ಕರ್ನಾಟಕ

karnataka

ETV Bharat / bharat

ಅಯೋಧ್ಯೆ ಭೂಮಿ ಪೂಜೆ: ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ ಯೋಗಿ ಆದಿತ್ಯನಾಥ್​! - ಯೋಗಿ ಆದಿತ್ಯನಾಥ್​

ರಾಮ ಮಂದಿರ ನಿರ್ಮಾಣದ ಭೂಮಿ ಪೂಜೆ ಶಿಲಾನ್ಯಾಸ ಕಾರ್ಯಕ್ರಮಕ್ಕೆ ಕೇವಲ ಎರಡು ದಿನ ಬಾಕಿ ಉಳಿದಿದ್ದು, ಸ್ಥಳಕ್ಕೆ ತೆರಳಿ ಯೋಗಿ ಆದಿತ್ಯನಾಥ್​ ಪರಿಶೀಲನೆ ನಡೆಸಿದರು.

Uttar Pradesh Chief Minister
Uttar Pradesh Chief Minister

By

Published : Aug 3, 2020, 5:15 PM IST

ಅಯೋಧ್ಯೆ(ಉತ್ತರಪ್ರದೇಶ): ಅಯೋಧ್ಯೆಯಲ್ಲಿ ನಿರ್ಮಾಣಗೊಳ್ಳುತ್ತಿರುವ ಶ್ರೀರಾಮ ಮಂದಿರ ಸ್ಥಳಕ್ಕಿಂದು ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ಭೇಟಿ ನೀಡಿ, ಅದರ ಪರರಿಶಿಲನೆ ನಡೆಸಿದರು.

ಆಗಸ್ಟ್​ 5ರಂದು ಭೂಮಿ ಪೂಜೆ ಶಿಲಾನ್ಯಾಸ ಕಾರ್ಯಕ್ರಮ ನಡೆಯಲಿದ್ದು, ಇದರಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗಿಯಾಗಲಿದ್ದಾರೆ. ಹೀಗಾಗಿ ಭದ್ರತೆ ದೃಷ್ಠಿಯಿಂದ ಯೋಗಿ ಆದಿತ್ಯನಾಥ್​ ಪರಿಶೀಲನೆ ನಡೆಸಿ, ಹಿರಿಯ ಅಧಿಕಾರಿಗಳಿಗೆ ಕೆಲವೊಂದು ಮಹತ್ವದ ಸೂಚನೆ ನೀಡಿದ್ದಾಗಿ ತಿಳಿದು ಬಂದಿದೆ.

ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ ಯೋಗಿ ಆದಿತ್ಯನಾಥ್​!

ಸ್ಥಳ ಪರಿಶೀಲನೆ ನಡೆಸಿದ ಬಳಿಕ ಯೋಗಿ ಆದಿತ್ಯನಾಥ್​ ಹನುಮನ್​ಗಿರಿಯಲ್ಲಿ ಆಂಜನೇಯನ ವಿಶೇಷ ಪೂಜೆ ಸಲ್ಲಿಕೆ ಮಾಡಿದರು. ಈ ವೇಳೆ ಮಾತನಾಡಿದ ಮುಖ್ಯಮಂತ್ರಿ, ಭೂಮಿ ಪೂಜೆ ಕಾರ್ಯಕ್ರಮಕ್ಕೆ ಎಲ್ಲ ರೀತಿಯ ವ್ಯವಸ್ಥೆ ಮಾಡಲಾಗಿದ್ದು, ಕೋವಿಡ್​ಗೆ ಹೆಚ್ಚಿನ ಒತ್ತು ನೀಡಲಾಗಿದೆ ಎಂದರು. ಯಾರಿಗೆ ಆಹ್ವಾನ ನೀಡಲಾಗಿದೆ ಅವರು ಮಾತ್ರ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದು, ಪ್ರಧಾನಿ ಮೋದಿ ಆಗಮಿಸಲಿದ್ದಾರೆ ಎಂದು ತಿಳಿಸಿದ್ದಾರೆ.

ಇದೇ ವೇಳೆ ಕಾಂಗ್ರೆಸ್​ ವಿರುದ್ಧ ಹರಿಹಾಯ್ದಿರುವ ಯೋಗಿ ಆದಿತ್ಯನಾಥ್​, ಈ ಪಕ್ಷ​​ ತನ್ನ ಹಿಂದಿನ ಇತಿಹಾಸ ನೋಡಬೇಕು. ರಾಮ ಹುಟ್ಟಿದ ಸ್ಥಳದಲ್ಲಿ ಅಡಿಪಾಯ ಹಾಕಲು ಅವರಿಗೆ ಇಷ್ಟವಿಲ್ಲ. ಈ ವಿಷಯದಲ್ಲಿ ಅಂತಿಮ ಹಂತದ ನಿರ್ಧಾರ ಬರುವುದು ಕೂಡ ಅವರಿಗೆ ಇಷ್ಟಪಟ್ಟಿರಲಿಲ್ಲ. ಜಾತಿ, ಧರ್ಮ ಮತ್ತು ನಂಬಿಕೆ ಆಧಾರದ ಮೇಲೆ ಜನರನ್ನ ವಿಭಜಿಸಿದೆ ಎಂದು ಹೇಳಿದ್ದರು.

ದೇಶದ ಇತಿಹಾಸದಲ್ಲಿ ಇದೊಂದು ಐತಿಹಾಸಿಕ ದಿನ. ಆಗಸ್ಟ್​ 4 ಹಾಗೂ 5ರಂದು ಮನೆಯಿಂದಲೇ ದೀಪ ಬೆಳಗಿಸುವಂತೆ ಮನವಿ ಮಾಡಲಾಗಿದೆ ಎಂದು ಯೋಗಿ ಆದಿತ್ಯನಾಥ್​ ತಿಳಿಸಿದ್ದರು. ಪ್ರಧಾನಿ ಮೋದಿ ಆಗಸ್ಟ್​ 5ರಂದು ಹನುಮನ್​ಗಿರಿಗೆ ಭೇಟಿ ನೀಡುತ್ತಿರುವ ಕಾರಣ ಸ್ಯಾನಿಟೈಸ್​ ಮಾಡಲಾಗಿದ್ದು, ಭೂಮಿ ಪೂಜೆ ಕಾರ್ಯಕ್ರಮಕ್ಕೂ ಮೊದಲು ಅವರು ಈ ಸ್ಥಳಕ್ಕೆ ಭೇಟಿ ನೀಡಲಿದ್ದಾರೆ ಎಂದು ಅಲ್ಲಿನ ಆರ್ಚಕರು ತಿಳಿಸಿದ್ದಾರೆ.

ABOUT THE AUTHOR

...view details