ಕರ್ನಾಟಕ

karnataka

ETV Bharat / bharat

ಭಾರತ-ಅಮೆರಿಕಾ ವಾಣಿಜ್ಯ ಸಂಘರ್ಷ ಬಗೆಹರಿಸುತ್ತಾ ಮೈಕ್ ಪೊಂಪೆ ಭೇಟಿ? - ಪ್ರಧಾನಿ ಮೋದಿ

ಭಾರತ ಹಾಗೂ ಅಮೆರಿಕ ನಡುವೆ ವಾಣಿಜ್ಯ ವ್ಯವಹಾರದಲ್ಲಿ ಉದ್ಭವಿಸಿರುವ ಭಿನ್ನಮತದ ವೇಳೆ ಮೈಕ್ ಪೊಂಪೆ ಭಾರತಕ್ಕೆ ಆಗಮಿಸುತ್ತಿದ್ದಾರೆ.

ಮೈಕ್ ಪೊಂಪೆ

By

Published : Jun 25, 2019, 11:25 AM IST

ನವದೆಹಲಿ:ಉಭಯ ದೇಶಗಳ ನಡುವಿನ ವ್ಯಾಪಾರ ವಹಿವಾಟು ಸಂಬಂಧಿ ಭಿನ್ನಮತ, ಇರಾನ್ ಜೊತೆಗಿನ ಸಂಘರ್ಷದ ಮಧ್ಯೆಅಮೆರಿಕಾದ ವಿದೇಶಾಂಗ ಕಾರ್ಯದರ್ಶಿ ಮೈಕ್ ಪೊಂಪೆ ಇಂದು ಭಾರತಕ್ಕೆ ಆಗಮಿಸುತ್ತಿದ್ದಾರೆ.

ಬುಧವಾರದಂದು ಭಾರತದ ವಿದೇಶಾಂಗ ಸಚಿವ ಎಸ್​.ಜೈಶಂಕರ್​​ರನ್ನು ಭೇಟಿ ಮಾಡಲಿರುವ ಪೊಂಪೆ, ಕೆಲ ವಾರಗಳಲ್ಲಿ ಜಪಾನ್​ನಲ್ಲಿ ನಡೆಯಲಿರುವ ಜಿ20 ಶೃಂಗಸಭೆಯಲ್ಲಿ ಉಭಯ ದೇಶಗಳ ಪ್ರಧಾನಿಗಳ ಮಾತುಕತೆಗೆ ಮುನ್ನುಡಿ ಬರೆಯುವ ಸಾಧ್ಯತೆ ಇದೆ.

ಭಾರತ ಹಾಗೂ ಅಮೆರಿಕ ನಡುವೆ ವಾಣಿಜ್ಯ ವ್ಯವಹಾರದಲ್ಲಿ ಉದ್ಭವಿಸಿರುವ ಭಿನ್ನಮತವೂ ಈ ಭೇಟಿ ವೇಳೆ ಚರ್ಚೆಗೆ ಬರಲಿದೆ. ಎರಡೂ ದೇಶಗಳು ದೇಶೀಯ ಉತ್ಪನ್ನಗಳಿಗೆ ಹೆಚ್ಚಿನ ಒತ್ತು ನೀಡುತ್ತಿದ್ದು, ಮೋದಿ 'ಮೇಕ್ ಇನ್ ಇಂಡಿಯಾ' ಹೆಸರಿನಲ್ಲಿ ಅಭಿಯಾನ ನಡೆಸುತ್ತಿದ್ದರೆ ಅತ್ತ ಟ್ರಂಪ್ 'ಮೇಕ್ ಅಮೆರಿಕಾ ಗ್ರೇಟ್ ಅಗೇನ್' ಎನ್ನುವ ಅಭಿಯಾನಕ್ಕೆ ಚಾಲನೆ ನೀಡಿದ್ದಾರೆ.

ರಷ್ಯಾದಿಂದ ಭಾರತಕ್ಕೆ ಆಮದಾಗುತ್ತಿರುವ ಯುದ್ಧೋಪಕರಣಗಳ ಬಗ್ಗೆ ಅಮೆರಿಕಾ ಅಪಸ್ವರ ಎತ್ತಿದರೆ, ಹುವಾಯ್ ಟೆಕ್ನಾಲಜಿಗೆ ಅಮೆರಿಕಾ ಧನಸಹಾಯ ನೀಡಿದ್ದು, ಭಾರತದ ಕಣ್ಣು ಕೆಂಪಗಾಗಿಸಿದೆ. ಇದೇ ಸಂದರ್ಭದಲ್ಲಿ ಅಮೆರಿಕದ ವಿದೇಶಾಂಗ ಕಾರ್ಯದರ್ಶಿಗಳ ಭೇಟಿ ಕುತೂಹಲ ಮೂಡಿಸಿದೆ.

ABOUT THE AUTHOR

...view details