ವಾಷಿಂಗ್ಟನ್(ಅಮೆರಿಕ) :ಅಮೆರಿಕದಲ್ಲಿರುವ ಚೀನಾ ಮೂಲದ ಟೆಲಿಕಾಂ ಸೇವೆಗಳನ್ನು ಬ್ಯಾನ್ ಮಾಡೋದಾಗಿ ಅಲ್ಲಿನ ನ್ಯಾಯಾಂಗ ಇಲಾಖೆ ಘೋಷಿಸಿದೆ. ಅಮೆರಿಕ ಮಾರುಕಟ್ಟೆಯಲ್ಲಿರುವ ಚೀನಾ ಟೆಲಿಕಾಂ ಸೇವೆಗಳನ್ನು ಕಾನೂನಾತ್ಮಕ ಹಾಗೂ ಭದ್ರತಾ ಕಾರಣಗಳಿಂದ ಬ್ಯಾನ್ ಮಾಡೋದಾಗಿ ತಿಳಿಸಲಾಗಿದೆ.
ಚೀನಾ ಮೂಲದ ಟೆಲಿಕಾಂ ಸೇವೆಗಳನ್ನ ರದ್ದು ಮಾಡ್ತೀವಿ.. ಚೀನಾಗೂ ಅಮೆರಿಕ ಧಮ್ಕಿ
ಅಮೆರಿಕದಿಂದ ನಿರ್ವಹಿಸಲಾಗುತ್ತಿರುವ ಚೀನಾದ ಟೆಲಿಕಾಂ ಸೇವೆಗಳನ್ನು ರದ್ದು ಮಾಡಬೇಕೆಂದು ನಾವು ಫೆಡರಲ್ ಕಮ್ಯೂನಿಕೇಷನ್ ಕಮಿಷನ್ಗೆ ಶಿಫಾರಸು ಮಾಡುತ್ತೇವೆ ಎಂದು ಅಲ್ಲಿನ ರಕ್ಷಣೆ, ಗೃಹ ಇಲಾಖೆಗಳು ಒಗ್ಗಟ್ಟಾಗಿ ಮನವಿ ಮಾಡಿವೆ.
ಅಮೆರಿಕದಿಂದ ನಿರ್ವಹಿಸಲಾಗುತ್ತಿರುವ ಚೀನಾದ ಟೆಲಿಕಾಂ ಸೇವೆಗಳನ್ನು ರದ್ದು ಮಾಡಬೇಕೆಂದು ನಾವು ಫೆಡರಲ್ ಕಮ್ಯೂನಿಕೇಷನ್ ಕಮಿಷನ್ಗೆ ಶಿಫಾರಸು ಮಾಡುತ್ತೇವೆ ಎಂದು ಅಲ್ಲಿನ ರಕ್ಷಣೆ, ಗೃಹ ಇಲಾಖೆಗಳು ಒಗ್ಗಟ್ಟಾಗಿ ಮನವಿ ಮಾಡಿವೆ.
ಚೀನಾ ಟೆಲಿಕಾಂ ಸೇವೆಗಳಿಂದಾಗಿ ರಾಷ್ಟ್ರೀಯ ಭದ್ರತೆ ಹಾಗೂ ಕಾನೂನು ಜಾರಿಯಲ್ಲಿ ಸ್ವಲ್ಪ ಮಟ್ಟಿಗೆ ಗೊಂದಲಗಳಾಗುತ್ತಿರುವುದರಿಂದ ಈ ನಿರ್ಧಾರ ತೆಗೆದುಕೊಳ್ಳಲಾಗುತ್ತಿದೆ ಎಂದು ಇಲಾಖೆಗಳು ಸ್ಪಷ್ಟನೆ ನೀಡಿವೆ. ಈಗಾಗಲೇ ಕೊರೊನಾ ವಿಚಾರಕ್ಕೆ ಚೀನಾದ ವಿರುದ್ಧ ಅಮೆರಿಕ ಆಕ್ರೋಶ ವ್ಯಕ್ತಪಡಿಸುತ್ತಿದೆ. ಈ ನಿರ್ಧಾರದಿಂದ ಚೀನಾ ಮತ್ತಷ್ಟು ಸಂಕಷ್ಟಕ್ಕೆ ಸಿಲುಕಲಿದೆ.