ಬುಲಂದ್‌ಶಹರ್ (ಉತ್ತರ ಪ್ರದೇಶ):ಉತ್ತರಪ್ರದೇಶದ ಬುಲಂದ್ಶಹರ್ನಲ್ಲಿ ನಡೆದ ರಸ್ತೆ ಅಪಘಾತದಲ್ಲಿಅಮೆರಿಕದ ಮ್ಯಾಸಚೂಸೆಟ್ಸ್‌ನ ಬಾಬ್ಸನ್ ಕಾಲೇಜಿನ ಹದಿಹರೆಯದ ವಿದ್ಯಾರ್ಥಿನಿ ಮೃತಪಟ್ಟಿದ್ದಾರೆ.
ಸುದಿಕ್ಷಾ ಭತಿ ಮೃತ ವಿದ್ಯಾರ್ಥಿನಿ. ರಜಾ ದಿನಗಳನ್ನು ಕಳೆಯಲು ಭಾರತಕ್ಕೆ ಬಂದಿದ್ದ ಆಕೆ, ಆಗಸ್ಟ್ 20ರಂದು ಅಮೆರಿಕಕ್ಕೆ ಮರಳಬೇಕಿತ್ತು. ಯುವತಿ ದ್ವಿಚಕ್ರ ವಾಹನದಲ್ಲಿ ಬುಲಂದ್‌ಶಹರ್‌ಗೆ ಚಿಕ್ಕಪ್ಪನೊಂದಿಗೆ ತೆರಳುತ್ತಿದ್ದಾಗ ಈ ಘಟನೆ ಸಂಭವಿಸಿದೆ.
ಸಿಕಂದ್ರಬಾದ್‌ನಲ್ಲಿ ತನ್ನ ಚಿಕ್ಕಪ್ಪ ಮನೋಜ್ ಭತಿ ಅವರೊಂದಿಗೆ ಸಂಬಂಧಿಕರನ್ನು ಭೇಟಿಯಾಗಲು ಹೋಗುತ್ತಿದ್ದಾಗ ಸುದಿಕ್ಷಾ ಅವರನ್ನು ತಂಡವೊಂದು ಈವ್ ಟೀಸಿಂಗ್ ಮಾಡುತ್ತಾ ಬೆನ್ನಟ್ಟಿದೆ ಎಂದು ಆರೋಪಿಸಲಾಗಿದೆ. ಕೋವಿಡ್-19 ರೋಗದಿಂದಾಗಿ ರಜೆಯಲ್ಲಿ ಬುಲಂದ್ಶಹರ್ನಲ್ಲಿ ಇದ್ದಳು.
ಆಕೆ ಬರುತ್ತಿದ್ದಾಗ ಕೆಲ ಕಿಡಿಗೇಡಿಗಳು ಆಕೆಯ ಬಗ್ಗೆ ಕಾಮೆಂಟ್ಗಳನ್ನು ನೀಡುತ್ತಿದ್ದರು. ಅವಳನ್ನು ಮೆಚ್ಚಿಸಲು ಅವರ ವಾಹನವನ್ನು ಹಿಂದಿಕ್ಕಲು ಪ್ರಯತ್ನಿಸುತ್ತಿದ್ದರು. ಇದ್ದಕ್ಕಿದ್ದಂತೆ, ಅವರ ಬುಲೆಟ್ ಬೈಕ್ ಸುದೀಕ್ಷಾ ಸ್ಕೂಟಿಗೆ ಡಿಕ್ಕಿ ಹೊಡೆಯಿತು. ಆಗ ಸ್ಥಳದಲ್ಲೇ ಸುದೀಕ್ಷಾ ಮೃತಪಟ್ಟಳು ಎಂದು ಮತ್ತೊಬ್ಬ ಚಿಕ್ಕಪ್ಪ ಸತ್ಯೇಂದ್ರ ಭತಿ ಹೇಳಿದರು.
ರಾಜ್ಯ ಸರ್ಕಾರದ ವಕ್ತಾರರು ಈ ಘಟನೆಯಲ್ಲಿ ಈವ್ ಟೀಸಿಂಗ್ ನಡೆದಿಲ್ಲ ಎಂದು ಹೇಳಿದ್ದಾರೆ. ಮತ್ತು ಸಂತ್ರಸ್ತೆಯ ಕುಟುಂಬವು ಅಂತಹ ಯಾವುದೇ ದೂರು ನೀಡಿಲ್ಲ ಎಂದು ಹೇಳಿದರು. ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ತನಿಖೆ ನಡೆಯುತ್ತಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ (ನಗರ) ಅತುಲ್ ಶ್ರೀವಾಸ್ತವ ತಿಳಿಸಿದ್ದಾರೆ.
ಬಹುಜನ ಸಮಾಜ ಪಕ್ಷದ ಅಧ್ಯಕ್ಷೆ ಮಾಯಾವತಿ ಈ ಘಟನೆಯನ್ನು ಖಂಡಿಸಿದ್ದು, ಅಪರಾಧಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಟ್ವೀಟ್ ಮೂಲಕ ಒತ್ತಾಯಿಸಿದ್ದಾರೆ. ತನ್ನ ಚಿಕ್ಕಪ್ಪನೊಂದಿಗೆ ಬೈಕ್‌ನಲ್ಲಿ ಹೋಗುತ್ತಿದ್ದ ಸುದೀಕ್ಷಾ ಈವ್-ಟೀಸಿಂಗ್‌ನಿಂದಾಗಿ ಪ್ರಾಣ ಕಳೆದುಕೊಂಡಳು. ಇದು ಅತ್ಯಂತ ದುಃಖಕರ, ಮುಜುಗರ ಮತ್ತು ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.