ಕರ್ನಾಟಕ

karnataka

ETV Bharat / bharat

ಚಳಿಯಲ್ಲಿ ರೈತರ ಮೇಲೆ ಜಲಫಿರಂಗಿ ಪ್ರಯೋಗ ಅಮಾನವೀಯ: ಶಿವಸೇನೆ ಕಿಡಿ - Haryana Chief Minister Manohar Lal Khattar

ಉತ್ತರ ಭಾರತದಲ್ಲಿ ಶೀತ ಗಾಳಿ ವ್ಯಾಪಕವಾಗಿ ಬೀಸುತ್ತಿದ್ದು, ಇದರ ನಡುವೆ ರೈತರ ಮೇಲೆ ಜಲಫಿರಂಗಿ ಬಳಸಿದ್ದಕ್ಕಾಗಿ ಶಿವಸೇನೆ ಬಿಜೆಪಿಯ ಮೇಲೆ ಹರಿಹಾಯ್ದಿದೆ.

ಶಿವಸೇನೆ
ಶಿವಸೇನೆ

By

Published : Nov 30, 2020, 1:34 PM IST

ಮುಂಬೈ:ಕೃಷಿ ಕಾನೂನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವ ರೈತರ ಮೇಲೆ ಜಲಫಿರಂಗಿ ಉಪಯೋಗಿಸಿರುವುದು ಸರಿಯಲ್ಲ. ಉತ್ತರ ಭಾರತದಲ್ಲಿ ಶೀತ ಗಾಳಿ ಬೀಸುತ್ತಿದೆ. ಈ ಸಮಯದಲ್ಲಿ ಹೀಗೆ ಮಾಡಬಾರದಿತ್ತು. ಇದು ಬಿಜೆಪಿ ನೇತೃತ್ವದ ಆಡಳಿತದ ಕ್ರೂರತನ ತೋರಿಸುತ್ತದೆ ಎಂದು ಸೋಮವಾರ ಶಿವಸೇನೆ ಹೇಳಿದೆ.

ಹೊಸ ಕೃಷಿ ಕಾನೂನುಗಳ ವಿರುದ್ಧ ರೈತರು ಐದು ದಿನಗಳಿಂದ ದೆಹಲಿಯ ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಒಂದು ವೇಳೆ, ಅವರ ಷರತ್ತುಗಳಿಗೆ ಸರ್ಕಾರ ಒಪ್ಪದಿದ್ದರೇ, ರಾಷ್ಟ್ರ ರಾಜಧಾನಿಗೆ ಪ್ರವೇಶಿಸುವ ಐದು ಗಡಿಗಳನ್ನು ನಿರ್ಬಂಧಿಸುವುದಾಗಿ ಬೆದರಿಕೆ ಹಾಕಿದ್ದಾರೆ.

ಕಾಶ್ಮೀರದ ಗಡಿಯಲ್ಲಿ ಭಯೋತ್ಪಾದಕರು ನಮ್ಮ ಸೈನಿಕರನ್ನು ಕೊಲ್ಲುತ್ತಿದ್ದಾರೆ, ಇಲ್ಲಿ ನಮ್ಮ ರೈತರನ್ನು ಭಯೋತ್ಪಾದಕರೆಂದು ಪರಿಗಣಿಸಿ ದೆಹಲಿ ಗಡಿಯಲ್ಲಿ ಅವರ ಮೇಲೆ ದಾಳಿ ನಡೆಸಲಾಗುತ್ತಿದೆ ಎಂದು ಶಿವಸೇನೆ ಕೆಂಡ ಕಾರಿದೆ.

ಚಾಡ್‌ವಿಕ್‌ ಬೋಸ್‌ಮನ್‌ 44ನೇ ಹುಟ್ಟುಹಬ್ಬ: ನಟನ ನೆನಪಿಸಿಕೊಂಡ ವಾಲ್ಟ್​​ ಡಿಸ್ನಿ

"ಬಿಜೆಪಿ ಅರಾಜಕತೆ ಸೃಷ್ಟಿಸಲು ಬಯಸಿದೆ. ಖಲಿಸ್ತಾನ್ ಒಂದು ಮುಚ್ಚಿದ ಅಧ್ಯಾಯವಾಗಿದ್ದು, ಇಂದಿರಾ ಗಾಂಧಿ ಮತ್ತು ಜನರಲ್ ಅರುಂಕುಮಾರ್ ವೈದ್ಯ ತಮ್ಮ ಪ್ರಾಣವನ್ನು ಅರ್ಪಿಸಿದ್ದಾರೆ" ಎಂದು ಹೇಳಿತು.

"ರಾಜಕೀಯ ವಿರೋಧಿಗಳನ್ನು ಹತ್ತಿಕ್ಕಲು ಸರ್ಕಾರ ತನ್ನ ಎಲ್ಲ ಶಕ್ತಿಯನ್ನು ಬಳಸುತ್ತಿದೆ. ಆದರೆ, ದೇಶದ ಶತ್ರುಗಳೊಂದಿಗೆ ವ್ಯವಹರಿಸುವಾಗ ಈ ನಿರ್ಣಯವನ್ನು ಏಕೆ ತೆಗೆದುಕೊಳ್ಳುತ್ತಿಲ್ಲ" ಎಂದು ಶಿವಸೇನೆ ಪ್ರಶ್ನಿಸಿದೆ. ಕಳೆದ ಒಂದು ತಿಂಗಳಲ್ಲಿ ಮಹಾರಾಷ್ಟ್ರದ 11 ಸೈನಿಕರು ಗಡಿಯಲ್ಲಿ ಶತ್ರುಗಳ ವಿರುದ್ಧ ಹೋರಾಡುವಾಗ ಹುತಾತ್ಮರಾದರು ಎಂದು ಶಿವಸೇನೆ ತಿಳಿಸಿದೆ.

ABOUT THE AUTHOR

...view details