ಕರ್ನಾಟಕ

karnataka

ETV Bharat / bharat

ಆನ್​ಲೈನ್​​ನಲ್ಲಿ ಮಕ್ಕಳ ಅಶ್ಲೀಲ ದಂಧೆ:ಎಂಜಿನಿಯರ್​ ಬಂಧಿಸಿದ ಸಿಬಿಐ! - ಬಿಟೆಕ್​​ ಪದವಿ ಪಡೆದುಕೊಂಡಿರುವ ಎಂಜಿನಿಯರ್​

ಬಿಟೆಕ್​​ ಪದವಿ ಪಡೆದುಕೊಂಡಿರುವ ಎಂಜಿನಿಯರ್​ ಒಬ್ಬ ಸಾಮಾಜಿಕ ಜಾಲತಾಣಗಳಲ್ಲಿ ಅಶ್ಲೀಲ ದಂಧೆ ನಡೆಸುತ್ತಿದ್ದ ಆರೋಪದ ಮೇಲೆ ಬಂಧನ ಮಾಡಲಾಗಿದೆ

Uttar Pradesh engineer arrest
Uttar Pradesh engineer arrest

By

Published : Sep 26, 2020, 4:25 PM IST

ಸೋನ್​ಭದ್ರ(ಉತ್ತರ ಪ್ರದೇಶ):ಸಾಮಾಜಿಕ ಜಾಲತಾಣಗಳಲ್ಲಿ ಮಕ್ಕಳ ಅಶ್ಲೀಲ ವಿಡಿಯೋ ಹರಿಬಿಡುವ ದಂಧೆ ನಡೆಸುತ್ತಿದ್ದ ಎಂಜಿನಿಯರ್​ ಬಂಧನ ಮಾಡುವಲ್ಲಿ ಸಿಬಿಐ ಯಶಸ್ವಿಯಾಗಿದೆ. ಉತ್ತರ ಪ್ರದೇಶದ ಮೂಲದ ಎಂಜಿನಿಯರ್​​​ ಇನ್​ಸ್ಟಾಗ್ರಾಂನಲ್ಲಿ ಮಕ್ಕಳ ಅಶ್ಲೀಲ ವಿಡಿಯೋ ಹರಿಬಿಟ್ಟು ದಂಧೆ ನಡೆಸುತ್ತಿದ್ದನು.

ಬಿಟೆಕ್​​ ಪದವಿ ಪಡೆದಿರುವ ಸೋನ್​​ಭದ್ರ ನಿವಾಸಿ ನೀರಜ್​ ಯಾದವ್ ವಿರುದ್ಧ​ ಸಿಬಿಐ ಎಫ್​ಐಆರ್​ ದಾಖಲು ಮಾಡಿದೆ. ಈ ಮೊದಲು ದೆಹಲಿಯಲ್ಲಿ ಕೆಲಸ ಮಾಡುತ್ತಿದ್ದ ಅವರು ಸದ್ಯ ಸೋನ್​ಭದ್ರದಿಂದಲೇ ಈ ದಂಧೆ ನಡೆಸುತ್ತಿದ್ದನು.

ಇವರ ನಿವಾಸದ ಮೇಲೆ ದಾಳಿ ನಡೆಸಿರುವ ಸಿಬಿಐ ತಂಡ ಎಲೆಕ್ಟ್ರಾನಿಕ್​​ ಸಾಧನ ಮತ್ತು ಸಂಬಂಧಿತ ದಾಖಲೆ ವಶಪಡಿಸಿಕೊಂಡಿದ್ದಾರೆ. 2019ರಿಂದಲೇ ಆನ್​ಲೈನ್​ ದಂಧೆ ನಡೆಸುತ್ತಿರುವ ವಿಷಯ ಬಹಿರಂಗಗೊಂಡಿದ್ದು, ಇನ್​ಸ್ಟಾಗ್ರಾಂನಲ್ಲಿ ಜಾಹೀರಾತು ನೀಡಿ, ಗ್ರಾಹಕರಿಂದ ಹಣ ಪಾವತಿ ಆದ ಬಳಿಕ ವಾಟ್ಸ್​ಆ್ಯಪ್​​, ಟೆಲಿಗ್ರಾಮ್​, ಇನ್​ಸ್ಟಾಗ್ರಾಮ ಮತ್ತು ಇತರ ಸಾಮಾಜಿಕ ಮಾಧ್ಯಮಗಳ ಮೂಲಕ ವಿಡಿಯೋ ಹಂಚಿಕೊಳ್ಳುತ್ತಿದ್ದನು.

ವಿಚಾರಣೆಗೊಳಪಡಿಸಿದಾಗ ಇತರರ ಹೆಸರು ಬಹಿರಂಗಗೊಳಿಸಿದ್ದಾಗಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಈ ವಿಚಾರವಾಗಿ ಮಾತನಾಡಿರುವ ಆರೋಪಿ ತಂದೆ, ನಾನು ಬಡವ, ಪಾನ್​ ಶಾಪ್​​ ಇಟ್ಟುಕೊಂಡು ಜೀವನ ನಡೆಸುತ್ತಿದ್ದೇನೆ. ನನ್ನ ಮಗನಿಗೆ ಉತ್ತಮ ಶಿಕ್ಷಣ ನೀಡಲು ತುಂಬಾ ಕಷ್ಟಪಟ್ಟಿದ್ದೇನೆ. ಇಂತಹ ಕೆಲಸದಲ್ಲಿ ಆತ ಭಾಗಿಯಾಗಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ABOUT THE AUTHOR

...view details