ವಾಷಿಂಗ್ಟನ್ (ಅಮೆರಿಕ) : ಅಮೆರಿಕ ದೇಶ ಭಾರತದಲ್ಲಿರುವ ತನ್ನ ಪ್ರಜೆಗಳನ್ನು ವಾಪಸ್ ಕರೆಸಿಕೊಳ್ಳಲು ತಯಾರಿ ನಡೆಸಿದೆ. ಇದಕ್ಕಾಗಿ ಭಾರತ ಸರ್ಕಾರದ ಸಹಾಯವನ್ನು ಕೇಳಿದೆ. ಭಾರತದಲ್ಲಿ ಈಗ ಸದ್ಯಕ್ಕೆ ಲಾಕ್ಡೌನ್ ಘೋಷಣೆಯಾಗಿದ್ದು ಕೇಂದ್ರ ಸರ್ಕಾರದ ನಿರ್ಧಾರಕ್ಕೆ ಅಮೆರಿಕದ ರಾಜತಾಂತ್ರಿಕ ಅಧಿಕಾರಿಯೊಬ್ಬರು ಶ್ಲಾಘಿಸಿದ್ದಾರೆ.
ಭಾರತದಿಂದ ಮಾತ್ರವಲ್ಲದೇ ವಿಶ್ವದ ಸುಮಾರು 60 ರಾಷ್ಟ್ರಗಳಿಂದ ತನ್ನ ಪ್ರಜೆಗಳನ್ನು ಕರೆಸಿಕೊಳ್ಳಲು ತಯಾರಿ ನಡೆಸುತ್ತಿದೆ. ಸುಮಾರು 30 ಸಾವಿರ ಅಮೆರಿಕ ಪ್ರಜೆಗಳನ್ನು ಕರೆಸಿಕೊಳ್ಳಲು 350 ವಿಮಾನಗಳನ್ನು ಕೂಡಾ ಸಜ್ಜುಗೊಳಿಸಲಾಗುತ್ತಿದೆ. ಭಾರತದಲ್ಲಿ ಸುಮಾರು 170 ಅಮೆರಿಕನ್ ಪ್ರಜೆಗಳನ್ನು ವಾಪಸ್ ಕರೆಸಿಕೊಳ್ಳುವ ಪ್ರಕ್ರಿಯೆ ಶುರುಮಾಡಿದ್ದೇವೆ ಎಂದು ರಾಯಭಾರ ವ್ಯವಹಾರಗಳ ಪ್ರಿನ್ಸಿಪಲ್ ಡೆಪ್ಯುಟಿ ಅಸಿಸ್ಟೆಂಟ್ ಸೆಕ್ರೆಟರಿ ಇಯಾನ್ ಬ್ರೌನ್ಲಿ ಕಾನ್ಫರೆನ್ಸ್ ವೇಳೆ ತಿಳಿಸಿದ್ದಾರೆ.