat

ಮದ್ಯ ಕೊಳ್ಳಲು ಆಭರಣ ಕೊಡದ ಪತ್ನಿಯನ್ನು ಕೊಂದ ಪತಿ - ಪತಿಯಿಂದಲೇ ಪತ್ನಿಯ ಹತ್ಯೆ

ಕೊರೊನಾ ಭೀತಿ ಹಿನ್ನೆಲೆ ಮದ್ಯ ಮಾರಾಟಕ್ಕೆ ಬ್ರೇಕ್​ ಹಾಕಲಾಗಿತ್ತು. ಇದರಿಂದ ಹಲವು ಕುಟುಂಬಗಳಲ್ಲಿ ಶಾಂತಿ ನೆಲೆಸಿದ್ದಲ್ಲದೆ, ಅಪರಾಧ ಪ್ರಕರಣ ಸಂಖ್ಯೆಯಲ್ಲೂ ಇಳಿಕೆ ಕಂಡಿತ್ತು. ಆದರೀಗ ಮದ್ಯ ಮಾರಾಟಕ್ಕೆ ಅವಕಾಶ ನೀಡಲಾಗಿದೆ. ಅಪರಾಧ ಪ್ರಕರಣಗಳೂ ಹೆಚ್ಚುತ್ತಿವೆ. ಮದ್ಯ ಸೇವಿಸಲು ಆಭರಣ ನೀಡದ ಪತ್ನಿಯನ್ನು ಇಲ್ಲೊಬ್ಬ ಪತಿ ಕೊಲೆ ಮಾಡಿರುವ ಪ್ರಕರಣ ವರದಿಯಾಗಿದೆ.

Uttar Pradesh: Man kills wife for refusing money to buy liquor
ಮದ್ಯಕೊಳ್ಳಲು ಆಭರಣ ಕೊಡುವಂತೆ ಪೀಡಿಸಿದ: ಕೊಡದ ಪತ್ನಿಯನ್ನು ಕೊಂದೇ ಬಿಟ್ಟ

By

Published : May 8, 2020, 5:17 PM IST

ಫರುಖಾಬಾದ್​​​​​ (ಉತ್ತರಪ್ರದೇಶ): ಲಾಕ್​ಡೌನ್​​ ಸಡಿಲಿಕೆ ಹಾಗೂ ಆರ್ಥಿಕ ಸಂಕಷ್ಟದ ಕಾಲದಲ್ಲಿ ದೇಶದ ಹಲವೆಡೆ ಮದ್ಯದಂಗಡಿಗಳನ್ನು ತೆರೆಯಲಾಗಿದೆ. ಇದರ ಜೊತೆ ಜೊತೆಗೆ ಕುಟುಂಬ ಕಲಹಗಳು, ಅಪರಾಧ ಪ್ರರಕಣಗಳು ಹೆಚ್ಚುತ್ತಿವೆ.

ಉತ್ತರ ಪ್ರದೇಶದ ಫರುಖಾಬಾದ್​​ನಲ್ಲಿ ಮದ್ಯ ಖರೀದಿಸಲು ಆಭರಣ ನೀಡಲು ನಿರಾಕರಿಸಿದ ಪತ್ನಿಯನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ನಡೆದಿದೆ.

ಇಲ್ಲಿನ ಬಮರುಲಿಯಾ ಗ್ರಾಮದ ಪ್ರಶಾಂತ್ ಎಂಬಾತ ಮದ್ಯ ಸೇವಿಸಲು ತನ್ನ ಪತ್ನಿ ಬಳಿ ಆಭರಣಕ್ಕಾಗಿ ಪೀಡಿಸಿದ್ದಾನೆ. ಇದಕ್ಕೆ ಪತ್ನಿ ಒಪ್ಪದೆ ನಿರಾಕರಿಸಿದ್ದರಿಂದ ಕೋಪಗೊಂಡ ಪ್ರಶಾಂತ್ ಪತ್ನಿ ಲಕ್ಷ್ಮೀ ದೇವಿಯನ್ನು ಮರದ ಕೋಲಿನಿಂದ ಹೊಡೆದು ಕೊಲೆ ಮಾಡಿದ್ದಾನೆ.

ಈ ಸಂಬಂಧ ನವಾಬ್​ಜಂಗ್​ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಪ್ರಶಾಂತ್​ಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

ಈ ಘಟನೆ ಕುರಿತು ಮಾತನಾಡಿರುವ ಸ್ಟೇಷನ್​ ಹೌಸ್ ಅಧಿಕಾರಿ ರಾಕೇಶ್ ಕುಮಾರ್ ಶರ್ಮಾ, ಪ್ರಶಾಂತ್​ ಒಬ್ಬ ಮದ್ಯ ವ್ಯಸನಿಯಾಗಿದ್ದು, ತನ್ನ ಪತ್ನಿಯನ್ನು ಯಾವಾಗಲೂ ಹಣಕ್ಕಾಗಿ ಪೀಡಿಸುತ್ತಿದ್ದ. ಈಗಲೂ ತನ್ನ ಆಭರಣ ಕೊಡುವಂತೆ ಪೀಡಿಸಿದ್ದಾನೆ. ಇದಕ್ಕೆ ಲಕ್ಷ್ಮೀ ಒಪ್ಪದ ಕಾರಣ ಆಕೆಗೆ ಮರದ ಕೋಲಿನಿಂದ ರಕ್ತ ಹರಿಯುವವರೆಗೂ ಹೊಡೆದಿದ್ದಾನೆ. ಬಳಿಕ ಆಕೆಯ ಮೈಮೇಲಿದ್ದ ಚಿನ್ನದ ಆಭರಣಗಳೊಂದಿಗೆ ಪರಾರಿಯಾಗಿದ್ದಾನೆ ಎಂದಿದ್ದಾರೆ.

ತೀವ್ರ ರಸ್ತಸ್ರಾವವಾದ ಹಿನ್ನೆಲೆ ಲಕ್ಷ್ಮೀ ಸಾವನ್ನಪ್ಪಿದ್ದಾಳೆ. ಆಕೆಯ ಪೋಷಕರು ಪತಿಯ ವಿರುದ್ಧ ನವಾಬ್​​​​ಗಂಜ್​ ಠಾಣೆಯಲ್ಲಿ ದೂರು ನೀಡಿದ್ದಾರೆ. ಈ ಹಿನ್ನೆಲೆ ಪ್ರಶಾಂತ್ ವಿರುದ್ಧ ಐಪಿಸಿ ಸೆಕ್ಷನ್​ 302(ಕೊಲೆ) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದೇವೆ ಎಂದಿದ್ದಾರೆ.

ABOUT THE AUTHOR

...view details