ಲಖನೌ (ಉತ್ತರ ಪ್ರದೇಶ): ಕೊರೊನಾ ವೈರಸ್ನಿಂದ ಲಾಕ್ಡೌನ್ ಘೋಷಣೆ ಮಾಡಲಾಗಿದ್ದು ಅನೆಕ ದಿನಗೂಲಿ ನೌಕರರು, ವಲಸೆ ಕಾರ್ಮಿಕರು ಕೆಲಸ ಇಲ್ಲದೆ ತಮ್ಮ ಹಳ್ಳಿಗಳಿಗೆ ತೆರಳಳುತ್ತಿದ್ದಾರೆ. ಇಂಥ ಸಮಯದಲ್ಲಿ ಅಮೆರಿಕ ಮೂಲದ ಜಾಗತಿಕ ಖಾಸಗಿ ಹಣಕಾಸು ಸಂಸ್ಥೆ 'ಯುಎಸ್ ಕ್ಯಾಪಿಟಲ್ ಗ್ಲೋಬಲ್' ಗ್ರಾಮೀಣ ಭಾರತದ ಜನರಿಗೆ ಆಹಾರ ಒದಗಿಸುವ ತಳಮಟ್ಟದ ಸಂಸ್ಥೆಗಳಿಗೆ ಆರ್ಥಿಕವಾಗಿ ಸಹಾಯ ಮಾಡುತ್ತಿದೆ.
ಕ್ಯಾಲಿಫೋರ್ನಿಯಾ ಮೂಲದ ಬ್ರಜ್ ಭೂಮಿ ಗ್ರೂಪ್ ಫೌಂಡೇಶನ್ ಮೂಲಕ ಯುಎಸ್ ಕ್ಯಾಪಿಟಲ್ ಗ್ಲೋಬಲ್, ಉತ್ತರ ಪ್ರದೇಶದ ರಾಧೆ ಕುಂಜ್ ಎಂಬ ಆಶ್ರಮಕ್ಕೆ ಸಹಾಯ ಮಾಡುತ್ತಿದೆ. ಈ ಆಶ್ರಮ ಯಾವುದೇ ಲಾಭದ ಉದ್ದೇಶವಿಲ್ಲದೆ ಕಷ್ಟದಲ್ಲಿ ಸಿಲುಕಿರುವ ಜನರ ಬೆಂಬಲಕ್ಕೆ ನಿಂತಿದೆ.