ನವದೆಹಲಿ: ಎರಡು ದಿನಗಳ ಭಾರತದ ಪ್ರವಾಸದಲ್ಲಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಹಮದಾಬಾದ್ನಲ್ಲಿನ ನಮಸ್ತೆ ಟ್ರಂಪ್ ಹಾಗೂ ಆಗ್ರಾದ ತಾಜ್ಮಹಲ್ ಭೇಟಿ ನಂತರ ಇದೀಗ ದೆಹಲಿಗೆ ಆಗಮಿಸಿದ್ದಾರೆ.
ಅಹಮದಾಬಾದ್, ಆಗ್ರಾ ನಂತರ ದೆಹಲಿ ತಲುಪಿದ ಟ್ರಂಪ್! - ದೆಹಲಿಯಲ್ಲಿ ಡೊನಾಲ್ಡ್ ಟ್ರಂಪ್
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ದೆಹಲಿಗೆ ಆಗಮಿಸಿದ್ದು, ನಾಳೆ ಮಹತ್ವದ ಒಪ್ಪಂದಗಳಿಗೆ ಭಾರತದೊಂದಿಗೆ ಸಹಿ ಹಾಕಲಿದ್ದಾರೆ.
![ಅಹಮದಾಬಾದ್, ಆಗ್ರಾ ನಂತರ ದೆಹಲಿ ತಲುಪಿದ ಟ್ರಂಪ್! US President Donald Trump lands in Delhi](https://etvbharatimages.akamaized.net/etvbharat/prod-images/768-512-6190383-thumbnail-3x2-wfdfdf.jpg)
ಇಂದಿನ ಕಾರ್ಯಕ್ರಮಗಳು ಮುಕ್ತಾಯಗೊಂಡಿರುವ ಕಾರಣ, ನಾಳೆ ರಾಷ್ಟ್ರಪತಿ ಭವನಕ್ಕೆ ಡೊನಾಲ್ಡ್ ಟ್ರಂಪ್ ಭೇಟಿ ನೀಡಲಿದ್ದು, ಈ ವೇಳೆ, ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರೊಂದಿಗೆ ಕೆಲಹೊತ್ತು ಸಮಾಲೋಚನೆ ನಡೆಸಲಿದ್ದಾರೆ. ಇದೇ ವೇಳೆ, ಔತಣಕೂಟ ಕಾರ್ಯಕ್ರಮ ಸಹ ಏರ್ಪಾಡು ಮಾಡಲಾಗಿದೆ.
ದೆಹಲಿಯಲ್ಲಿ ವಾಸ್ತವ್ಯ ಹೂಡಿರುವ ಡೊನಾಲ್ಡ್ ಟ್ರಂಪ್ಗೆ ಭಾರತದ ಶೈಲಿಯಲ್ಲೇ ಅಡುಗೆ ತಯಾರು ಮಾಡಲಿದ್ದು, ರೋಟಿ, ವೆಜ್ ಬಿರಿಯಾನಿ, ಮಾಂಸಾಹಾರ, ಮಟನ್ ಬಿರಿಯಾನಿ, ಕೋಸುಗಡ್ಡ ಸಮೋಸಾ ಜತೆಗೆ ಐಸ್ಕ್ರೀಮ್, ಲೆಮನ್ ಸೂಪ್ ಸಹ ತಯಾರು ಮಾಡಲಾಗಿದೆ. ಉಭಯ ದೇಶಗಳ ನಡುವೆ ನಾಳೆ ರಕ್ಷಣೆ, ಹೆಲಿಕಾಪ್ಟರ್ ಸೇರಿದಂತೆ ಮಹತ್ವದ ದ್ವಿಪಕ್ಷೀಯ ಒಪ್ಪಂದ ಸಹ ಏರ್ಪಡಲಿವೆ.