ಕರ್ನಾಟಕ

karnataka

ETV Bharat / bharat

ಜಾಮೀನಿನ ಮೇಲೆ 17 ವಿದೇಶಿ ತಬ್ಲಿಘಿ ಜಮಾತ್​ ಸದಸ್ಯರ ಬಿಡುಗಡೆ! - ತಬ್ಲಿಘಿ ಜಮಾತ್​ ಸದಸ್ಯರ ಬಿಡುಗಡೆ,

ಜಾಮೀನಿನ ಮೇಲೆ 17 ವಿದೇಶಿ ತಬ್ಲಿಘಿ ಜಮಾತ್​ ಸದಸ್ಯರನ್ನ ಬಿಡುಗಡೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

17 Tablighi Jamaat members released, Tablighi Jamaat members released, Tablighi Jamaat members released news, 17 ತಬ್ಲಿಘಿ ಜಮಾತ್​ ಸದಸ್ಯರ ಬಿಡುಗಡೆ, ತಬ್ಲಿಘಿ ಜಮಾತ್​ ಸದಸ್ಯರ ಬಿಡುಗಡೆ, ತಬ್ಲಿಘಿ ಜಮಾತ್​ ಸದಸ್ಯರ ಬಿಡುಗಡೆ ಸುದ್ದಿ,
ಸಂಗ್ರಹ ಚಿತ್ರ

By

Published : Jul 2, 2020, 2:30 PM IST

ಬಹ್ರೇಚ್ (ಉತ್ತರಪ್ರದೇಶ): ಇಂಡೋನೇಷ್ಯಾ ಮತ್ತು ಥಾಯ್ಲೆಂಡ್​​​​​​​​​​ನ ತಬ್ಲಿಘಿ ಜಮಾತ್‌ನ ಹದಿನೇಳು ಸದಸ್ಯರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ ಎಂದು ಬಹ್ರೇಚ್​ ಪೊಲೀಸರು ತಿಳಿಸಿದ್ದಾರೆ.

ಮಾರ್ಚ್‌ನಲ್ಲಿ ಬಂಧಿಸಲ್ಪಟ್ಟ ಇಂಡೋನೇಷ್ಯಾ ಮತ್ತು ಥಾಯ್ಲೆಂಡ್​​ನ ತಬ್ಲಿಘಿ ಜಮಾತ್‌ನ ಹದಿನೇಳು ಸದಸ್ಯರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ.

ತಲಾ 25 ಸಾವಿರ ರೂ. ಜಾಮೀನಿನ ಮೇಲೆ ತಬ್ಲಿಘಿ ಜಮಾತ್​ನ 17 ಸದಸ್ಯರನ್ನು ಬಿಡುಗಡೆ ಮಾಡಲು ಚೀಫ್​ ಜ್ಯುಡಿಷಿಯಲ್​​​​​ ಮ್ಯಾಜಿಸ್ಟ್ರೇಟ್ ನವನೀತ್ ಕುಮಾರ್ ಭಾರತಿ ಬುಧವಾರ ಆದೇಶಿಸಿದ್ದಾರೆ.

ಪಾಸ್‌ಪೋರ್ಟ್ ಕಾಯ್ದೆ, ವಿದೇಶಿಯರ ಕಾಯ್ದೆ ಮತ್ತು ಸಾಂಕ್ರಾಮಿಕ ಕಾಯ್ದೆ ಸೇರಿದಂತೆ ವಿವಿಧ ವಿಭಾಗಗಳಡಿ ಇಂಡೋನೇಷ್ಯಾದಿಂದ 10 ಮತ್ತು ಥಾಯ್ಲೆಂಡ್​​​​​​‌ನ ಏಳು ಮಂದಿಯನ್ನು ಮಾರ್ಚ್‌ನಲ್ಲಿ ಬಂಧಿಸಲಾಗಿತ್ತು. ಕ್ವಾರಂಟೈನ್​ ಅವಧಿ ಬಳಿಕ ಏಪ್ರಿಲ್ 11 ರಿಂದ ಅವರನ್ನು ಜೈಲಿನಲ್ಲಿಡಲಾಗಿತ್ತು.

ರಾಷ್ಟ್ರ ರಾಜಧಾನಿಯಲ್ಲಿ ತಬ್ಲಿಘಿ ಜಮಾತ್ ಆಯೋಜಿಸಿದ್ದ ದೊಡ್ಡ ಸಭೆಯೇ ದೇಶದ ಕೋವಿಡ್​-19ನ ಪ್ರಮುಖ ತಾಣವಾಗಿ ಹೊರಹೊಮ್ಮಿತ್ತು. ಮಸೀದಿಗಳು ಮತ್ತು ಧಾರ್ಮಿಕ ಸ್ಥಳಗಳಲ್ಲಿ ಅಕ್ರಮವಾಗಿ ವಾಸಿಸುತ್ತಿರುವ ವಿದೇಶಿಯರ ವಿವರಗಳು ದೇಶಾದ್ಯಂತ ವಿವಿಧ ರಾಜ್ಯಗಳಿಂದ ಹೊರಬಂದ ನಂತರ ವಿದೇಶಿ ತಬ್ಲಿಘಿ ಜಮಾತ್ ಸದಸ್ಯರನ್ನು ನಿಷೇಧಿಸುವ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಸರ್ಕಾರ ಹೇಳಿತ್ತು.

ABOUT THE AUTHOR

...view details