ಈಟಾ, (ಉತ್ತರ ಪ್ರದೇಶ):ಕಂಠಪೂರ್ತಿ ಕುಡಿದಿದ್ದವನೊಬ್ಬ ನಾಗರಹಾವೊಂದನ್ನ ಹಲ್ಲಿನಿಂದ ಕಚ್ಚಿ ಮೂರು ತುಂಡಾಗಿಸಿದ ಹೃದಯ ವಿದ್ರಾವಕ ಘಟನೆ ಉತ್ತರ ಪ್ರದೇಶದ ಈಟಾ ಜಿಲ್ಲೆಯ ಹಳ್ಳಿಯೊಂದರಲ್ಲಿ ನಡೆದಿದೆ.
ಮಲಗಿದ್ದ ಕುಡುಕನನ್ನೇ ಕಚ್ಚಿಬಿಟ್ಟಿತು ನಾಗರಹಾವು!
ಜುಲೈ 28ರಂದು ರಾಜಕುಮಾರ್ ಎಂಬಾತ ಯದ್ವಾತದ್ವಾ ಕುಡಿದಿದ್ದ, ನಿಲ್ಲೋದಕ್ಕೂ ಆಗ್ತಿರಲಿಲ್ಲ. ಅದೇ ಟೈಮ್ಗೆ ರಾತ್ರಿ ವೇಳೆ ನಾಗರಹಾವೊಂದು ಮನೆಯೊಳಕ್ಕೆ ಎಂಟ್ರಿ ಕೊಟ್ಟಿತ್ತು. ಮಲಗಿದ್ದ ರಾಜುಕುಮಾರ್ನ ಕಚ್ಚಿತ್ತು. ಸಿಟ್ಟು ತಡೆಯಲಾರದೆ ತನ್ನ ಕಚ್ಚಿದ ಹಾವನ್ನೇ ಹಿಡಿದು ಹಲ್ಲಿನಿಂದ ಕಚ್ಚಿ ಕೊಂದುಬಿಟ್ಟಿದ್ದ. ಹಾವು ಮೂರು ಪೀಸ್ ಆಗ್ಬಿಡ್ತು. ಹಾವು ಕಚ್ಚಿದ್ದಕ್ಕಿಂತ ಈತ ಹಾವನ್ನ ಕಚ್ಚಿದ್ದಕ್ಕೆ ವಿಷ ಏರಿತ್ತು. ಆತನ ತಂದೆ ತಕ್ಷಣವೇ ಆಸ್ಪತ್ರೆಗೆ ದಾಖಲಿಸಿದ್ದರು. ವೈದ್ಯರ ಬಳಿ ಕುಡುಕನ ತಂದೆ ಎಲ್ಲವನ್ನೂ ವಿವರಿಸಿದ್ದರು.