ಕರ್ನಾಟಕ

karnataka

ETV Bharat / bharat

ಅಮೆರಿಕ ಕಂಪನಿಯಿಂದ ಭಾರತದಲ್ಲಿ ಕೊರೊನಾ ಔಷಧ ಮಾರಾಟಕ್ಕೆ ಅನುಮತಿ ಕೋರಿ ಅರ್ಜಿ! - ಕೊರೊನಾ ಸುದ್ದಿ

ಅಮೆರಿಕದ ದೈತ್ಯ ಔಷಧ ಕಂಪನಿ ಗಿಲ್ಯಾಡ್ ಸೈನ್ಸಸ್ ತನ್ನ ಆಂಟಿ-ವೈರಲ್ ಡ್ರಗ್ ರೆಮೆಡೆಸಿವಿರ್​ಗಾಗಿ ಮಾರ್ಕೆಟಿಂಗ್ ಅನುಮತಿ ಕೋರಿ ಭಾರತದ ಸೆಂಟ್ರಲ್ ಡ್ರಗ್ಸ್ ಸ್ಟ್ಯಾಂಡರ್ಡ್ ಕಂಟ್ರೋಲ್ ಆರ್ಗನೈಸೇಶನ್ (CDSCO) ಗೆ ಅರ್ಜಿ ಸಲ್ಲಿಸಿದೆ. ತಜ್ಞರ ಸಮಿತಿಯ ಶಿಫಾರಸಿನ ಮೇರೆಗೆ ಅರ್ಜಿಯನ್ನು ಪರಿಶೀಲಿಸಿ, ಸಂಸ್ಥೆ ಮುಂದಿನ ನಿರ್ಧಾರ ಕೈಗೊಳ್ಳಲಿದೆ.

drug
ಕೊರೊನಾ ಲಸಿಕೆ

By

Published : Jun 3, 2020, 6:48 PM IST

Updated : Jun 3, 2020, 10:32 PM IST

ನವದೆಹಲಿ:ಕೋವಿಡ್​-19ಗೆ ಚಿಕಿತ್ಸೆ ನೀಡುವ ಸಾಮರ್ಥ್ಯ ಇರುವ ಔಷಧ ಎಂದು ಹೇಳಲಾಗುತ್ತಿರುವ ಆಂಟಿ-ವೈರಲ್ ಡ್ರಗ್, ರೆಮೆಡೆಸಿವಿರ್ ಅನ್ನು ಭಾರತದಲ್ಲಿ ಮಾರ್ಕೆಟಿಂಗ್ ಮಾಡಲು ಅನುಮತಿ ಕೋರಿ ಭಾರತದ ಔಷಧ ನಿಯಂತ್ರಕ್ಕೆ ಅಮೆರಿಕದ ದೈತ್ಯ ಔಷಧ ಕಂಪನಿ ಗಿಲ್ಯಾಡ್ ಸೈನ್ಸಸ್ ಮನವಿ ಸಲ್ಲಿಸಿದೆ.

ಈ ಔಷಧದ ಪೇಟೆಂಟ್ ಹೊಂದಿರುವ ಗಿಲ್ಯಾಡ್ ಸೈನ್ಸಸ್, ರೆಮೆಡೆಸಿವಿರ್​ಗಾಗಿ ಪೂರ್ವ-ಕ್ಲಿನಿಕಲ್ ಮತ್ತು ಕ್ಲಿನಿಕಲ್ ಅಧ್ಯಯನಗಳ ಬಗ್ಗೆ ಸಂಪೂರ್ಣ ಡೇಟಾವನ್ನು ಹೊಂದಿದೆ ಎಂದು ಮೂಲಗಳು ತಿಳಿಸಿವೆ.

"ಕಂಪನಿಯು ಭಾರತದ ಕೇಂದ್ರೀಯ ಔಷಧಗಳ ಪ್ರಮಾಣಿತ ನಿಯಂತ್ರಣ ಸಂಸ್ಥೆ (CDSCO) ಗೆ ತನ್ನ ಆಂಟಿ-ವೈರಲ್ ಔಷಧ ರಿಮೆಡಿವಿರ್​ ಅನ್ನು ಭಾರತದಲ್ಲಿ ಮಾರ್ಕೆಟಿಂಗ್ ಮಾಡಲು ಅನುಮತಿ ಕೋರಿ ಅರ್ಜಿ ಸಲ್ಲಿಸಿದೆ. CDSCO ತಜ್ಞರ ಸಮಿತಿಯ ಸಹಾಯದಿಂದ ಸಂಸ್ಥೆ ಅರ್ಜಿಯನ್ನ ಪರಿಶೀಲಿಸುತ್ತದೆ. ಬಳಿಕ ತಜ್ಞರ ಸಮಿತಿಯ ಶಿಫಾರಸುಗಳನ್ನ ಆಧರಿಸಿ ಅಂತಿಮ ತೀರ್ಮಾನ ತೆಗೆದುಕೊಳ್ಳುತ್ತದೆ "ಎಂದು ಮೂಲವೊಂದು ತಿಳಿಸಿದೆ.

ಈ ಮಧ್ಯೆ, ಅಮೆರಿಕದಲ್ಲಿ ಆಸ್ಪತ್ರೆಗೆ ದಾಖಲಾದ ಕೊರೊನಾ ಸೋಂಕಿತ ರೋಗಿಗಳಿಗೆ ಚಿಕಿತ್ಸೆ ನೀಡಲು ಯುನೈಟೆಡ್ ಸ್ಟೇಟ್ಸ್ ಫುಡ್ ಅಂಡ್ ಡ್ರಗ್ ಅಡ್ಮಿನಿಸ್ಟ್ರೇಷನ್ (FDA) ಸಂಸ್ಥೆ ಈ ಔಷಧದ ತುರ್ತು ಬಳಕೆ ಅಧಿಕಾರ (EUA) ನೀಡಿದೆ. ಅಮೆರಿಕದ ಕ್ಲಿನಿಕಲ್ ಡೇಟಾದ ಆಧಾರದ ಮೇಲೆ ಮೇ. 7ರಂದು ಜಪಾನಿನ ಆರೋಗ್ಯ, ಕಾರ್ಮಿಕ ಮತ್ತು ಕಲ್ಯಾಣ ಸಚಿವಾಲಯವು ಅಸಾಧಾರಣ ಹಾದಿಯಲ್ಲಿ ಈ ಔಷಧಕ್ಕೆ ನಿಯಂತ್ರಕ ಅನುಮೋದನೆಯನ್ನು ನೀಡಿತು ಎಂದು ಮೂಲಗಳು ತಿಳಿಸಿವೆ. ಹೊಸ ಔಷಧಕ್ಕೆ USFDA ಅಥವಾ ಇನ್ನಾವುದೇ ಹೆಸರಾಂತ ನಿಯಂತ್ರಕರಿಂದ ನೀಡಲ್ಪಟ್ಟ ಅನುಮೋದನೆಗಳ ಆಧಾರದ ಮೇಲೆ, ಭಾರತೀಯ ನಿಯಂತ್ರಕವು ಕ್ಲಿನಿಕಲ್ ಟ್ರಯಲ್ ರೂಲ್ಸ್ 2019ರ ನಿಬಂಧನೆಗಳಿಗೆ ಅನುಗುಣವಾಗಿ ವಿಶೇಷ ಸಂದರ್ಭಗಳಲ್ಲಿ ಕ್ಲಿನಿಕಲ್ ಪ್ರಯೋಗಗಳನ್ನು ತ್ಯಜಿಸುವ ಮೂಲಕ ಔಷಧವನ್ನು ಅನುಮೋದಿಸಬಹುದು ಎಂದು ಈ ಬೆಳವಣಿಗೆಗಳ ಕುರಿತು ತಿಳಿದವರು ಹೇಳುತ್ತಾರೆ.

ರೆಮೆಡೆಸಿವಿರ್ ತಯಾರಿಸಲು ಮತ್ತು ಮಾರಾಟ ಮಾಡಲು ಅನುಮತಿ ಕೋರಿ ಭಾರತದ ಎರಡು ಔಷಧ ಕಂಪನಿಗಳಾದ ಸಿಪ್ಲಾ ಮತ್ತು ಹೆಟೆರೊ ಲ್ಯಾಬ್ಸ್ ಭಾರತೀಯ ಔಷಧ ನಿಯಂತ್ರಕಕ್ಕೆ ಅರ್ಜಿ ಸಲ್ಲಿಸಿದ ಬೆನ್ನಲ್ಲೇ ಈ ವಿಷಯ ಹೊರಬಿದ್ದಿದೆ. ಜೊತೆಗೆ ರೋಗಿಗಳಿಗೆ ಔಷಧ ವೇಗವಾಗಿ ದೊರೆಯುವಂತಾಗಲು ರೆಮೆಡೆಸಿವಿರ್ ಔಷಧಕ್ಕೆ ಕ್ಲಿನಿಕಲ್ ಟ್ರಯಲ್ ರದ್ದು ಮಾಡಿ ಅನುಮತಿ ಕೊಡುವಂತೆ ಕೋರಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಅವರ ಅರ್ಜಿಗಳು ಇನ್ನೂ ಪರಿಗಣನೆಯಲ್ಲಿವೆ ಎಂದು ಅಧಿಕಾರಿ ತಿಳಿಸಿದ್ದಾರೆ. ಗಿಲ್ಯಾಡ್ ಸೈನ್ಸಸ್ ಇಂಕ್ ಸಂಸ್ಥೆಯು ಭಾರತದ ಮೂರೂ ಪ್ರಮುಖ ಫಾರ್ಮಾ ಕಂಪನಿಗಳಾದ ಸಿಪ್ಲಾ, ಜುಬಿಲಂಟ್​​​ ಲೈಫ್ ಸೈನ್ಸಸ್ ಮತ್ತು ಹೆಟೆರೊ ಸೇರಿದಂತೆ ಫಾರ್ಮಾ ಸಂಸ್ಥೆಗಳೊಂದಿಗೆ ರೆಮೆಡೆಸಿವಿರ್ ತಯಾರಿಕೆ ಮತ್ತು ವಿತರಣೆಗಾಗಿ ವಿಶೇಷವಲ್ಲದ ಪರವಾನಗಿ ಒಪ್ಪಂದಗಳನ್ನು ಮಾಡಿಕೊಂಡಿದೆ. ಎಬೋಲಾ ಮಹಾಮಾರಿ ತಡೆಗೆ ಬಳಸಲಾದ ಆಂಟಿ-ವೈರಲ್ ಔಷದ ರಿಮೆಡಿಸಿವಿರ್, SARS-CoV-2 ವೈರಸ್ ತಡೆಯಬಹುದು ಮತ್ತು COVID-19 ಚಿಕಿತ್ಸೆಯಲ್ಲಿ ಅದರ ಪರಿಣಾಮಕಾರಿತ್ವದ ಕುರಿತಾದ ಸಂಶೋಧನೆಯು WHO ನ ಸಾಲಿಡಾರಿಟಿ ಟ್ರಯಲ್​ನ ಒಂದು ಭಾಗವಾಗಿದೆ ಎಂದು ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ ಈ ಹಿಂದೆಯೇ ಹೇಳಿದೆ.

ನ್ಯೂ ಇಂಗ್ಲೆಂಡ್ ಜರ್ನಲ್ ಆಫ್ ಮೆಡಿಸಿನ್‌ನಲ್ಲಿ ಇತ್ತೀಚೆಗೆ ಪ್ರಕಟವಾದ ಅಧ್ಯಯನದ ಪ್ರಕಾರ, ವೆಂಟಿಲೇಟರ್ ಬೆಂಬಲದಲ್ಲಿದ್ದ ಮೂವರು ವೈರಸ್ ಸೋಂಕಿತ ಗಂಭೀರ ಸ್ಥಿತಿಯಲ್ಲಿದ್ದ್ದ ರೋಗಿಗಳ ಪೈಕಿ ಇಬ್ಬರಲ್ಲಿ ರೆಮೆಡೆಸಿವಿರ್ ಅನ್ನು ನೀಡಿದಾಗ ಆರೋಗ್ಯ ಸುಧಾರಣೆಯ ಲಕ್ಷಣಗಳು ಕಂಡುಬಂದಿದೆ. ಭಾರತದಲ್ಲಿ ಮಾರ್ಕೆಟಿಂಗ್ ಆಗುವ ಮೊದಲು ಎಲ್ಲ ಹೊಸ ಔಷಧಗಳು ಕ್ಲಿನಿಕಲ್ ಟೆಸ್ಟ್​ಗೆ ಒಳಗಾಗಬೇಕಿದೆ. ಆದ್ರೆ, ಹೊಸ ಔಷಧ ಮತ್ತು ಕ್ಲಿನಿಕಲ್ ಟ್ರಯಲ್ ನಿಯಮ, 2019 ರಲ್ಲಿ ಕೆಲವು ಪರಿಚ್ಛೇಧಗಳನ್ನ ನೀಡಲಾಗಿದ್ದು, ಈಗಾಗಲೇ ಕೆಲವು ದೇಶಗಳಲ್ಲಿ ಅನುಮತಿ ಪಡೆದು ಮಾರಾಟ ಆಗುತ್ತಿರುವ ಔಷಧಕ್ಕೆ ಸ್ಥಳೀಯ ಹಂತ -3 ಕ್ಲಿನಿಕಲ್ ಪ್ರಯೋಗಗಳನ್ನು ಮನ್ನಾ ಮಾಡುವ ಅವಕಾಶವನ್ನು ಅನುಮೋದಿಸಲಾಗಿದೆ. ಇದು ಸಾರ್ವಜನಿಕ ಹಿತಾಸಕ್ತಿಗಾಗಿ ರಾಷ್ಟ್ರೀಯ ತುರ್ತುಸ್ಥಿತಿ ಅಥವಾ ಸಾಂಕ್ರಾಮಿಕ ರೋಗಗಳಂತಹ ಕೆಲವು ಷರತ್ತುಗಳಿಗೆ ಒಳಪಟ್ಟಿರುತ್ತದೆ.

Last Updated : Jun 3, 2020, 10:32 PM IST

ABOUT THE AUTHOR

...view details