ಕರ್ನಾಟಕ

karnataka

ETV Bharat / bharat

ಹಥ್ರಾಸ್​ ಸಂತ್ರಸ್ತೆ ಮನೆಗೆ ಭೇಟಿ ನೀಡಲು ಹೊರಟಿದ್ದ ರಾಹುಲ್​, ಪ್ರಿಯಾಂಕಾ ಪೊಲೀಸರ ವಶಕ್ಕೆ - ಹತ್ರಾಸ್​ ಗ್ಯಾಂಗ್​ರೇಪ್​

ಹಥ್ರಾಸ್​​ ಸಂತ್ರಸ್ತೆ ಕುಟುಂಬವನ್ನು ಭೇಟಿಯಾಗುವ ಉದ್ದೇಶದಿಂದ ಅವರ ಮನೆಗೆ ತೆರಳುತ್ತಿದ್ದ ರಾಹುಲ್​ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿಗೆ ಇದೀಗ ಅಧಿಕಾರಿಗಳು ಘೇರಾವ್​​ ಹಾಕಿದ್ದಾರೆ. ಹೀಗಾಗಿ ಸ್ಥಳದಲ್ಲಿ ಸ್ವಲ್ಪ ಸಮಯ ಗೊಂದಲದ ವಾತಾವರಣ ನಿರ್ಮಾಣಗೊಂಡಿತ್ತು.

Uttar Pradesh gang-rape case
Uttar Pradesh gang-rape case

By

Published : Oct 1, 2020, 3:32 PM IST

Updated : Oct 1, 2020, 3:43 PM IST

ನವದೆಹಲಿ: ಉತ್ತರ ಪ್ರದೇಶದ ಹಥ್ರಾಸ್​​ನಲ್ಲಿ ನಡೆದಿದೆ ಎನ್ನಲಾದ ಅತ್ಯಾಚಾರ ಪ್ರಕರಣ ಕುರಿತು ದಿನದಿಂದ ದಿನಕ್ಕೆ ಹೆಚ್ಚು ಆಕ್ರೋಶ ವ್ಯಕ್ತವಾಗುತ್ತಿದೆ. ಇದೀಗ ಸಂತ್ರಸ್ತೆ ಕುಟುಂಬವನ್ನು ಭೇಟಿಯಾಗಲು ತೆರಳುತ್ತಿದ್ದ ಕಾಂಗ್ರೆಸ್​ ಮುಖಂಡ ರಾಹುಲ್​ ಗಾಂಧಿ ಹಾಗೂ ಪ್ರಿಯಾಂಕಾ ವಾದ್ರಾ ಅವರನ್ನು ವಶಕ್ಕೆ ಪಡೆಯಲಾಗಿದೆ.

ರಾಹುಲ್​,ಪ್ರಿಯಾಂಕಾ ತಡೆಹಿಡಿದ ಪೊಲೀಸರು

ಸಂತ್ರಸ್ತೆ ಕುಟುಂಬ ಭೇಟಿ ಮಾಡಲು ತೆರಳುತ್ತಿದ್ದ ರಾಹುಲ್​ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿಗೆ ಯಮುನಾ ಎಕ್ಸ್​ಪ್ರೆಸ್​ ಹೈವೇ ಬಳಿ ತಡೆ ಹಿಡಿಯಲಾಯಿತು. ನಂತರ ಅವರನ್ನು ವಶಕ್ಕೆ ಪಡೆಯಲಾಗಿದೆ ಎಂದು ತಿಳಿದುಬಂದಿದೆ.

ಈ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ರಾಹುಲ್​ ಗಾಂಧಿ, ಪೊಲೀಸರು ನನ್ನನ್ನು ತಳ್ಳಿದರು. ಲಾಠಿ ಚಾರ್ಜ್​ ಸಹ ಮಾಡಿದ್ದಾರೆ ಎಂದು ರಾಹುಲ್​ ಗಂಭೀರ ಆರೋಪ ಮಾಡಿದ್ದಾರೆ.

ನಾನು ನಡೆದುಕೊಂಡು ಹೋಗಿ ಹಥ್ರಾಸ್​​ ತಲುಪುತ್ತೇನೆ. ಯಾವ ಸೆಕ್ಷನ್​ ಅಡಿ ನನ್ನನ್ನು ಬಂಧನ ಮಾಡುತ್ತೀರಿ ಎಂದು ರಾಹುಲ್​ ಪ್ರಶ್ನಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿದ ಪೊಲೀಸ್​​ ಅಧಿಕಾರಿ ಸೆಕ್ಷನ್​​ 188 ಐಪಿಸಿ ಅಡಿ ಬಂಧಿಸುತ್ತಿರುವುದಾಗಿ ತಿಳಿಸಿದ್ದಾರೆ.

ಆಕ್ರೋಶ ಹೊರಹಾಕಿದ ಪ್ರಿಯಾಂಕಾ

ಕಳೆದ ಎರಡು ವಾರಗಳ ಹಿಂದೆ ಯುವತಿ ಮೇಲೆ ನಾಲ್ವರು ಕಾಮುಕರು ಅತ್ಯಾಚಾರವೆಸಗಿದ್ದರು ಎಂಬ ಆರೋಪ ಕೇಳಿಬಂದಿತ್ತು. ದೆಹಲಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದ ವೇಳೆ ಸಂತ್ರಸ್ತೆ ಮೊನ್ನೆ ಸಾವನ್ನಪ್ಪಿದ್ದಳು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರಪ್ರದೇಶ ಸೇರಿದಂತೆ ಎಲ್ಲೆಡೆ ಆಕ್ರೋಶ ಭುಗಿಲೆದ್ದಿದೆ. ಹೀಗಾಗಿ ಪ್ರಕರಣವನ್ನ ಎಸ್​ಐಟಿಗೆ ವಹಿಸಲಾಗಿದೆ.

Last Updated : Oct 1, 2020, 3:43 PM IST

ABOUT THE AUTHOR

...view details