ಕರ್ನಾಟಕ

karnataka

ETV Bharat / bharat

ದಕ್ಷಿಣ ಚೀನಾ ಸಮುದ್ರದಲ್ಲಿ ಡ್ರ್ಯಾಗನ್​​ ಕ್ಯಾತೆ: ಚೀನಿಯರ ಮೇಲೆ ವೀಸಾ ನಿರ್ಬಂಧ ಹೇರಿದ ಅಮೆರಿಕ! - visa restrictions

ದಕ್ಷಿಣ ಚೀನಾ ಸಮುದ್ರದಲ್ಲಿನ ವಿವಾದಾತ್ಮಕವಾದ ದೊಡ್ಡ ಪ್ರಮಾಣದ ಸುಧಾರಣೆ, ನಿರ್ಮಾಣ ಅಥವಾ ಮಿಲಿಟರೀಕರಣಕ್ಕೆ ಜವಾಬ್ದಾರರಾಗಿರುವ ಹಾಗೂ ಇದಕ್ಕೆ ಸಹಕರಿಸಿದ ಚೀನಾದ ವ್ಯಕ್ತಿಗಳ ಮೇಲೆ ಅಮೆರಿಕ ವೀಸಾ ನಿರ್ಬಂಧ ಹೊರಡಿಸಿದೆ.

SCS
ಎಸ್​ಸಿಎಸ್​

By

Published : Aug 26, 2020, 10:35 PM IST

ಹೈದರಾಬಾದ್​: ದಕ್ಷಿಣ ಚೀನಾ ಸಮುದ್ರದ ಮೇಲೆ ಚೀನಿಯರ ಪಾರುಪತ್ಯವನ್ನು ಪ್ರಶ್ನಿಸಿರುವ ಅಮೆರಿಕ, ಈ ವಿವಾದಾತ್ಮಕ ಸಾಗರ ಪ್ರದೇಶದಲ್ಲಿ ಜವಾಬ್ದಾರರಾಗಿರುವ ಹಾಗೂ ಇದಕ್ಕೆ ಸಹಕರಿಸುತ್ತಿರುವ ಚೀನಾದ ನಾಗರಿಕರ ಮೇಲೆ ವೀಸಾ ನಿರ್ಬಂಧಗಳನ್ನು ಘೋಷಿಸಿದೆ.

ದಕ್ಷಿಣ ಚೀನಾ ಸಮುದ್ರದಲ್ಲಿನ ವಿವಾದಾತ್ಮಕವಾದ ದೊಡ್ಡ ಪ್ರಮಾಣದ ಸುಧಾರಣೆ, ನಿರ್ಮಾಣ ಅಥವಾ ಮಿಲಿಟರೀಕರಣಕ್ಕೆ ಜವಾಬ್ದಾರರಾಗಿರುವ ಹಾಗೂ ಇದಕ್ಕೆ ಸಹಕರಿಸಿದ ಚೀನಾದ ವ್ಯಕ್ತಿಗಳ ಮೇಲೆ ಅಮೆರಿಕ ವೀಸಾ ನಿರ್ಬಂಧಗಳನ್ನು ಹೊರಡಿಸಿದೆ.

ಆಗ್ನೇಯ ಏಷ್ಯಾದಲ್ಲಿ ಬೀಜಿಂಗ್​ನ ಬಲವಂತದ ದಬ್ಬಾಳಿಕೆಯಲ್ಲಿ ಭಾಗಿಯಾಗಿರುವ ಚೀನಾದ ವ್ಯಕ್ತಿಗಳು ಇನ್ಮುಂದೆ ಪ್ರವೇಶಿಸುವಂತಿಲ್ಲ. ಈ ತಕ್ಷಣದಿಂದ ವೀಸಾ ನಿರ್ಬಂಧಗಳಿಗೆ ಒಳಪಟ್ಟಿರುತ್ತದೆ ಎಂದು ವಿದೇಶಾಂಗ ಕಾರ್ಯದರ್ಶಿ ಮೈಕ್ ಪೊಂಪಿಯೊ ಹೇಳಿದ್ದಾರೆ.

ವಾಷಿಂಗ್ಟನ್ ಮತ್ತು ಬೀಜಿಂಗ್ ನಡುವಿನ ಉದ್ವಿಗ್ನತೆ ಸಾರ್ವಕಾಲಿಕ ಗರಿಷ್ಠ ಮಟ್ಟ ತಲುಪಿದೆ. ಎರಡೂ ಕಡೆಯವರು ಪರಸ್ಪರರ ವಿರುದ್ಧ ಹೊಸ ನಿರ್ಬಂಧಗಳನ್ನು ಘೋಷಿಸಿದ್ದಾರೆ. ಕಮ್ಯುನಿಸ್ಟ್ ಪಕ್ಷದ ಪ್ರಮುಖ ವ್ಯಕ್ತಿಗಳನ್ನು ಒಳಗೊಂಡ ಕೆಲವು ಚೀನಾದ ವ್ಯಕ್ತಿಗಳ ವಿರುದ್ಧ ಅಮೆರಿಕ, ಕ್ಸಿನ್‌ಜಿಯಾಂಗ್ ಮತ್ತು ಟಿಬೆಟ್ ಮೇಲೆ ಅನೇಕ ನಿರ್ಬಂಧಗಳನ್ನು ಘೋಷಿಸಿತ್ತು. ಇದಕ್ಕೆ ಪ್ರತಿಯಾಗಿ, ಬೀಜಿಂಗ್ ಕೂಡ ಇದೇ ರೀತಿಯ ನಿರ್ಬಂಧಗಳನ್ನು ಘೋಷಿಸಿದೆ. ಇದರಲ್ಲಿ ಕೆಲವು ಯುಎಸ್ ಸೆನೆಟರ್‌ಗಳು ಕ್ಸಿನ್‌ಜಿಯಾಂಗ್‌ನಲ್ಲಿ ಅಲ್ಪಸಂಖ್ಯಾತರ ಕಿರುಕುಳದ ಬಗ್ಗೆ ಧ್ವನಿ ಎತ್ತಿದ್ದರು.

ABOUT THE AUTHOR

...view details