ಲಖನೌ (ಉತ್ತರ ಪ್ರದೇಶ):ಪೊಲೀಸರು ಸಹಕರಿಸದ ಹಿನ್ನೆಲೆಯಲ್ಲಿ ಗಾಯಾಳು ಪತ್ನಿಯನ್ನು ವ್ಯಕ್ತಿಯೊಬ್ಬ ಸೈಕಲ್ ಗಾಡಿಯಲ್ಲಿ ಮಲಗಿಸಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್ ಆಗಿದೆ.
ಬಸ್ತಿ ಜಿಲ್ಲೆಯಲ್ಲಿಈ ಘಟನೆ ನಡೆದಿದ್ದು, ''ಮನೆಯಲ್ಲಿ ನಡೆದ ಗಲಾಟೆಯಲ್ಲಿ ನನ್ನ ಸಹೋದರ, ನನ್ನ ಪತ್ನಿಯ ಮೇಲೆ ಹಲ್ಲೆ ಮಾಡಿದ್ದಾನೆ. ಗಾಯಗೊಂಡಿದ್ದ ಆಕೆಯನ್ನು ನಾನು ಪೊಲೀಸ್ ಠಾಣೆಗೆ ಕರೆತಂದು ದೂರು ದಾಖಲಿಸಿದ್ದೆ. ಈ ವೇಳೆ, ಆಸ್ಪತ್ರೆಗೆ ದಾಖಲಿಸಲು ಸಹಕರಿಸುವಂತೆ ಪೊಲೀಸರಿಗೆ ಮನವಿ ಮಾಡಿದೆ. ಆ್ಯಂಬುಲೆನ್ಸ್ ಕರೆ ಮಾಡಿದರೂ ಸರಿಯಾದ ಸ್ಪಂದನೆ ಸಿಗದ ಕಾರಣ ಆಕೆಯನ್ನು ಸೈಕಲ್ ಗಾಡಿಯಲ್ಲಿ ತೆಗೆದುಕೊಂಡು ಆಸ್ಪತ್ರೆಗೆ ಸಾಗಿಸಿದ್ದೇನೆ'' ಎಂದು ಗಾಯಾಳು ಮಹಿಳೆಯ ಪತಿ ದಿನೇಶ್ ಕುಮಾರ್ ಸ್ಪಷ್ಟನೆ ನೀಡಿದ್ದಾರೆ.