ಮೆಲ್ಬೋರ್ನ್(ಆಸ್ಟ್ರೇಲಿಯಾ): ಎಟಿಪಿ ಶ್ರೇಯಾಂಕದಲ್ಲಿ ವಿಶ್ವದ ಐದನೇ ಶ್ರೇಯಾಂಕದ ಟೆನಿಸ್ ಆಟಗಾರ ಡೊಮಿನಿಕ್ ಥೀಮ್ ಬುಧವಾರ ಆಸ್ಟ್ರೇಲಿಯನ್ ಓಪನ್‌ನಲ್ಲಿ ಬಿರುಗಾಳಿಯನ್ನೇ ಎಬ್ಬಿಸಿದ್ದಾರೆ.
ಆಸ್ಟ್ರೇಲಿಯನ್ ಓಪನ್ ಟೂರ್ನಿಯಿಂದ ನಡಾಲ್ ಔಟ್! - ಡೊಮಿನಿಚ್ ಥೀಮ್ ಆಸ್ಟ್ರೇಲಿಯನ್ ಓಪನ್ ಸೆಮಿಫೈನಲ್ಗೆ
ವಿಶ್ವದ ಐದನೇ ಶ್ರೇಯಾಂಕದ ಟೆನಿಸ್ ಆಟಗಾರ ಡೊಮಿನಿಕ್ ಥೀಮ್ ಬುಧವಾರ ಆಸ್ಟ್ರೇಲಿಯನ್ ಓಪನ್‌ನಲ್ಲಿ ಮಹತ್ವದ ಸಾಧನೆ ಮಾಡಿದ್ದಾರೆ.
ಆಸ್ಟ್ರೇಲಿಯನ್ ಓಪನ್ ಟೂರ್ನಿಯಲ್ಲಿ ವಿಶ್ವದ ನಂ .1 ಆಟಗಾರ ರಫೆಲ್ ನಡಾಲ್ ಅವರನ್ನು 7-6 (3), 7-6 (4), 4-6, 7-6 (6) ಸೆಟ್ಗಳ ಅಂತರದಲ್ಲಿ ಸೋಲಿಸಿ ಥೀಮ್ ಸೆಮಿಫೈನಲ್ ತಲುಪಿದ್ದಾರೆ.ಕ್ವಾರ್ಟರ್-ಫೈನಲ್ ಹಣಾಹಣಿ ವೇಳೆ ಮೊದಲ ಸೆಟ್ನಲ್ಲಿ ಮುಗ್ಗರಿಸಿದರೂ ಥೀಮ್ ವಿರಾಮದ ಬಳಿಕ ಪುಟಿದೆದ್ದು, ಮೂರನೇ ಸೆಟ್‌ನ ಅಂತಿಮ ಗೇಮ್‌ನಲ್ಲಿ ನಡಾಲ್ ಅವರನ್ನು ಸೋಲಿಸಿದರು. ನಡಾಲ್ ವಿರುದ್ಧ ಗೆದ್ದಿರುವ ಥೀಮ್ ಮತ್ತೋರ್ವ ಸೆಮಿಫೈನಲಿಸ್ಟ್ ಜರ್ಮನ್ ಟೆನಿಸ್ ಆಟಗಾರ ಅಲೆಕ್ಸಾಂಡರ್ ಜ್ವೆರೆವ್ ಅವ ಎದುರಿಸಲಿದ್ದಾರೆ.
ಇನ್ನು ಜ್ವೆರೆವ್ ಮಾಜಿ ಚಾಂಪಿಯನ್ ಸ್ಟಾನ್ ವಾವ್ರಿಂಕಾ ಅವರನ್ನು 1-6, 6-3, 6-4, 6-2 ಸೆಟ್‌ಗಳಿಂದ ಸೋಲಿಸಿ ತಮ್ಮ ಚೊಚ್ಚಲ ಗ್ರ್ಯಾಂಡ್‌ಸ್ಲಾಮ್ ಸೆಮಿಫೈನಲ್ ತಲುಪಿದ್ದಾರೆ.