ಕರ್ನಾಟಕ

karnataka

ETV Bharat / bharat

ವಿಶೇಷ ಅಂಕಣ: ಕೋವಿಡ್ ಸೋಂಕಿತ ಗರ್ಭಿಣಿಯರ ಮಾಸುಚೀಲದಲ್ಲಿ ಗಾಯಗಳು, ಬೆಚ್ಚಿಬೀಳಿಸಿದೆ ಈ ಅಧ್ಯಯನ - ಕೋವಿಡ್ ಸೋಂಕಿತ ಗರ್ಭಿಣಿ

ಅಮೆರಿಕದ ನಾರ್ತ್ ವೆಸ್ಟರ್ನ್ ಯೂನಿವರ್ಸಿಟಿ ನಡೆಸಿರುವ ಅಧ್ಯಯನವೊಂದರಲ್ಲಿ 16 ಮಂದಿ ಕೋವಿಡ್-19 ಸೋಂಕಿತ ಗರ್ಭಿಣಿಯರ ಮಾಸುಚೀಲದಲ್ಲಿ (ಪ್ಲಾಸೆಂಟಾ) ಗಾಯಗಳು ಉಂಟಾಗಿರುವುದು ಕಂಡು ಬಂದಿದೆ. ಗರ್ಭಿಣಿಯರು ಕೋವಿಡ್ ಸೋಂಕಿತರೆಂದು ದೃಢಪಟ್ಟಲ್ಲಿ ಅವರಿಗೆ ವಿಶೇಷ ಚಿಕಿತ್ಸೆಯನ್ನೇ ನೀಡಬೇಕಾಗುತ್ತದೆ ಎಂಬುದು ಇದರಿಂದ ವಿದಿತವಾಗಿದೆ.

pregnant COVID-19 patients
ಕೋವಿಡ್ ಸೋಂಕಿತ ಗರ್ಭಿಣಿ

By

Published : May 28, 2020, 11:07 AM IST

ನ್ಯೂಯಾರ್ಕ್:ಕೋವಿಡ್-19 ಸೋಂಕಿತ ಗರ್ಭಿಣಿಯರ ಚಿಕಿತ್ಸೆಯ ಮೇಲೆ ಪರಿಣಾಮ ಬೀರುವ ಅಧ್ಯಯನವೊಂದನ್ನು ಅಮೆರಿಕದ ವಿಶ್ವವಿದ್ಯಾಲಯವೊಂದು ನಡೆಸಿದೆ. ಈ ಹೊಸ ಅಧ್ಯಯನದಲ್ಲಿ ಕೊರೊನಾ ವೈರಾಣು ಸೋಂಕಿತ 16 ಮಂದಿ ಗರ್ಭಿಣಿ ಮಹಿಳೆಯರ ಮಾಸು ಚೀಲದಲ್ಲಿ ಗಾಯಗಳು ಉಂಟಾಗಿರುವುದು ಕಂಡುಬಂದಿದೆ.

ಶಿಕಾಗೋದಲ್ಲಿರುವ ನಾರ್ತ್ ವೆಸ್ಟರ್ನ್ ಯೂನಿವರ್ಸಿಟಿ ನಡೆಸಿರುವ ಈ ಅಧ್ಯಯನದ ಫಲಿತಾಂಶವು ಅಮೆರಿಕನ್ ಜರ್ನಲ್ ಆಫ್ ಕ್ಲಿನಿಕಲ್ ಪ್ಯಾಥಾಲಜಿ ಎಂಬ ಪತ್ರಿಕೆಯಲ್ಲಿ ಪ್ರಕಟಗೊಂಡಿದೆ. ಕೋವಿಡ್-19 ರೋಗ ಪೀಡಿತ ರೋಗಿಗಳ ಪೈಕಿ ಗರ್ಭಿಣಿಯರ ಮಾಸು ಚೀಲಗಳನ್ನು ಅಧ್ಯಯನಕ್ಕೆ ಒಳಪಡಿಸಿರುವ ಅತಿದೊಡ್ಡ ಅಧ್ಯಯನ ಇದಾಗಿದೆ. 16 ರೋಗಿಗಳ ಪೈಕಿ 15 ಮಂದಿ ಆರೋಗ್ಯವಂತ ಶಿಶುಗಳಿಗೆ ಜನ್ಮ ನೀಡಿದ್ದಾರೆ. ಒಬ್ಬ ಮಹಿಳೆಗೆ ಗರ್ಭಪಾತವಾಗಿದೆ.

ಆದರೆ ಇಷ್ಟೂ ಜನ ಮಹಿಳೆಯರ ಮಕ್ಕಳಲ್ಲಿ ಯಾವೊಂದು ಮಗುವಿಗೂ ಕೊರೊನಾ ವೈರಾಣು ಸೋಂಕು ಹರಡಿಲ್ಲ ಎಂಬುದು ಸಮಾಧಾನದ ಸಂಗತಿ. ಈ ಪ್ರಕರಣಗಳಲ್ಲಿ ಸೋಂಕಿತರ ಮಾಸು ಚೀಲಗಳಲ್ಲಿ ಗಾಯಗಳು ಕಂಡು ಬಂದಿದ್ದೊಂದು ವಿಚಿತ್ರ ಸಂಗತಿ ಎಂದು ಸಂಶೋಧಕರು ಹೇಳಿದ್ದಾರೆ. ಇವುಗಳಲ್ಲಿ ಹೆಚ್ಚಿನ ಮಹಿಳೆಯರು ಪೂರ್ಣಾವಧಿ ಪೂರೈಸಿದ ನಂತರದಲ್ಲಿ ಸಹಜ ಹೆರಿಗೆಯಲ್ಲಿ ಮಕ್ಕಳನ್ನು ಹೆತ್ತಿದ್ದಾರೆ. ಅಂದರೆ ಕೊವಿಡ್ ರೋಗದ ಸೋಂಕು ತಗಲಿದ ಗರ್ಭಿಣಿ ಮಹಿಳೆಯರನ್ನು ಇತರೆ ರೋಗಿಗಳಿಗಿಂತಲೂ ಸೂಕ್ಷ್ಮವಾಗಿ ಗಮನಿಸಬೇಕಾಗಿದೆ.

ತುಂಬಾ ಭಯ ಪಡುವಂತಹುದೇನೂ ಇಲ್ಲ. ಆದರೂ ಈ ಅಧ್ಯಯನ ಫಲಿತಗಳು ನನ್ನಲ್ಲಿ ಕಳವಳವನ್ನು ಉಂಟುಮಾಡಿವೆ, ಎನ್ನುತ್ತಾರೆ ಅಧ್ಯಯನದಲ್ಲಿ ಪಾಲ್ಗೊಂಡಿರುವ ಡಾ.ಎಮಿಲಿ ಮಿಲ್ಲರ್. ವರದಿಗಳ ಪ್ರಕಾರ, ಈ ಮಹಿಳೆಯರ ಮಾಸುಚೀಲಗಳಲ್ಲಿನ ಅಸಹಜತೆಗಳಲ್ಲಿ ರಕ್ತ ಹೆಪ್ಪುಗಟ್ಟಿರುವ ಮತ್ತು ಅಸಹಜ ರಕ್ತನಾಳಗಳಿರುವುದು ಕಂಡುಬಂದಿದೆ. ಮಾಸುಚೀಲಗಳು ಗರ್ಭಕೋಶಕ್ಕೆ ಸಹಜ ಕಿಂಡಿಗಳಾಗಿ ಕೆಲಸ ಮಾಡುವುದರಿಂದ ಈ ಬೆಳವಣಿಗೆ ಕಳವಳ ಮೂಡಿಸಿದೆ.

16 ಮಹಿಳೆಯರ ಪೈಕಿ ಕೇವಲ 4 ಮಹಿಳೆಯರು ಮಾತ್ರ ಕೊವಿಡ್ ರೋಗ ಲಕ್ಷಣಗಳು ಕಾಣಿಸಿಕೊಂಡು ಬಂದವರಾಗಿದ್ದರಲ್ಲದೇ ಅವರಲ್ಲಿ ಹೆರಿಗೆಗೂ ಮುಂಚಿತವಾಗಿ ಕೊರೊನಾ ಪಾಸಿಟಿವ್ ಎಂದು ದೃಢವಾಗಿತ್ತು. ಉಳಿದವರಲ್ಲಿ ಯಾವುದೇ ರೋಗ ಲಕ್ಷಣಗಳು ಕಾಣಿಸಿಕೊಂಡಿರಲಿಲ್ಲ. ಅವರು ಹೆರಿಗೆಗೆ ಎಂದು ಬಂದಾಗ ಪರೀಕ್ಷೆ ಮಾಡಿದ ಮೇಲಷ್ಟೇ ಸೋಂಕಿತರು ಎಂದು ತಿಳಿದಿತ್ತು. ಐವರು ಮಹಿಳೆಯರಲ್ಲಂತೂ ಯಾವುದೇ ರೋಗ ಲಕ್ಷಣಗಳೂ ಕಂಡು ಬಂದಿರಲಿಲ್ಲ.

ABOUT THE AUTHOR

...view details