ಬಂಡಾ(ಉತ್ತರ ಪ್ರದೇಶ): ದಾಂಪತ್ಯದಲ್ಲಿನ ಕ್ಷುಲ್ಲಕ ಕಾರಣಕ್ಕೆ ಕಲಹ ಉಂಟಾದ ಹಿನ್ನೆಲೆ, ಪತ್ನಿ ಮೇಲೆ ಕುಪಿತಗೊಂಡ ಪತಿವೋರ್ವ ಆಕೆಯ ರುಂಡವನ್ನೇ ಕತ್ತರಿಸಿ ಪೊಲೀಸರ ಮುಂದೆ ಶರಣಾಗಿರುವ ಘಟನೆ ಜಿಲ್ಲೆಯ ನೇತಾರ ನಗರದಲ್ಲಿ ನಡೆದಿದೆ.
ಬಂಡಾದ ನೇತಾರ ನಗರದ ನಿವಾಸಿಯಾಗಿರುವ ಚಿನ್ನಾರ್ ಯಾದವ್ ಎಂಬಾತ ಇಂದು ಬೆಳಗ್ಗೆ 7.30ರ ಸುಮಾರಿಗೆ ಪತ್ನಿ ವಿಮ್ಲಾ (35) ಜೊತೆ ಜಗಳವಾಡಿದ್ದಾನೆ. ಕೌಟುಂಬಿಕ ಕಲಹ ವಿಕೋಪಕ್ಕೆ ತಿರುಗಿದ್ದು, ಹೆಂಡತಿ ಮಾತಿಗೆ ಕೋಪಗೊಂಡ ಗಂಡ ಸ್ಥಳದಲ್ಲಿದ್ದ ಹರಿತವಾದ ಆಯುಧದಿಂದ ಆಕೆಯ ಶಿರವನ್ನೇ ತುಂಡರಿಸಿಬಿಟ್ಟಿದ್ದಾನೆ. ಬಳಿಕ ಪತ್ನಿಯ ರುಂಡವನ್ನು ಕೊಂಡೊಯ್ದು ಪೊಲೀಸ್ ಠಾಣೆ ಮುಂದಿಟ್ಟಿದ್ದಾನೆ. ಕೋಪದಿಂದ ತನ್ನ ಮಡದಿಯನ್ನು ಕೊಲೆಗೈದಿರುವುದಾಗಿ ಒಪ್ಪಿಕೊಂಡಿದ್ದಾನೆ.